ಬೆಂಗಳೂರು, ಮಾ. 10 : ವಿಧಿಶೂಲ ನಿವೇಶನಗಳು ಎಂದು ಬಂದಾಗ ಅಗತ್ಯವಾಗಿ ಇದರಲ್ಲಿ ಅಳತೆ ಎಷ್ಟಿದೆ ಎಂಬುದನ್ನು ಮೊದಲು ತೆಗೆದುಕೊಳ್ಳಬೇಕು. ಮೂಲಯಲ್ಲಿರುವ ದಿಕ್ಕುಗಳು ಐದು ಹಾಗೂ ಮಧ್ಯದಲ್ಲಿ ಬರುವ ದಿಕ್ಕುಗಳು ನಾಲ್ಕು ಭಾಗವನ್ನು ಸೂಚಿಸುತ್ತದೆ. ಇನ್ನು ಮುಖ್ಯದ್ವಾರ ಉತ್ತರದಲ್ಲಿ ಬರುವುದಾದರೆ, ಸರಿಯಾಗಿ ಅಳತೆಯನ್ನು ಮಾಡಿ ನಿರ್ಮಾಣ ಮಾಡಬೇಕಾಗುತ್ತದೆ. ಸರಿಯಾಗಿ ಅಳತೆ ಮಾಡಬೇಕಾಗುತ್ತದೆ. ಇಲ್ಲದಿದ್ದರೆ ಸಮಸ್ಯೆ ಆಗುತ್ತದೆ. ಯಾವ ಕೋಣೆ ಯಾವ ದಿಕ್ಕಿನಲ್ಲಿ ಬರಬೇಕು ಎಂದು ಇದೆಯೋ ಅದೇ ದಿಕ್ಕಿನಲ್ಲಿ ಹಾಕಬೇಕು. ವಿರುದ್ಧ ದಿಕ್ಕಿನಲ್ಲಿ ಹಾಕುವುದು ಅಷ್ಟು ಸರಿಯಲ್ಲ.
ವಿಧೀಶೂಲ ನಿವೇಶನಗಳನ್ನು ಅಳವಡಿಸುವಾಗ ಕೆಲ ಸಮಸ್ಯೆಗಳು ಕಂಡು ಬರುತ್ತವೆ. ನೈರುತ್ಯ ದಿಕ್ಕಿನ ಸೈಟ್ ಏನಾದರೂ ಸಿಕ್ಕಿದರೆ, ಹಾಲ್ ಅನ್ನು ಹಿಂದೆಗಡೆ ಇಡುವ ಸಾಧ್ಯತೆ ಬರಬಹುದು. ಆಗ ಇತರೆ ಕೊಠಡಿಗಳ ಬಗ್ಗೆಯೂ ಕಾಳಜಿ ವಹಿಸಿ ಮನೆಯನ್ನು ನಿರ್ಮಾಣ ಮಾಡಬೇಕಾಗುತ್ತದೆ. ವಿಧಿಶಾ ಫ್ಲಾಟ್ ನಲ್ಲಿ ಇದನ್ನೆಲ್ಲಾ ಹೆಚ್ಚು ಗಮನಿಸಿ ಮನೆಯನ್ನು ನಿರ್ಮಾಣ ಮಾಡಬೇಕಾಗುತ್ತದೆ. ಇನ್ನು ವಿಧಿಶಾ ಫ್ಲಾಟ್ ಗಳಲ್ಲಿ ಪಾಸಿಟಿವ್ ಎನ್ನುವುದು ಕಡಿಮೆ ಇರುತ್ತದೆ. ಆದರೆ, ನಮಗೆ ಅಲ್ಲೇ ಸೈಟ್ ಸಿಕ್ಕಿದೆ ಎಂದಾದರೆ, ಸ್ವಲ್ಪ ಎಚ್ಚರವಹಿಸಿ ಮನೆಯನ್ನು ನಿರ್ಮಾಣ ಮಾಡಬೇಕಾಗುತ್ತದೆ.
ಮನೆಯನ್ನು ಕಟ್ಟುವಾಗ ಬೇರೆ ಯಾವ ದಿಕ್ಕಿಗೂ ಟಿಲ್ಟ್ ಮಾಡದೇ, ಮನೆಯನ್ನು ಕಟ್ಟುವುದು ಬಹಳ ಮುಖ್ಯವಾಗಿರುತ್ತದೆ. ಸುಮಾರು ಕಡೆ ವಿಧಿಶೂಲ ಫ್ಲಾಟ್ ಗಳನ್ನು ಕಟ್ಟಿದಾಗ ದೊಡ್ಡ ತಪ್ಪನ್ನು ಮಾಡುತ್ತಾರೆ. ಇದರಿಂದ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಾರೆ. ಕೆಲವರು ಮನೆಯನ್ನು ಇಂತಹದ್ದೇ ದಿಕ್ಕಿಗೆ ಬೇಕು ಎಂದು ಮನೆಯ ಆಕಾರವನ್ನೇ ಬದಲಿಸುತ್ತಾರೆ. ಮನೆಯ ಬಾಗಿಲು ಪೂರ್ವ ದಿಕ್ಕಿಗೆ ಬೇಕು ಎನ್ನುತ್ತಾರೆ. ದಿಕ್ಕನ್ನು ಸರಿಯಾಗಿ ತೆಗೆದುಕೊಳ್ಳದೇ, ಸಮಸ್ಯೆ ಮಾಡಿಕೊಳ್ಳುತ್ತಾರೆ. ವಿಧಿಶೂಲ ಫ್ಲಾಟ್ ಗಳಲ್ಲಿ ಪೂರ್ವ, ಉತ್ತರ, ದಕ್ಷಿಣ, ಪಶ್ಚಿಮ ಪ್ರದೇಶಗಳು ಮೂಲೆಗಳಲ್ಲಿ ಬರುತ್ತವೆ.