22.3 C
Bengaluru
Thursday, June 20, 2024

ಪ್ರೀತಿಪಾತ್ರರಿಗೆ ದಸರಾಕ್ಕೆ ಶುಭ ಕೋರಲು ವಾಟ್ಸ್ಯಾಪ್‌ ಸ್ಟೇಟಸ್‌ಗಳು, ಕೋಟ್ಸ್‌ಗಳು

ಬೆಂಗಳೂರು;ವಿಜಯದಶಮಿ ಎಂದೂ ಕರೆಯಲ್ಪಡುವ ದಸರಾವು ಕರ್ನಾಟಕ ಮತ್ತು ಭಾರತದ ವಿವಿಧ ಭಾಗಗಳಲ್ಲಿ ಬಹಳ ಸಂತಸದಿಂದ ಆಚರಿಸಲಾಗುವ ಮತ್ತು ಮಹತ್ವದ ಹಬ್ಬವಾಗಿದೆ.ಒಂಬತ್ತು ದಿನಗಳ ಉತ್ಸವ ನವರಾತ್ರಿಯ ಕೊನೆಯ ದಿನದಂದು ಆಚರಿಸಲಾಗುವ ಪ್ರಮುಖ ಹಿಂದೂ ಹಬ್ಬವಾಗಿದೆ.ಮಹಿಷಾಸುರ ಎಂಬ ರಾಕ್ಷಸನ ಜೊತೆಗೆ ಯುದ್ಧ ಮಾಡಿ, ಜಯ ಗಳಿಸಿದ ನೆನಪಿಗಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಅಹಂ ಮತ್ತು ದುಷ್ಟ ತನದ ಮೇಲೆ ಶಾಂತಿ ಮತ್ತು ವಿಜಯವನ್ನು ಪ್ರತಿನಿಧಿಸುವ ಹಬ್ಬ.ದುಷ್ಟರ ವಿರುದ್ಧ ವಿಜಯದ ಸಂಕೇತವಾಗಿದೆ ಮತ್ತು ರಾಕ್ಷಸ ರಾವಣನ ವಿರುದ್ಧ ಶ್ರೀರಾಮನ ವಿಜಯವನ್ನು ಸಂಕೇತಿಸುತ್ತದೆ. ನಿಮ್ಮ ಬದುಕಿನಲ್ಲಿರುವ ಎಲ್ಲಾ ಚಿಂತೆಗಳು ದೂರವಾಗಲಿ, ಯಶಸ್ಸು ನಿಮ್ಮದಾಗಲಿ, ದಸರಾ ಹಬ್ಬದ ಶುಭಾಶಯಗಳು ಈ ವಿಶೇಷ ಸಮಯದಲ್ಲಿ ಜನರು ತಮ್ಮ ಸ್ನೇಹಿತರು ಮತ್ತು ಕುಟುಂಬಕ್ಕೆ ತಮ್ಮ ಪ್ರೀತಿ, ಶುಭ ಹಾರೈಕೆಗಳು ಮತ್ತು ಆಶೀರ್ವಾದಗಳನ್ನು ತಿಳಿಸಲು ಹಬ್ಬವನ್ನು ಆಚರಿಸಲು ಒಟ್ಟಿಗೆ ಸೇರುತ್ತಾರೆ ಮತ್ತು ಶುಭಾಶಯಗಳನ್ನುವಿನಿಮಯ ಮಾಡಿಕೊಳ್ಳುತ್ತಾರೆ.

ನಾಡಹಬ್ಬ ದಸರಾಗೆ ಶುಭಾಶಯ ಕೋರಲು, ಫೇಸ್‌ಬುಕ್, ವಾಟ್ಸಾಪ್‌ನಲ್ಲಿ ಸಂದೇಶ ಸಾರಲು ಇಲ್ಲಿವೆ ಕೋಟ್ಸ್

*ನಾಡಿನ ಸಮಸ್ತ ಜನತೆಗೆ ನಾಡ ಹಬ್ಬ ದಸರಾ ಶುಭಾಶಯ.

*ಶ್ರೀ ನವರಾತ್ರಿಯ ಹಾಗೂ ದಸರಾ ಹಬ್ಬದ ಶುಭಾಶಯ.

*ದಸರಾ ನಿಮ್ಮಾಎಲ್ಲಾ ಚಿಂತೆಗಳನ್ನು ಸುಟ್ಟು ಮನೆಯಲ್ಲಿ ಸಂತೋಷ-ಸಡಗರ ತುಂಬುವಂತೆ ಮಾಡಲಿ ದಸರಾ ಹಬ್ಬದ ಶುಭಾಶಯಗಳು

*ಎಲ್ಲರಿಗೂ ಆಯುಧ ಪೂಜೆ ಹಾಗೂ ದಸರಾ ಹಬ್ಬದ ಶುಭಾಶಯಗಳು.

*ಅಧರ್ಮ ನಶಿಸಿ, ಧರ್ಮ ಬಾಳಲಿ ವಿಜಯದಶಮಿಯ ಶುಭಾಶಯಗಳು

*ಎಲ್ಲರಿಗೂ ದಸರಾ ಹಬ್ಬದ ಶುಭಾಶಯ ನಾವು ನೀವು ಬನ್ನಿ ತೊಗೊಂಡು ಬಂಗಾರದಂಗ ಇರೋಣ

*ನಾಡ ಹಬ್ಬ ದಸರಾ ಹಬ್ಬದ ಶುಭಾಶಯ ಗಳು ನಿಮಗೂ ನಿಮ್ಮ ಫ್ಯಾಮಿಲಿಗು ಸುಖ ಶಾಂತಿ ಅನ್ನು ದೇವರು ಕರುಣಿಸಲಿ

*ನಿಮ್ಮ ಬದುಕಿನಲ್ಲಿರುವ ಎಲ್ಲಾ ಚಿಂತೆಗಳು ದೂರವಾಗಲಿ, ಯಶಸ್ಸು ನಿಮ್ಮದಾಗಲಿ, ದಸರಾ ಹಬ್ಬದ ಶುಭಾಶಯಗಳು

*ಸರ್ವರಿಗೂ ಆಯುಧ ಪೂಜೆ ಹಾಗೂ ದಸರಾ ಹಬ್ಬದ ಶುಭಾಶಯ ಗಳು.

*ದುಷ್ಟತನ ಮೆಟ್ಟಿ ನಿಲ್ಲುವ ಸಾಮರ್ಥ್ಯವ ತಾಯಿ ಚಾಮುಂಡಿಯು ನಿಮಗೆ ನೀಡಲೆಂದು ಆ ದೇವಿಯಲ್ಲಿ ಪ್ರಾರ್ಥಿಸುತ್ತೇನೆ. ದಸರಾ ಹಬ್ಬದ ಶುಭಾಶಯಗಳು.

* ನಿಮ್ಮ ಬದುಕಿನಲ್ಲಿರುವ ಎಲ್ಲಾ ಚಿಂತೆಗಳು ದೂರವಾಗಲಿ, ಯಶಸ್ಸು ನಿಮ್ಮದಾಗಲಿ, ದಸರಾ ಹಬ್ಬದ ಶುಭಾಶಯಗಳು

 

Related News

spot_img

Revenue Alerts

spot_img

News

spot_img