26.7 C
Bengaluru
Sunday, December 22, 2024

10 ಲಕ್ಷಕ್ಕು ಅಧಿಕ ಹಣವಿದ್ದರೆ, ಆದಾಯ ತೆರಿಗೆ ಇಲಾಖೆ ಪ್ರವೇಶ

ಬೆಂಗಳೂರು, ಏ. 17 : ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವ ಸಲುವಾಗಿ ಪ್ರತೀ ಪಕ್ಷಗಳು ಕೂಡ ಹಣದ ಹೊಳೆ ಹರಿಸಲು ಮುಂದಾಗಿದ್ದಾರೆ. ರಾಜಕಾರಣಿಗಳ ತಂತ್ರಕ್ಕೆ ಪ್ರತಿಯಾಗಿ ಚುನಾವಣಾ ಆಯೋಗವೂ ಕೂಡ ತಂತ್ರಗಳನ್ನು ಹೆಣೆದಿದೆ. ಹಾಗಾಗಿ ಆಯೋಗ ಹಾಗೂ ಪೊಲೀಸ್ ಇಲಾಖೆಗಳು ಬಹಳ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸುತ್ತಿವೆ. ಈ ಚುನಾವಣೆ ಸಂದರ್ಭದಲ್ಲಿ 10 ಲಕ್ಷಕ್ಕೂ ಅಧಿಕ ಹಣ ಪತ್ತೆಯಾದರೆ ಅಂತಹ ಹಣದ ಮೂಲ ಪತ್ತೆಹಚ್ಚಲು ಆದಾಯ ತೆರಿಗೆ ಇಲಾಖೆ ಪ್ರವೇಶಿಸಲಿದೆ.

ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾದಾಗಿನಿಂದ ಇದುವರೆಗೂ 100 ಕೋಟಿಗೂ ಅಧಿಕ ಮೊತ್ತವನ್ನು ಜಪ್ತಿ ಮಾಡಲಾಗಿದೆ. ಹೆಚ್ಚಿನ ನಗದು ದಾಖಲೆ ಇಲ್ಲದಿರುವ ಕಾರಣ ಇನ್ಮುಂದೆ 10ಲಕ್ಷಕ್ಕೂ ಅಧಿಕ ನಗದು ಇದ್ದಲ್ಲಿ ಆಗ ಐಟಿ ಇಲಾಖೆ ಮಾಹಿತಿ ನೀಡಬೇಕು ಎಂದು ಆದಾಯ ತೆರಿಗೆ ಇಲಾಖೆ ಹೆಚ್ಚುವರಿ ನಿರ್ದೇಶಕ ಪ್ರಿಯದರ್ಶಿ ಮಿಶ್ರಾ, ಕರ್ನಾಟಕ ಪೊಲೀಸ್ ಇಲಾಖೆಗೆ ಲಿಖಿತವಾಗಿ ಸೂಚನೆ ನೀಡಿದ್ದಾರೆ.

ಇನ್ನು 224 ವಿಧಾನಸಭಾ ಕ್ಷೇತ್ರಗಳಿಗೂ ಒಬ್ಬೊಬ್ಬ ನೋಡಲ್ ಅಧಿಕಾರಿಗಳನ್ನು ಐಟಿ ಇಲಾಖೆ ನಿಯೋಜನೆ ಮಾಡಿದೆ. ಚುನಾವಣಾ ಅಕ್ರಮಕ್ಕೆ ಸಂಬಂಧಿಸಿದ ದೂರುಗಳನ್ನು ಸ್ವೀಕರಿಸಿ, ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಲಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಮೇ 14ರವರೆಗೆ ನೀತಿ ಸಂಹಿತೆ ಜಾರಿಯಲ್ಲಿರಲಿದೆ. ಹಾಗಾಗಿ ಅಲ್ಲಿಯವರೆಗೆ ಜನರು ಗರಿಷ್ಠ 50 ಸಾವಿರ ರೂ.ವರೆಗೆ ನಗದು ಮಾತ್ರವೇ ಒಯ್ಯಬಹುದಾಗಿದೆ. ಇದಕ್ಕಿಂತ ಹೆಚ್ಚಿನ ಹಣವಿದ್ದರೆ, ಅದಕ್ಕೆ ವ್ಯಕ್ತಿ ಸೂಕ್ತ ದಾಖಲೆಗಳನ್ನು ಒದಗಿಸಬೇಕು.

ದಾಖಲೆ ಇಲ್ಲದ ಹಣವನ್ನು ಪೊಲೀಸರು ಮುಟ್ಟುಗೋಲು ಹಾಕಿಕೊಳ್ಳುತ್ತಾರೆ. ಆಸ್ಪತ್ರೆ, ಶುಭ ಸಮಾರಂಭ ಸೇರಿ ಇನ್ನಿತರ ವೈಯಕ್ತಿಕ ವ್ಯವಹಾರಗಳಿಗೆ ಸಾರ್ವಜನಿಕರು ಹಣ ತೆಗೆದುಕೊಂಡು ಹೋಗಬಹುದು. ದಾಖಲೆ ಇಲ್ಲದ ಮೊತ್ತಕ್ಕೆ ಅಧಿಕಾರಿಗಳು ಹಾಗೂ ಪೊಲೀಸರು ಪರಿಶೀಲನೆಯನ್ನು ಮಾಡುತ್ತಾರೆ. ಬಳಿಕ ನಗದನ್ನು ಜಪ್ತಿ ಮಾಡಿ, ಹಣವಿದ್ದ ವ್ಯಕ್ತಿಯಿಂದ ಹೇಳೀಕೆಯನ್ನು ದಾಖಲಿಸುತ್ತಾರೆ. ನಂತರ ಹಣದ ಮೂಲದ ಬಗ್ಗೆ ಪರಿಶೀಲನೆಯನ್ನು ನಡೆಸುತ್ತಾರೆ.

Related News

spot_img

Revenue Alerts

spot_img

News

spot_img