ಬೆಂಗಳೂರು, ಏ. 25 : ವಾಸ್ತುವಿನಲ್ಲಿ ನೀರಿನ ಸಂಪು ಮಾತ್ರ ಈಶಾನ್ಯ ಮೂಲೆಯಲ್ಲೇ ಬರಬೇಕು ಎಂದು ಈಗಾಗಲೇ ಹೇಳಿದ್ದೇವೆ. ಬಾವಿ, ಕೊಳವೆ ಬಾವೆ, ಸಂಪು ಎಲ್ಲವೂ ಈಶಾನ್ಯ ದಿಕ್ಕಿನಲ್ಲಿ ಬರಬೇಕು ಎಂದು ವಾಸ್ತುವಿನಲ್ಲಿ ಹೇಳಲಾಗಿದೆ. ಇನ್ನು ಕೆಲ ಮನೆಗಳು 20*30 ಅಡಿಗಳ ಸಣ್ಣ ಮನೆಗಳಲ್ಲಿ ೀಶಾನ್ಯ ಮೂಲೆಯನ್ನು ಖಾಲಿ ಬಿಟ್ಟರೆ, ಅದು ಕಡಿತವನ್ನು ಕೊಡುತ್ತದೆ ಎಂದು ಜನ ಜಾಗ ಉಳಿತಾಯಕ್ಕಾಗಿ ಸಂಪನ್ನು ಕಟ್ಟಿ ಅದರ ಮೇಲೆ ಸಣ್ಣ ರೂಮ್ ಅನ್ನು ಕಟ್ಟಿಕೊಳ್ಳುತ್ತಾರೆ. ಪೂಜಾ ರೂಮ್, ಸ್ಟಡಿ ರೂಮ್ ಅನನು ಮಾಡಿಕೊಳ್ಳುತ್ತಾರೆ.
ಆದರೆ, ಈ ರೀತಿ ಸಂಪನ್ನು ಮನೆಯ ಹೊರಗಿನಿಂದ ಒಳಕ್ಕೆ ತೆಗದುಕೊಳ್ಳುವುದು ಅಷ್ಟು ಶುಭವಲ್ಲ. ಇಲ್ಲವೇ, ಸಂಪನ್ನು ಪೂರ್ತಿಯಾಗಿ ಮನೆಯೊಳಗಡೆಗೆ ಇಟ್ಟುಕೊಂಡು ಅದರ ಮೇಲೆ ಮಲಗುವುದಾಗಲಿ ಅಥವಾ ಮನೆಯ ಇತರೆ ಕೆಲಸಗಳಿಗೆ ಬಳಸಿಕೊಳ್ಳುವುದು ಕೂಡ ಅಶುಭ ಎಂದು ವಾಸ್ತುವಿನಲ್ಲಿ ಹೇಳಲಾಗಿದೆ. ಹೀಗೆ ಮನೆಯೊಳಗೆ ಸಂಪು ಇದ್ದರೆ, ಅದನ್ನು ಬಳಸುವುದಕ್ಕೆ ಕೊಳೆ ಹೆಚ್ಚಾಗುತ್ತದೆ. ಸ್ವಚ್ಛಗೊಳಿಸುವುದು ಕಷ್ಟವಾಗುತ್ತದೆ. ಅದರಿಂದ ಮನೆಗೆ ಸಮಸ್ಯಗಳು ಶುರುವಾಗುತ್ತವೆ.
ಇನ್ನು ಹಾಗೊಂದು ವೇಳೆ ಮನೆಯ ಒಳಗಡೆ ಸಂಪು ಇದ್ದಲ್ಲಿ ಆ ಮನೆಯನ್ನು ವಾಸಕ್ಕೆ ಬಳಸದೇ ಇರುವುದು ಬಹಳ ಒಳ್ಳೆಯದು. ಆ ಕೊಠಡಿಯೊಳಗೆ ಯುಟಿಲಿಟಿಗಳನ್ನು ಹಾಕಿಕೊಳ್ಳುವ ಬದಲು, ಅಲ್ಲಿ ಪೂಜಾ ಕೊಠಡಿಯನ್ನು ಇರಿಸುವುದು ಸೂಕ್ತ. ಅದ ಬಿಟ್ಟು, ಮಲಗಲು ಬೆಡ್ ರೂಮ್ ಇಲ್ಲವೇ ಈದಿಗಾಗಿ ಸ್ಟಡಿ ರೂಮ್ ಎಂದೆಲ್ಲಾ ಬಳಸಿದರೆ, ಅದರಿಂದ ಸಮಸ್ಯೆಗಳು ಉತ್ಪತ್ತಿಯಾಗುತ್ತವೆ. ಹಾಗಾಗಿ ವಾಸಕ್ಕೆ ಬಳಸದೇ, ಆ ರೂಮ್ ಅನ್ನು ಕೇವಲ ಪೂಜೆಗೆ ಬಳಸುವುದು ಸೂಕ್ತ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ.