ಬೆಂಗಳೂರು, ಏ. 19 : ಮನೆ ಎಂದ ಮೇಲೆ ಆದಾಯಕ್ಕಿಂತಲೂ ವೆಚ್ಚ ಕೊಂಚ ಹೆಚ್ಚಾಗಿಯೇ ಇರುತ್ತದೆ. ಆದರೆ, ಹಣ ಹೆಚ್ಚು ಕರ್ಚಾಗದಂತೆ ಅದರಲ್ಲೂ ದುಂದು ವೆಚ್ಚ ಹಾಗೆ ನೋಡಿಕೊಳ್ಳುವುದು ಹೇಗೆ ಎಂಬ ಬಗ್ಗೆ ಮಾಹಿತಿ ತಿಳಿಯೋಣ. ಈಗ ಮನೆಗೆ ಆದಾಯ ಬರುವುದು ಹಾಗೂ ದುಂದು ವೆಚ್ಚ ಮಾಡುವುದು ಎರಡೂ ಕೂಡ ಬೇರೆ. ಆದಾಯ ಬರಬೇಕು ಎಂದರೆ, ವಾಸ್ತು ಪ್ರಕಾರ ನೈರುತ್ಯ ಹಾಗೂ ಈಶಾನ್ಯದಲ್ಲಿ ಯಾವುದೇ ಸಮಸ್ಯೆಗಳು ಇರಬಾರದು. ಉತ್ತರ ದಿಕ್ಕು ಹಾಗೂ ಪೂರ್ವದಲ್ಲಿ ಸಮಸ್ಯೆ ಇಲ್ಲದೇ ಇದ್ದಾಗ ಆದಾಯ ಹೆಚ್ಚು ಬರುತ್ತದೆ. ಈ ನಾಲ್ಕು ದಿಕ್ಕುಗಳು ಸರಿಯಾಗಿದ್ದರೆ, ಮನೆಯ ಏಳಿಗೆ ಉತ್ತಮವಾಗಿ ಆಗುತ್ತದೆ.
ಇನ್ನು ಮನೆಗೆ ಆದಾಯ ಉತ್ತಮವಾಗಿದ್ದರೂ ಕೂಡ, ಹಣ ಪೋಲಾಗುವುದು. ಸುಮ್ಮನೆ ದುಂದು ವೆಚ್ಚವಾಗುತ್ತಿದ್ದರೆ ವಾಯುವ್ಯ ದಿಕ್ಕಿನ ಬಗ್ಗೆ ಗಮನ ಹರಿಸಬೇಕು. ಯಾಕೆಂದರೆ, ವಾಸ್ತುವಿನಲ್ಲಿ ವಾಯುವ್ಯ ದಿಕ್ಕಿನಲ್ಲಿ ಸಮಸ್ಯೆ ಇದ್ದರೆ, ದುಂದು ವೆಚ್ಚವಾಗುವ ಸಾಧ್ಯತೆ ಇರುತ್ತದೆ. ಈಗಾಗಲೇ ವಾಯುವ್ಯ ದಿಕ್ಕು ಚಲನೆಗೆ ಸಂಬಂಧಪಟ್ಟಿದ್ದು, ಇಲ್ಲಿ ಟಾಯ್ಲೆಟ್ ಇರಬೇಕು ಎಂದು ಹೇಳಿದ್ದೇವೆ. ಇಲ್ಲವೇ ಆಲ್ಟರ್ನೇಟ್ ಕಿಚನ್ ಇರಬಹುದು. ವಾಯುವ್ಯದಲ್ಲಿ ಯಾವುದಾದರೂ ಒಂದು ವಾಸ್ತು ದೋಷ ಇದ್ದೇ ಇರುತ್ತದೆ.
ವಾಯುವ್ಯದಲ್ಲಿ ಕಟ್ ಆಗಿರುವುದು, ಎಕ್ಸ್ ಟೆಂಷನ್ ಆಗಿರುವುದು ಇರುತ್ತದೆ. ಇದರಿಂದ ಹಣಕಾಸಿನ ಸಮಸ್ಯೆ ಅನ್ನು ಕೊಡುತ್ತದೆ. ದುಂದು ವೆಚ್ಚಗಳು ಆಗುತ್ತವೆ ಎಂದು ವಾಸ್ತುವಿನಲ್ಲಿ ಹೇಳಲಾಗಿದೆ. ಹಾಗಾಗಿ ವಾಯುವ್ಯ ದಿಕ್ಕು ಕಟ್ ಆಗದಂತೆಯೂ ಎಕ್ಸ್ಟೆಂಡ್ ಆಗದಂತೆಯೂ ಇದ್ದರೆ ಸಮಸ್ಯೆ ಇರುವುದಿಲ್ಲ. ಇನ್ನು ಎರಡನೇಯದಾಗಿ, ಮನೆಯಿಂದ ಹೊರಗೆ ಹೋಗುವ ನೀರು ಉತ್ತರದಿಂದ ನೈರುತ್ಯಕ್ಕೆ ಹರಿಯುತ್ತಿದ್ದರೆ, ಇದು ದುಂದು ವೆಚ್ಚಕ್ಕೆ ಕಾರಣವಾಗುತ್ತದೆ. ಪೂರ್ವದಿಂದ ನೈರುತ್ಯಕ್ಕೆ ನೀರು ಹರಿದರೂ ಈ ಸಮಸ್ಯೆ ಇರುತ್ತದೆ.
ಹಾಗಾಗಿ ಹಣ ದುಂದು ವೆಚ್ಚ ಆಗಬಾರದು ಎಂದಿದ್ದರೆ, ಅಗತ್ಯವಾಗಿ ವಾಯುವ್ಯ ದಿಕ್ಕಿನಲ್ಲಿ ಸಮಸ್ಯೆ ಇರದಂತೆ ನೋಡಿಕೊಳ್ಳಬೇಕು. ನೈರುತ್ಯ ದಿಕ್ಕಿಗೆ ಮನೆಯಿಂದ ನೀರು ಹೊರಗೆ ಹರಿಯದಂತೆ ನೋಡಿಕೊಳ್ಳಬೇಕಾಗುತ್ತದೆ. ಇನ್ನು ಮನೆಗೆ ಆದಾಯ ಹೆಚ್ಚಾಗಬೇಕು ಎಂದಿದ್ದರೆ, ನೈರುತ್ಯ ಹಾಗೂ ಈಶಾನ್ಯ ದಿಕ್ಕು ಸರಿಯಾಗಿದ್ದು, ಇಲ್ಲಿ ಯಾವುದೇ ಸಮಸ್ಯೆ ಕಾಣದಂತೆ ನೋಡಿಕೊಳ್ಳಬೇಕು.