24.8 C
Bengaluru
Monday, October 7, 2024

ಮನೆ ಒಳಗಡೆ ಶೌಚಾಲಯ ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಇಟ್ಟರೆ, ವಾಸ್ತು ದೋಷ ಉಂಟಾಗುತ್ತದೆಯೇ..?

ಬೆಂಗಳೂರು, ಫೆ. 07 : ಮನೆಯಲ್ಲಿ ಶೌಚಾಲಯ ಬಹಳ ಮುಖ್ಯ. ಈಗ ಮಾರ್ಡನ್ ಯುಗ ಆಗಿರುವುದರಿಂದ ಶೌಚಾಲಯವನ್ನು ಮನೆಯ ಒಳಗಡೆಯೇ ಇಟ್ಟುಕೊಂಡಿರುತ್ತೇವೆ. ಮನೆಯ ರೂಮ್ ಒಳಗಡೆಯೇ ಅಟ್ಯಾಚ್ ಬಾತ್ ರೂಮ್ ಗಳು ಇರುತ್ತವೆ. ಇನ್ನು ಕೆಲವರು ಕಾಮನ್ ಟಾಯ್ಲೆಟ್ ಅನ್ನು ಕೂಡ ಇಟ್ಟುಕೊಂಡಿರುತ್ತೇವೆ. ಇನ್ನು ಆಗಿನ ಕಾಲದಲ್ಲಿ ಮನೆಯ ಹಿಂದಿನ ಹಿತ್ತಲಲ್ಲಿ, ಸ್ನಾದ ಗೃಹ ಹಾಗೂ ಟಾಯ್ಲೆಟ್ ಎರಡನ್ನೂ ಬೇರೆ ಬೇರೆಯಾಗಿ ಇಡಲಾಗುತ್ತಿತ್ತು. ಆದರೆ, ಈಗ ಜಾಗದ ಅಭಾವದಿಂದ ಮನೆಯ ಒಳಗೆ ಇಟ್ಟುಕೊಂಡಿರುತ್ತೇವೆ. ಅಲ್ಲದೇ, ನಗರಗಳಲ್ಲಿ ರಾತ್ರಿ ವೇಳೆ ಮನೆಯ ಹೊರಗೆ ಹೋಗಲಾಗದು ಎಂದು ಮನೆಯೊಳಗೆ ಶೌಚಾಲಯವನ್ನು ಇಟ್ಟುಕೊಳ್ಳುತ್ತೇವೆ.

ಈಗ ಟಾಯ್ಲೆಟ್ ಅನ್ನ ಬೆಡ್ ರೂಮ್ ನಲ್ಲಿ ಅಟ್ಯಾಚ್ಡ್ ಆಗಿ ನಿರ್ಮಿಸಲಾಗುತ್ತೆ. ಟಾಯ್ಲೆಟ್ ಗಳನ್ನು ಸೌತ್ ಈಸ್ಟ್ ಅಥವಾ ನಾರ್ತ್ ಈಸ್ಟ್ ನಲ್ಲಿ ಅಟ್ಯಾಚ್ ಮಾಡಲಾಗುತ್ತದೆ. ಬೆಡ್ ರೂಮ್ ಏನಾದರೂ ಉತ್ತರದಲ್ಲಿ ಇದ್ದರೆ, ಆಗ ಬಾತ್ ರೂಮ್ ಪಶ್ಚಿಮದ ಕಡೆ ಇರುವುದು ಒಳ್ಳೆಯದು. ಪೂರ್ವದಲ್ಲಿ ಮಲಗುವ ಕೋಣೆ ಇದ್ದಲ್ಲಿ ದಕ್ಷಿಣದ ಕಡೆ ಅಟ್ಯಾಚ್ ಬಾತ್ ರೂಮ್ ಅನ್ನು ಅಳವಡಿಸಲಾಗುತ್ತದೆ. ಇನ್ನು ಕಾಮನ್ ಟಾಯ್ಲೆಟ್ ಅಂತೇನಾದರೂ ಇದ್ದರೆ, ಪಶ್ಚಿಮ ವಾಯುವ್ಯ, ನೈರುತ್ಯ ಮತ್ತು ದಕ್ಷಿಣದ ಮಧ್ಯೆದಲ್ಲಿ ಇರಬಹುದು. ಆದರೆ, ಇನ್ಯಾವ ದಿಕ್ಕಿನಲ್ಲೂ ಇರುವುದು ಸೂಕ್ತವಲ್ಲ. ಅದರಲ್ಲೂ ಬ್ರಹ್ಮಸ್ಥಾನದ ಬಗ್ಗೆ ಕೊಂಚ ಎಚ್ಚರವಿರಲಿ.

ಇನ್ನು ಎರಡನೇಯದಾಗಿ ಶೌಚಾಲಯದ ಒಳಗಡೆ, ಸ್ನಾನದ ನೀರನ್ನು ಕಾಯಿಸಿಕೊಳ್ಳುವ ಗೀಸರ್, ಬಾಯ್ಲರ್ ಅನ್ನು ನಾರ್ತ್ ಈಸ್ಟ್ ನಲ್ಲಿ ಇಡಬಾರದು. ಇದು ಬಿಟ್ಟು ಬೇರೆ ಯಾವ ದಿಕ್ಕಿನಲ್ಲಾದರೂ ಇಡಬಹುದು. ಸ್ನಾನ ಮಾಡುವಾಗ ನೀವು ಪೂರ್ವ ಅಥವಾ ಉತ್ತರ ದಿಕ್ಕಿನ ಕಡೆಗೆ ಮುಖ ಮಾಡಿರಬೇಕು. ಹಾಗಾಗಿ ಶವರ್ ಅನ್ನು ಪೂರ್ವದಲ್ಲೋ ಅಥವಾ ಉತ್ತರದಲ್ಲೋ ಇಟ್ಟರೆ ಸೂಕ್ತ. ಆದರೆ ಯಾವುದೇ ಕಾರಣಕ್ಕೂ ದಕ್ಷಿಣ ಹಾಗೂ ಪಶ್ಚಿಮದಲ್ಲಿ ಇರುವುದು ಒಳ್ಳೆಯದಲ್ಲ. ಇನ್ನು ಶೌಚಾಲಯದಲ್ಲಿ ಕನ್ನಡಿಯನ್ನು ಇಡುತ್ತೇವೆ. ಇದು ಕೂಡ ಪೂರ್ವ ಅಥವಾ ಉತ್ತರದಲ್ಲಿ ಇಡಬೇಕು.

ಇನ್ನು ಶೌಚಾಲಯದ ಬಾಗಿಲ ಬಳಿಯೇ ಕನ್ನಡಿಯನ್ನು ಇಡಬಾರದು. ಹಾಗೇನಾದರೂ ಇದ್ದರೆ, ಆ ಬಾಗಿಲನ್ನು ಸದಾ ಮುಚ್ಚಿರುವುದು ಒಳ್ಳೆಯದು. ಇಲ್ಲದಿದ್ದರೆ, ಬೇಡದ ಸಮಸ್ಯೆಗಳು ಮನೆಗೆ ಬಂದಂತಾಗುತ್ತದೆ. ಇನ್ನು ಟಾಯ್ಲೆಟ್ ಮಾಡಲು ಕೂರುವಾಗ ಪೂರ್ವಾಭಿಮುಖ, ಉತ್ತರಾಭಿಮುಖವಾಗಿಯೇ ಕುಳಿತು ಮಲ-ಮೂತ್ರ ವಿಸರ್ಜನೆ ಮಾಡಬೇಕು. ಆ ರೀತಿಯಲ್ಲಿ ಕಮೋಡ್ ಗಳನ್ನು ನಿರ್ಮಿಸಬೇಕು. ಪಶ್ಚಿಮ ಅಥವಾ ದಕ್ಷಿಣದ ಕಡೆಗೆ ಕುಳಿತರೆ, ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತದೆ. ಇನ್ನು ಮನೆಯಲ್ಲಿ ಬಾತ್ ಟಬ್ ಇರುತ್ತದೆ. ಇದು ಯಾವ ದಿಕ್ಕಿನಲ್ಲಿದ್ದರೂ ಸಮಸ್ಯೆ ಇಲ್ಲ. ಯಾಕೆಂದರೆ, ಬಹುತೇಕ ಸಂದರ್ಬದಲ್ಲಿ ಬಾತ್ ಟಬ್ ಖಾಲಿ ಇರುತ್ತದೆ. ಹಾಗಾಗಿ ಯಾವ ದಿಕ್ಕಿನಲ್ಲಾದರೂ ಇರಬಹುದು. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಬಾತ್ ರೂಮ್ ಗಳನ್ನು ನಿರ್ಮಿಸಬೇಕು. ಇಲ್ಲದಿದ್ದರೆ, ವಾಸ್ತು ದೋಷ ಉಂಟಾಗುವುದಂತೂ ಖಚಿತ.

Related News

spot_img

Revenue Alerts

spot_img

News

spot_img