20.8 C
Bengaluru
Thursday, December 5, 2024

ಅತಿ ದುಬಾರಿ ಐಷಾರಾಮಿ ಪ್ರದೇಶಗಳ ಪಟ್ಟಿಯಲ್ಲಿ ಬೆಂಗಳೂರು

ಬೆಂಗಳೂರು, ಮಾ. 03 : ಭಾರತ ದಿನ ದಿನಕ್ಕೂ ಆರ್ಥಿಕವಾಗಿ ಬೆಳೆಯುತ್ತಿದೆ. ಈ ಹಿಂದೆ ಭಾರತ ದೇಶ ಎಂದರೆ ಮೂಗು ಮುರಿಯುತ್ತಿದ್ದವರು ಈಗ ಅದೇ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತಾಗಿದೆ. ಆರ್ಥಿಕವಾಗಿ ಮಾತ್ರವಲ್ಲದೇ, ಎಲ್ಲಾ ಕ್ಷೇತ್ರದಲ್ಲೂ ಭಾರತ ವೇಗವಾಗಿ ಬೆಳವಣಿಗೆಯನ್ನು ಕಾಣುತ್ತಿದೆ. ಅದರಲ್ಲೂ ಭಾರತ ರಿಯಲ್ ಎಸ್ಟೇಟ್ ಗಗನಕ್ಕೇರಿದೆ. ಭಾರತದ ಭೂಮಿ ಈಗ ಚಿನ್ನಕ್ಕಿಂತಲೂ ದುಬಾರಿಯಾಗಿದೆ. ಭಾರತದಲ್ಲಿ ಮನೆ, ವಿಲ್ಲಾ ಖರೀದಿಸುವುದಿರಲಿ ಫ್ಲಾಟ್ ಗಳನ್ನು ಖರೀದಿಸುವುದು ಬಹಳ ದುಬಾರಿಯಾಗಿದೆ. ಅದರಲ್ಲೂ ಭಾರತದ ಪ್ರಮುಖ ನಗರಗಳಲ್ಲಿ ಐಷಾರಾಮಿ ಮನೆಗಳ ಬೇಡಿಕೆ ವಿಪರೀತ ಕಾಸ್ಟ್ಲಿ ಆಗಿದೆ

ಬೆಂಗಳೂರಿನಂತಹ ದುಬಾರಿ ನಗರಗಳಲ್ಲಂತೂ ಮನೆಯನ್ನು ಖರೀದಿಸುವುದು ಕನಸಾಗಿದೆ. ಜಗತ್ತಿನ ಐಷಾರಾಮಿ ಮನೆಗಳ ಬೆಲೆಯನ್ನು ಅವಲೋಕಿಸುವ ಪ್ರೈಮ್ ಇಂಟರ್ನ್ಯಾಷನಲ್ ರೆಸಿಡೆನ್ಷಿಯಲ್ ಇಂಡೆಕ್ಸ್ 100 ರ ಪಟ್ಟಿಯಲ್ಲಿ ಭಾರತದ ಮೂರು ನಗರಗಳು ಮುನ್ನೆಲೆಗೆ ಬಂದಿವೆ. ಅದರಲ್ಲಿ ಬೆಂಗಳೂರು ನಗರ ಹೆಚ್ಚು ದುಬಾರಿಯಾಗಿದೆ. ಭಾರತದ ದುಬೈ, ದೆಹಲಿ ಹಾಗೂ ಬೆಮಗಳೂರು ನಗರಗಳಲ್ಲಿ ಐಷಾರಾಮಿ ಮನೆಗಳನ್ನು ಖರೀದಿಸುವುದು ದುಬಾರಿಯಾಗಿದೆ. ನೈಟ್ ಫ್ರ್ಯಾಂಕ್ನ ದಿ ವೆಲ್ತ್ ರಿಪೋರ್ಟ್ 2023ರ ಭಾಗವಾಗಿ ಪಿರಿ 100 ಪಟ್ಟಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ.

ಪಿರಿ 100 ಪಟ್ಟಿಯಲ್ಲಿ ಯೂರೋಪ್ ನ ರಾಜಧಾನಿ ಮೊನಾಕೋ ಸಿಟಿ ಮೊದಲ ಸ್ಥಾನದಲ್ಲಿದೆ. ಇಲ್ಲಿ 17 ಚದರ ಮೀಟರ್ ಗೆ 8.26 ಕೋಟಿ ರೂಪಾಯಿ ಅಂದರೆ ಒಂದು ಮಿಲಿಯನ್ ಡಾಲರ್. ಇನ್ನು ಭಾರತದ ನಗರಗಳು ಕೂಡ ಈ ಪಟ್ಟಿಯಲ್ಲಿ ಇವೆ. ಇನ್ನು ಭಾರತದ ಆ ಮೂರು ನಗರಗಳಲ್ಲಿ ಒಂದು ಮಿಲಿಯನ್ ಡಾಲರ್ ಗೆ ಎಷ್ಟು ಚದರ ಮೀಟರ್ ಬರುತ್ತದೆ ಎಂಬುದನ್ನು ತಿಳಿಯೋಣ ಬನ್ನಿ. ಭಾರತದ ದುಬೈ, ದೆಹಲಿ ಹಾಗೂ ಬೆಂಗಳೂರು ನಗರ ಕೂಡ ಪಿರಿ 100 ರಲ್ಲಿ ಇದೆ. ಬೆಂಗಳೂರು 63ನೇ ಸ್ಥಾನವನ್ನು ಪಡೆದುಕೊಂಡಿದ್ದರೆ, ದುಬೈ 18ನೇ ಸ್ಥಾನದಲ್ಲಿದೆ. ದೆಹಲಿ 77ನೇ ಸ್ಥಾನಕ್ಕೆ ಏರಿದೆ.

ಈ ಮೂರು ನಗರಗಳು ಕಳೆದ ವರ್ಷಕ್ಕಿಂತ ಮುಂದೆ ಬಂದಿದ್ದು, ಮುಂಬೈನಲ್ಲಿ 113 ಚದರ ಮೀಟರ್ ಗೆ ಒಂದು ಮಿಲಿಯನ್ ಬೆಲೆ ಬಾಳುತ್ತದೆ. ಇನ್ನು ದೆಹಲಿಯಲ್ಲಿ ಒಂದು ಮಿಲಿಯನ್ ಗೆ 226 ಚದರ ಮೀಟರ್ ಐಷಾರಾಮಿ ಸ್ಥಳ ಸಿಗುತ್ತದೆ. ಬೆಂಗಳೂರಿನಲ್ಲಿ 385 ಚದರ ಮೀಟರ್ ಗೆ ಒಂದು ಮಿಲಿಯನ್ ಹಣ ನೀಡಬೇಕು. ಕಳೆದ ವರ್ಷಕ್ಕೆ ಹೋಲಿಸಿಕೊಂಡರೆ ಬೆಂಘಳೂರು ಶೇ.3 ರಷ್ಟು ಹೆಚ್ಚಳವಾಗಿದೆ. ಕಳೆದ ವರ್ಷ ಬೆಂಗಳೂರು 91 ನೇ ಸ್ಥಾನದಲ್ಲಿತ್ತು. ಈ ವರ್ಷ 63 ನೇ ಸ್ಥಾನಕ್ಕೆ ಜಂಪ್ ಆಗಿದ್ದು ಒಟ್ಟು 28 ನಂಬರ್ ಅನ್ನು ಒಂದೇ ವರ್ಷದಲ್ಲಿ ದಾಟಿದೆ. ಈ ಮೂಲ ಭಾರತದ ರಿಯಲ್ ಎಸ್ಟೇಟ್ ಉದ್ಯಮ ಅತಿ ವೇಗವಾಗಿ ಬೆಳೆಯುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

Related News

spot_img

Revenue Alerts

spot_img

News

spot_img