21.5 C
Bengaluru
Monday, December 23, 2024

WhatsApp Account: ಒಂದೇ ಸ್ಮಾರ್ಟ್‌ಫೋನಿನಲ್ಲಿ 2 ವಾಟ್ಸಪ್ ಖಾತೆ

WhatsApp account : ನವದೆಹಲಿ: ಇದು ಸ್ಮಾರ್ಟ್ ಫೋನ್ ಜಮಾನ. ಬಹುತೇಕ ಸ್ಮಾರ್ಟ್ಫೋನ್ಗಳು ಡ್ಯುಯಲ್ ಆಪ್ ಆಯ್ಕೆಯನ್ನು ಹೊಂದಿವೆ. ಇಂತಹ ಸಂದರ್ಭದಲ್ಲಿ ಎರಡು ವಾಟ್ಸ್‌ಆಪ್ ಬಳಸಲು ಸಾಧ್ಯವಿದೆಯೇ ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಫೇಸ್‌ಬುಕ್ ಮಾಲೀಕತ್ವದ ವಾಟ್ಸ್ಆ್ಯಪ್ ಅನ್ನು ಇಂದು ಕೋಟ್ಯಾಂತರ ಜನರು ಬಳಸುತ್ತಿದ್ದಾರೆ. ವಾಟ್ಸ್ಆ್ಯಪ್ ಮೆಸೇಜಿಂಗ್ ಸೇವೆ ಜೊತೆಗೆ ವಿಡಿಯೋ ಮತ್ತು ಆಡಿಯೋ ಕರೆಗಳ ಸೌಲಭ್ಯವನ್ನು ಒಳಗೊಂಡ ಬಳಿಕ ಇದರ ಖ್ಯಾತಿ ಮತ್ತಷ್ಟು ಹೆಚ್ಚಿದೆ.

ಒಂದೇ ಡಿವೈಸ್ ನಲ್ಲಿ ಎರಡು ಫೋನ್ ನಂಬರ್ ಗಳನ್ನು ಬಳಕೆ ಮಾಡಲು ಅವಕಾಶ ನೀಡುತ್ತದೆ. ಆದರೆ ಅಧಿಕೃತವಾಗಿ ನೀವು ಎರಡು ವಾಟ್ಸ್ ಆಪ್ ಅಕೌಂಟ್ ಗಳನ್ನು ಒಂದೇ ಫೋನ್ ನಲ್ಲಿ ಇನ್ಸ್ಟಾಲ್ ಮಾಡಲು ಸಾಧ್ಯವಾಗುವುದಿಲ್ಲ. ಎರಡು ವಾಟ್ಸ್ ಆಪ್ ಅಕೌಂಟ್ ಗಳಿಗಾಗಿ ಎರಡು ಫೋನ್ ಗಳನ್ನು ಹಿಡಿದುಕೊಳ್ಳಬೇಕಾಗಿರುವ ಅಗತ್ಯವಿಲ್ಲ. ಹಾಗಾದ್ರೆ ಒಂದೇ ಫೋನಿನಲ್ಲಿ ಎರಡು ವಾಟ್ಸ್ ಆಪ್ ಅಕೌಂಟನ್ನು ಮೈಂಟೇನ್ ಮಾಡುವುದು ಹೇಗೆ ಇಂತಹ ಪ್ರಶ್ನೆ ನಿಮ್ಮ ಮನಸ್ಸಿನಲ್ಲೂ ಇದ್ದರೆ ಅದಕ್ಕೆ ನಮ್ಮ ಉತ್ತರ ಹೌದು. ಅದು ಹೇಗೆ ಎಂಬುದನ್ನು ನಾವು ನಿಮಗೆ ತಿಳಿಸುತ್ತೇವೆ.

ಒಂದು ಫೋನಿನಲ್ಲಿ ಡ್ಯುಯಲ್ ವಾಟ್ಸ್ಆ್ಯಪ್ ಅಪ್ಲಿಕೇಶನ್ ಗಳನ್ನು ಬಳಸಲು ಈ ಕ್ರಮ ಅನುಸರಿಸಿ:

1.ನಿಮ್ಮ ಫೋನಿನ ಸೆಟ್ಟಿಂಗ್ ಗಳ ವಿಭಾಗಕ್ಕೆ ಹೋಗಿ.

2. ನೀವು ಡುಪ್ಲಿಕೇಟ್ ಮಾಡಬೇಕು ಎಂದುಕೊಳ್ಳುವ ಆಪ್ ನ್ನು ಸೆಲೆಕ್ಟ್ ಮಾಡಿ .

3. ಸೆಟ್ಟಿಂಗ್ಸ್ ನಿಂದ ಮುಖಪುಟಕ್ಕೆ ಹಿಂತಿರುಗಿ ಕ್ಲೋನ್ ಅಪ್ಲಿಕೇಶನ್ ಮೇಲೆ ಕ್ಲಿಕ್ ಮಾಡಿ.ನಂತರ ನಿಮ್ಮ ಫೋನ್ Parallel ಆ್ಯಪ್ಸ್ ಫೀಚರ್ ಅನ್ನು ಬೆಂಬಲಿಸುವ ಅಪ್ಲಿಕೇಶನ್ ಗಳನ್ನು ಪ್ರದರ್ಶಿಸುತ್ತದೆ.

4. ಪ್ರೊಸೆಸ್ ಅಂತ್ಯವಾಗುವವರೆಗೂ ಕಾಯಿರಿ.

5.ನೀವು ವಾಟ್ಸ್ಆ್ಯಪ್ ಅನ್ನು ಟ್ಯಾಪ್ ಮಾಡಿರಿ. ನಂತರ ನಿಮ್ಮ ಫೋನಿನಲ್ಲಿ ನಕಲಿ ವಾಟ್ಸ್ಆ್ಯಪ್ ಅನ್ನು ಐಕಾನ್ ರಚಿಸಲಾಗುತ್ತದೆ. ಇಲ್ಲಿ ನಿಮಗೆ ವಾಟ್ಸ್‌ಆಪ್ ಸಂಖ್ಯೆ ನಮೂದಿಸುವಂತೆ ಕೇಳಲಾಗುತ್ತದೆ. ಇಲ್ಲಿ ನೀವು ಬಳಸಲು ಇಚ್ಚಿಸುವ ಎರಡನೇ ಸಂಖ್ಯೆಯನ್ನು ಟೈಪ್ ಮಾಡಬೇಕು.

6. ನಂಬರ್ ವೆರಿಫಿಕೇಶನ್ ಗಾಗಿ ನೀವು ಟೈಪ್ ಮಾಡಲಾದ ಸಂಖ್ಯೆಗೆ ನಿಮಗೆ ಸಂದೇಶ ಕಳುಹಿಸಲಾಗುತ್ತದೆ.

7. OTP ಪರಿಶೀಲನೆಯ ನಂತರ ನೀವು ಎಲ್ಲ ಆಯ್ಕೆಗಳನ್ನು ಅಕ್ಸೆಪ್ಟ್ ಮಾಡಿ ಮುಂದುವರೆಯಬೇಕು. ಪ್ರಕ್ರಿಯೆ ಮುಗಿದ ನಂತರ ನೀವು ಫೋನ್ ನಲ್ಲಿ ಎರಡು ಆಪ್ ಗಳನ್ನು ಬಳಸಲು ಸಾಧ್ಯವಾಗುತ್ತದೆ.

Related News

spot_img

Revenue Alerts

spot_img

News

spot_img