27.4 C
Bengaluru
Saturday, February 8, 2025

ಫೆಂಗ್ ಶೂಯಿ ವಾಸ್ತು ಪರಿಹಾರಗಳು ನಿಮಗೂ ಸಹಕಾರಿಯಾಗಬಹುದು

ಬೆಂಗಳೂರು, ಮಾ. 04 : ಫೆಂಗ್ ಶೂಯಿ ಪರಿಹಾರ ಎಂದು ಬಂದಾಗ ಮಾರುಕಟ್ಟೆಗಳಲ್ಲಿ 200-300 ಕ್ಕೂ ಅಧಿಕ ಉಪಕರಣಗಳು ಸಿಗುತ್ತವೆ. ಆದರೆ, ಇದೆಲ್ಲವನ್ನೂ ಹೆಚ್ಚಾಗಿ ಬಳಸಲು ಸಾಧ್ಯವಿಲ್ಲ. ಇದರಲ್ಲಿ ಕೆಲವನ್ನು ಬಳಸಬಹುದು. ಬಣ್ಣಗಳು, ಕನ್ನಡಿ, ಮ್ಯೂಸಿಕಲ್ ಶಬ್ಧಗಳು ಸೇರಿದಂತೆ ಒಂಭತ್ತು ಪರಿಹಾರಗಳು ಫೆಂಗ್ ಶೂಯಿ ಅಲ್ಲಿ ಇದೆ. ಇದರಲ್ಲಿ ವಿಂಡ್ ಚೈನ್ ಕೂಡ ಒಂದು. ಇದರಿಂದ ಗಾಳಿಯಲ್ಲಿ ಹಾರುವಾಗ ಒಂದಕ್ಕೊಂದು ತಾಗಿ ಮ್ಯೂಸಿಕ್ ಶುರುವಾಗುತ್ತದೆ. ಇದರಂತೆಯೇ, ಸಿಂಗಿಂಗ್ ಬೌಲ್, ಓಂ ಬೆಲ್ ಸೇರಿದಂತೆ ಹಲವು ಬಗೆಯ ಉಪಕರಣಗಳಿವೆ. ಇವುಗಳನ್ನು ತಂದು ಸರಳವಾಗಿ ಎಲ್ಲರೂ ಬಳಸುತ್ತಾರೆ.

ಇನ್ನು ಅಕ್ವೇರಿಯಂ ಅನ್ನು ಕೂಡ ತಂದು ಇಟ್ಟುಕೊಳ್ಳಬಹುದು. ಆದರೆ, ಅಕ್ವೇರಿಯಂ ಅನ್ನು ಮೇಂಟೈನ್ ಮಾಡುವುದಾದರೆ ಬಹಳ ಎಚ್ಚರ ವಹಿಸಬೇಕು. ಇನ್ನು ಯಾವ ಮೀನುಗಳನ್ನು ತರಬೇಕು ಎಂದು ಇರುತ್ತದೆ. ಇದರ ಬಗ್ಗೆ ಸರಿಯಾಗಿ ತಿಳಿದುಕೊಂಡು ಬಳಸಬೇಕು. ಇನ್ನು ಕೆಲವರು ಫೌಂಟೇನ್ ಅನ್ನು ತಂದು ಮನೆಯಲ್ಲಿ ಇಟ್ಟುಕೊಳ್ಳುತ್ತಾರೆ. ಔಆಯುವ್ಯದಲ್ಲಿ ಇದನ್ನು ತಂದು ಇಟ್ಟುಕೊಳ್ಳುವುದು ಕೂಡ ಕೆಲ ಪರಿಹಾರಗಳು ಆಗುತ್ತದೆ. ಗ್ಲೋಬ್ ಅನ್ನು ಮಕ್ಕಳು ಓದುವ ಟೇಬಲ್ ಅಲ್ಲಿ ತಂದಿಟ್ಟು, ದಿನಕ್ಕೆ ಮೂರು ಸಲ ತಿರುಗಿಸಿದರೆ, ಇದರಿಂದ ಮಕ್ಕಳ ಬುದ್ಧಿಶಕ್ತಿ ವೃದ್ಧೀಸುತ್ತದೆ ಎಂದು ಫೆಂಗ್ ಶೂಯಿ ಎಂದು ಹೇಳಲಾಗಿದೆ.

ಇನ್ನು ಲವ್ ಬರ್ಡ್ಸ್ ಅನ್ನು ತಂದು ಬೆಡ್ ರೂಮ್ ನಲ್ಲಿ ಪೂರ್ವ ಅಥವಾ ಉತ್ತರದಲ್ಲಿ ಹಾಕಿದರೆ, ಗಂಡ ಮತ್ತು ಹೆಂಡತಿ ಇಬ್ಬರ ನಡುವಿನ ಸಾಮರಸ್ಯ ಹೆಚ್ಚುತ್ತದೆ ಎಂದು ಹೇಳಲಾಗಿದೆ. ಅಲ್ಲದೇ ಫೆಂಗ್ ಶೂಯಿ ವಾಸ್ತು ಪ್ರಕಾರ, ಬ್ಯಾಂಬು ಅಂದರೆ ಬಿದಿರಿನ ಗಿಡವನ್ನು ಮನೆಯಲ್ಲಿ ಬೆಳೆಸುವುದರಿಂದ ಆರ್ಥಿಕ ಪರೀಸ್ಥಿತಿ ವೃದ್ಧಿಸುತ್ತದೆ ಎಂದು ಹೇಳಲಾಗಿದೆ. ಇಂತಹ ಸಾಕಷ್ಟು ಥೆರಪಿಗಳು ಫೆಂಗ್ ಶೂಯಿನಲ್ಲಿ ಇದೆ. ಇನ್ನು ಸೂರ್ಯೋದಯದ ಫೋಟೋವನ್ನು ಪೂರ್ವದಲ್ಲಿ ಹಾಕಬೇಕು ಎಂದು ಹೇಳುತ್ತಾರೆ. ಇನ್ನು ಓಡುವ ಕುದುರೆಯ ಫೋಟೋ, ಆಫೀಸಿನಲ್ಲಿ ಬೆಟ್ಟದ ಫೋಟೋವನ್ನು ಕುಳಿತುಕೊಳ್ಳುವ ಜಾಗದ ಹಿಂದೆ ಫೋಸ್ಟರ್ ಹಾಕುತ್ತಾರೆ.

ನೈರುತ್ಯದಲ್ಲಿ ಪೋಸ್ಟರ್ ಅನ್ನು ಇಡುವುದಾದರೆ ಅದರಲ್ಲಿ ನೀರು ಇರಬಾರದು. ಹಾಗೇನಾದರೂ ನೀರು ಹರಿಯುವ ಪೋಸ್ಟರ್ ಅನ್ನು ಇಡುವುದಾದರೆ, ವಾಯುವ್ಯದಲ್ಲಿ ಪೋಸ್ಟರ್ ಅನ್ನು ಹಾಕಬೇಕು. ಅದರಲ್ಲೂ ನೀರು ಪೂರ್ವ ದಿಕ್ಕಿಗೆ ಹರಿಯುವಂತೆ ಇರಬೇಕು. ಇನ್ನು ಲಾಫಿಂಗ್ ಬುದ್ಧವನ್ನು ಕೂಡ ಫೆಂಗ್ ಶೂಯಿ ಅಲ್ಲಿ ಇಡಲಾಗಿದೆ. ಇದರ ಜೊತೆಗೆ ಮೂರು ದೇವರನ್ನು ಫೆಂಗ್ ಶೂಯಿ ಅಲ್ಲಿ ಬಳಸಲಾಗುತ್ತೆ. ಹೀಗೆ ಫೆಂಗ್ ಶೂಯಿ ಅಲ್ಲಿ ನಾನಾ ಥರದ ವಾಸ್ತು ಪರಿಹಾರಗಳು ಇವೆ. ಇನ್ನು ಇವುಗಳ ಬಗ್ಗೆ ಮಾಹಿತಿಯನ್ನು ತಿಳಿದು ಅಳವಡಿಸಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಇನ್ನು ಭಾರತದ ವಾಸ್ತು ಹಾಗೂ ಫೆಂಗ್ ಶೂಯಿ ಎರಡನ್ನು ಬಳಸಿದರೆ ಉತ್ತಮ ಪರಿಹಾರಗಳು ಕೂಡ ಸಿಗುತ್ತವೆ.

Related News

spot_img

Revenue Alerts

spot_img

News

spot_img