20 C
Bengaluru
Sunday, December 22, 2024

ಬೆಂಗಳೂರಿನ ಕೆಂಚನಾಪುರದಲ್ಲಿ ರಾಜೀವ್‌ಗಾಂಧಿ ವಸತಿ ನಿಗಮದಿಂದ 1293 ಪ್ಲಾಟ್ಸ್!

ಬಡ ವರ್ಗದ ಜನರಿಗೆ ಕಡಿಮೆ ಬೆಲೆಗೆ ಸೂರು ಕಲ್ಪಿಸುವ ರಾಜೀವ್‌ಗಾಂಧಿ ವಸತಿ ನಿಗಮ ಕೆಂಗೇರಿ ಸಮೀಪ ಕೆಂಚನಾಪುರ ಯೋಜನೆ ಕೈಗೆತ್ತಿಕೊಂಡಿದೆ. 2020 ರಲ್ಲಿ ಈ ಯೋಜನೆ ಪ್ರಾರಂಭಿಸಲಾಗಿದ್ದು, 2025 ರೊಳಗೆ ಈ ಯೋಜನೆ ಪೂರ್ಣಗೊಳ್ಳಲಿದೆ. ಈ ಯೋಜನೆಯಡಿ 1293 ಪ್ಲಾಟ್ ಗಳನ್ನು ನಿರ್ಮಿಸುತ್ತಿದ್ದು ಈ ಯೋಜನೆಗೆ ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ ಅಂಗೀಕಾರ ನೀಡಿದೆ.

ಕರ್ನಾಟಕದಲ್ಲಿ ಮುಖ್ಯಮಂತ್ರಿ ಒಂದು ಲಕ್ಷ ಮನೆ ನಿರ್ಮಾಣ ಯೋಜನೆಯಡಿ ಒಂದು ಲಕ್ಷ ಮನೆ ನಿರ್ಮಾಣ ಗುರಿ ಹೊಂದಲಾಗಿದೆ. ಇದರ ಭಾಗವಾಗಿ ರಾಜೀವ್ ಗಾಂಧಿ ವಸತಿ ನಿಗಮ ರಾಜ್ಯದ ನಗರ ಪ್ರದೇಶಗಳಲ್ಲಿ ವಿವಿಧ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸುತ್ತಿದೆ. ಬೆಂಗಳೂರು ದಕ್ಷಿಣ ತಾಲೂಕಿನಲ್ಲಿ ಕೆಂಪೇಗೌಡ ಬಡಾವಣೆಗೆ ಹೊಂದಿಕೊಂಡಂತೆ ಕೆಂಚನಪುರ ಬಳಿ ವಸತಿ ಸಮುಚ್ಛಯ ನಿರ್ಮಾಣ ಯೋಜನೆ ಕೈಗೆತ್ತಿಕೊಂಡಿದೆ.

ಕೆಂಚನಪುರದಲ್ಲಿ 41,683 ಚದರ ಮೀಟರ್ ಭೂಮಿಯಲ್ಲಿ ವಸತಿ ಸಮುಚ್ಛಯ ನಿರ್ಮಾಣ ಮಾಡಲಾಗುತ್ತಿದೆ. ಎರಡು ಬಿಎಚ್‌ಕೆ ಹೊಂದಿರುವ 1,293 ಪ್ಲಾಟ್‌ಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಸದ್ಯದ ಮಟ್ಟಿಗೆ ಶೇ. 30 ರಷ್ಟು ಯೋಜನೆ ಪೂರ್ಣಗೊಂಡಿದ್ದು, ಶೇ. 70 ರಷ್ಟು ಕಾಮಗಾರಿ ಇನ್ನು ಮುಂದೆ ನಡೆಯಬೇಕಿದೆ. ಈ ಯೋಜನೆ ವಸತಿ ಸಮುಚ್ಛಯಗಳ ನಿರ್ಮಾಣಕ್ಕೆ ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ ಅನುಮತಿ ನೀಡಿದೆ. 44 ಮೀಟರ್ ಎತ್ತರದಲ್ಲಿ ಈ ವಸತಿ ಸಮುಚ್ಛಯ ನಿರ್ಮಾಣವಾಗಲಿದೆ ಎಂದು ರಾಜೀವ್ ಗಾಂಧಿ ವಸತಿ ನಿಗಮ ರೇರಾಗೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಸಲ್ಲಿಸಿದೆ. 1068 ಪ್ಲಾಟ್ ಗಳು ಎರಡು ಬಿಎಚ್‌ಕೆ, 225 ಪ್ಲಾಟ್ ಗಳು ಒಂದು ಬಿಎಚ್‌ಕೆ ಪ್ಲಾಟ್‌ಗಳು ನಿರ್ಮಾಣವಾಗಲಿದೆ.

ರಾಜೀವ್ ಗಾಂಧಿ ವಸತಿ ನಿಗಮದಲ್ಲಿ ಅರ್ಜಿ ಸಲ್ಲಿಸಿ ಪ್ಲಾಟ್ ಪಡೆಯಬಹುದು. ಅರ್ಜಿ ಸಲ್ಲಿಕೆ ಹೆಚ್ಚಿನ ವಿವರಗಳಿಗಾಗಿ ರಾಜೀವ್ ಗಾಂಧಿ ವಸತಿ ನಿಗಮ ಸಂಪರ್ಕಿಸಬಹುದು.

Related News

spot_img

Revenue Alerts

spot_img

News

spot_img