21.1 C
Bengaluru
Sunday, September 8, 2024

ಸುದೀಪ್ ನಿಂದ ಡೈರೆಕ್ಟ್ ನಾಮಿನಿಟ್ ಆಗಿರುವ ಮೈಕಲ್ ಮತ್ತು ಸ್ನೇಹಿತ್ ಮುಂದಿನ ನಡೆ ಏನು..?

ಬಿಗ್ ಬಾಸ್ ಮನೆಯಲ್ಲಿ ಇಬ್ಬರು ವೈಲ್ ಕಾರ್ಡ್ ಮುಖಾಂತರ ಪವಿಪುವಪ್ಪ ಮತ್ತು ಅವಿನಾಶ್ ಎಂಟ್ರಿ ಆಗಿದ್ದರು. ಇದರಿಂದಾಗಿ ಮನೆಯಲ್ಲಿ ಸ್ನೇಹಿತ್‌ ಮತ್ತು ಮೈಕಲ್ ಎಲಿಮಿನೆಟ್ ಆಗುವ ಹಂತದಲ್ಲಿದ್ದರೂ ಕಿಚ್ಚ ಸುದೀಪ್ ವೀಟೋ ಅಧಿಕಾರ ಬಳಸಿ ಸೇವ್ ಮಾಡಿ ಮುಂದಿನ ವಾರಕ್ಕೆ  ಮಾಡಿದರು. ಇದರಿಂದಾಗಿ ಮನೆಯಿಂದ ಹೊರ ಹೋಗಬೇಕಿದ್ದಂತ ಮೈಕಲ್ ಮತ್ತು ಸ್ನೇಹಿತ್ ಸೇವ್ ಆದ್ರು.

ಮೈಕಲ್ ಮತ್ತು ಸ್ನೇಹಿತ್ ಎದೆ ಡವ ಡವ…! 

ಆದರೂ ಸಹ ಇಬ್ಬರಿಗೂ ಎದೆ ಡವ ಡವ ಎನ್ನುತ್ತಿದೆ ಏಕೆಂದರೆ ಡೈರೆಕ್ಟ್ ನಾಮಿನೇಟ್ ಆಗಿರೋದ್ರಿಂದ ಮುಂದಿನ ವಾರ ಯಾರ್ ಬೇಕಾದ್ರೂ ಮನೆಯಿಂದ ಹೊರ ಹೋಗಬಹುದು. ಕ್ಯಾಪ್ಟನ್ ಅವಕಾಶ ಲಭಿಸಿರುವಂತ ಸ್ನೇಹಿತ ತನಗೆ ನೀಡಿರುವಂತ ಜವಾಬ್ದಾರಿಯನ್ನು ಎಷ್ಟರಮಟ್ಟಿಗೆ ನಿಂಬಾಯಿಸುತ್ತಾನೆ ಎನ್ನುವುದರ ಆಧಾರದ ಮೇಲೆ ಮನೆಯಲ್ಲಿ ಉಳಿಯುವಂತಹ ಅವಕಾಶಗಳು ಇರುತ್ತವೆ. ಇನ್ನು ಮೈಕಲ್
ತನಗೆ ಸಿಕ್ಕಿರುವಂತ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಬೇಕೆನ್ನುವ ಹಂಬಲದಲ್ಲಿದ್ದಾರೆ. ಹೀಗಾಗಿ ಮನೆಯಲ್ಲಿ ಉಳಿಯುವಂತ ಸ್ಪರ್ಧೆ ಏರ್ಪಟ್ಟಿದೆ.

ಸಿಕ್ಕವಕಾಶಗಳನ್ನು ಬಳಸಿಕೊಳ್ಳುವಲ್ಲಿ ಎಡಗುತ್ತಿದ್ದಾರ ಸಿರಿ…?

ಬಿಗ್ ಬಾಸ್ ಮನೆಯಲ್ಲಿ 50 ದಿನಗಳನ್ನು ಪೂರೈಸಿರುವಂತಹ ಸಿರಿ ಹಲವಾರು ಎಲಿಮಿನೇಷನ್ ದವಡೆಯಿಂದ ಹಲವು ಬಾರಿ ಪಾರಾಗಿದ್ದಾರೆ. ಈ ವಿಷಯವನ್ನು ಕುದ್ದು ವಾರದ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್ ಬಾಯಿ ಬಿಟ್ಟಿದ್ದು, ಆಟವನ್ನಾಡುವಂತೆ ಬಹಳಷ್ಟು ಬಾರಿ ತಾಕಿತು ಮಾಡಿದ್ದರು ಸಹ ಆಟದ ಬಿಸಿ ಇನ್ನು ಸಿರಿ ಅವರಲ್ಲಿ ಕಾಣುತ್ತಿಲ್ಲ. ಹೀಗಾಗಿ ಈ ವಾರ ಬಿಗ್ ಬಾಸ್ ಮನೆಯಿಂದ ಸಿರಿಯವರು ಆಚೆ ಬಂದ್ರೂ ಆಶ್ಚರ್ಯವಿಲ್ಲ.

Related News

spot_img

Revenue Alerts

spot_img

News

spot_img