ಬೆಂಗಳೂರು, ಮೇ. 31 : ಎಲ್ ಐಸಿ ನಲ್ಲಿ ನೂರಾರು ಯೋಜನೆಗಳಿವೆ. ಆದರೆ, ಎಲ್ಲಾ ಯೋಜನೆಗಳು ಕೂಡ ಹೆಚ್ಚು ಕಡಿಮೆ 18 ರಿಂದ 35 ಅಥವಾ 40 ವರ್ಷದೊಳಗೆ ಪಡೆಯುವಂತಹ ಯೋಜನೆಗಳೇ ಆಗಿವೆ. ನಂತರದಲ್ಲಿ ಯೋಜನೆಗಳನ್ನು ಪಡೆಯಲು ಕಷ್ಟವಾಗುತ್ತದೆ. ಒಂದಾ ಪ್ರಿಮಿಯಂ ಮೊತ್ತ ಹೆಚ್ಚಾಗಿರುತ್ತದೆ. ಇಲ್ಲವೇ, ಆರೋಗ್ಯ ಸಮಸ್ಯೆಗಳು ಕಾಡುವ ಸಲುವಾಗಿ ಕೆಲ ಯೋಜನೆಗಳನ್ನು 40ವರ್ಷ ಮೀರಿದವರಿಗೆ ನೀಡಲಾಗುವುದಿಲ್ಲ. ಆದರೆ ಇಲ್ಲೊಂದು ಯೋಜನೆ ಇದೆ 60 ವರ್ಷದವರೆಗೂ ಪಡೆಯಬಹುದು.
ಎಲ್ ಐಸಿ ನಲ್ಲಿ ಧನ್ ರೇಖಾ ಎಂಬ ಯೋಜನೆ ಬಗ್ಗೆ ಕೇಳಿದ್ದೀರಾ..? ಇಲ್ಲದಿದ್ದರೆ, ಈ ಲೇಖನವನ್ನು ಸಂಪೂರ್ಣವಾಗಿ ಓದಿ. ಈ ಯೋಜನೆ ಅಡಿಯಲ್ಲಿ ನೀವು ಪ್ರತಿ ತಿಂಗಳೂ 833 ರೂಪಾಯಿ ಪಾವತಿಸಿದರೆ ಸಾಕು. ಅಕಸ್ಮಾತ್ ಆಗಿ ವ್ಯಕ್ತಿ ಸಾವನ್ನಪ್ಪಿದರೆ, ಆ ಕುಟುಂಬಕ್ಕೆ ಒಂದು ಕೋಟಿ ಹಣವನ್ನು ಎಲ್ ಐಸಿ ನೀಡುತ್ತದೆ. ಈಗ ಅಂದಾಜು 35ವರ್ಷವಿದ್ದು, ವ್ಯಕ್ತಿ ಈ ಯೋಜನೆಯನ್ನು ಪಡೆದರೆ, 42 ವರ್ಷವಿದ್ದಾಗ ಆಕಸ್ಮಿಕವಾಗಿ ಸಾವನ್ನಪ್ಪಿದ ಎಂದು ಭಾವಿಸಿ.
ಆಗ ವ್ಯಕ್ತಿಯ ಕುಟುಂಬಕ್ಕೆ ಎಲ್ ಐಸಿ ಕಂಪನಿಯು 50 ಲಕ್ಷವನ್ನು ಯೋಜನೆ ಅಡಿಯಲ್ಲಿ ನೀಡಲಿದ್ದು, ಮತ್ತೆ 50ಲಕ್ಷ ಮೊತ್ತವನ್ನು ಮರಣದ ಪ್ರಯೋಜನವನ್ನು ವ್ಯಕ್ತಿ ಆಯ್ಕೆ ಮಾಡಿದ್ದರಿಂದ ನೀಡುತ್ತದೆ. ಇದು ಒಟ್ಟು ಒಂದು ಕೋಟಿ ಆಗುತ್ತದೆ. ಧನ್ ರೇಖಾ ಪಾಲಿಸಿಯ ಮೆಚ್ಯುರಿಟಿಯು 70 ವಯಸ್ಸಿನಲ್ಲಗಲಿದ್ದು, 18 ರಿಂದ 60 ವರ್ಷದವರೆಗೂ ಪಾವತಿ ಮಾಡಬಹುದಾಗಿದೆ. ಅಷ್ಟೇ ಅಲ್ಲದೇ, ಈ ಯೋಜನೆಯು ತೆರಿಗೆ ವಿನಾಯ್ತಿ ಕಾಯ್ದೆ ಅಡಿಯಲ್ಲಿ ಬರುತ್ತದೆ.
ಇನ್ನು ಈ ಯೋಜನೆಯನ್ನು ಪಡೆದವರು ತಿಂಗಳಿಗೆ 833 ರೂಪಾಯಿಯಂತೆ ತಿಂಗಳಿಗೆ 10,000 ರೂ. ಹಾಗೂ ವರ್ಷಕ್ಕೆ 1,20,000 ರೂ.ಪಾಯಿಯನ್ನು ಪಾವತಿಸಬೇಕಾಗುತ್ತದೆ. ಪ್ರಿಮಿಯಂ ಮೊತ್ತ ಕಡಿಮೆ ಇದ್ದರೂ ಇದಕ್ಕೆ ಬರುವ ರಿಟರ್ನ್ಸ್ ಮೊತ್ತ ಬಹಳ ದೊಡ್ಡದಿದೆ. ಈ ಕೂಡಲೇ ಎಲ್ ಐಸಿ ಕಚೇರಿಗೆ ತೆರಳಿ ಧನ್ ರೇಖಾ ಯೋಜನೆಯನ್ನು ಪಡೆದರೆ, ಮುಂದಿನ ನಿಮ್ಮ ಭವಿಷ್ಯ ಉತ್ತಮವಾಗಿರಲಿದೆ.