21.2 C
Bengaluru
Tuesday, December 3, 2024

ಉದ್ಯೋಗಿಗಳ ವಜಾ ಹಿನ್ನೆಲೆ ಬೆಂಗಳೂರಿನಲ್ಲಿ ಬಾಡಿಗೆ ಮನೆಗಳ ಬೇಡಿಕೆ ಕುಸಿತ: ಆತಂಕದಲ್ಲಿ ಮಾಲೀಕರು

ಬೆಂಗಳೂರು, ಫೆ. 07 : ಈಗ ಜಾಗತಿಕ ಮಟ್ಟದಲ್ಲಿ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಲಾಗುತ್ತಿದೆ. ಸಾಕಷ್ಟು ಕಂಪನಿಗಳು ತಮ್ಮ ಉದ್ಯೋಗಿಗಳನ್ನು ವಜಾಗುಳಿಸುತ್ತಿವೆ. ಸ್ವಿಗ್ಗಿ, ಅಮೆಜಾನ್, ಟ್ವಿಟರ್ ಸೇರಿದಂತೆ ಮೈಕ್ರೋಸಾಫ್ಟ್, ಐಟಿ ಕಂಪನಿಗಳು ಕಳೆಡದ ಮೂರು ತಿಂಗಳಿನಿಂದ 2 ಲಕ್ಷಕ್ಕೂ ಅಧಿಕ ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ. ಇದರಿಂದ ಸಾಕಷ್ಟು ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಮೈಕ್ರೋಸಾಫ್ಟ್ ಇಂಡಿಯಾ ಬೆಂಗಳೂರು ಮತ್ತು ಹೈದರಾಬಾದ್ ನಲ್ಲಿ ಉದ್ಯೋಗಿಗಳನ್ನು ಮನೆಗೆ ಕಳಿಸುತ್ತಿದ್ದಾರೆ. ಇದರಿಂದ ಉದ್ಯೋಗಿಗಳು ಕೆಲಸ ಕಳೆದುಕೋಮಡು ವಾಪಸ್ ತಮ್ಮ ತವರಿಗೆ ಮರಳುತ್ತಿದ್ದಾರೆ. ಇದು ಬೆಂಗಳೂರಿನ ವಸತಿ ವಲಯದ ಮೇಲೆ ಭಾರೀ ಪರಿಣಾಮ ಬೀರುತ್ತಿದೆ ಎಂದು ತಜ್ಞರು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ದೊಡ್ಡ ದೊಡ್ಡ ಟೆಕ್‌ ಕಂಪನಿಗಳು ಇವೆ. ರಾಜ್ಯವಷ್ಟೇ ಅಲ್ಲದೇ, ಹೊರ ರಾಜ್ಯಗಳಿಂದಲೂ ಐಟಿ ಉದ್ಯೋಗಿಗಳು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಇದರಿಂದಾಗಿಯೇ ನಗರದಲ್ಲಿ ರಿಯಲ್‌ ಎಸ್ಟೇಟ್‌ ಕ್ಷೇತ್ರ ಬೆಳೆದಿದ್ದು, ಇದೀಗ ಎಲ್ಲರೂ ಕೆಲಸ ಬಿಡುತ್ತಿರುವ ಕಾರಣ ಇದು ನಗರದ ವಸತಿ ವಲಯದ ಮೇಲೆ ಪರಿಣಾಮ ಬೀರುತ್ತಿದೆ. ಈ ಬಗ್ಗೆ ಕಾನ್ಫೆಡರೇಶನ್ ಆಫ್ ರಿಯಲ್ ಎಸ್ಟೇಟ್ ಅಸೋಸಿಯೇಟ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಕೆಲಸ ಅರಸಿ ನಿತ್ಯ ನೂರಾರು ಮಂದಿ ಬೆಂಗಳುರಿಗೆ ಬರುತ್ತಾರೆ. ಇವರೆಲ್ಲಾ ತಮ್ಮ ಕೆಲಸದ ಕಂಪನಿಗಳಿರುವ ಸುತ್ತ ಮುತ್ತಲೇ ಮನೆಗಳನ್ನು ಬಾಡಿಗೆಗೆ ಪಡೆಯುತ್ತಾರೆ.

 

ಆದರೆ, ಈಗ ಕೆಲಸವನ್ನು ಕಳೆದುಕೊಂಡು ಊರಿಗೆ ಮರಳುತ್ತಿರುವವರೆಲ್ಲಾ ಮನೆಯನ್ನು ಖಾಲಿ ಮಾಡಿಕೊಂಡು ಹೋಗುತ್ತಿದ್ದಾರೆ. ಇದರಿಂದ ಸಾಕಷ್ಟು ಮನೆಗಳು ಖಾಲಿ ಉಳಿದಿವೆ. ಈ ಹಿಂದೆ ಕೋವಿಡ್‌ ಬಂದಾಗಲೂ ಎಲ್ಲರೂ ಮನೆ ಖಾಲಿ ಮಾಡಿಕೊಂಡು, ವರ್ಕ್‌ ಫ್ರಮ್ ಹೋಮ್‌ ಎಂದು ಊರುಗಳಿಗೆ ತೆರಳಿದ್ದರು. ಆಗಲು ಮನೆಗಳು ಖಾಲಿ ಉಳಿದಿದ್ದವು. ಇದರಿಂದ ಚೇತರಿಸಿಕೊಲ್ಳುವ ಮುನ್ನವೇ ಮತ್ತೆ ರಿಸೆಶನ್‌ ಕಾರಣದಿಂದ ಮನೆಗಳು ಖಾಲಿಯಾಗುತ್ತಿವೆ. ಇದು ಮನೆ ಮಾಲೀಕರಿಗೂ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಇದು ರಿಯಲ್‌ ಎಸ್ಟೇಟ್‌ ಕ್ಷೇತ್ರದ ಮೇಲೆ ಭಾರೀ ಪರಿಣಾಮ ಬೀಳುತ್ತಿದೆ.

ಹೀಗೆ ಎಲ್ಲರೂ ಮನೆ ಖಾಲಿ ಮಾಡಿಕೋಮಡು ಹೋಗುತ್ತಿರುವುದರಿಂದ, ಮಾಲೀಕರು ಮನೆಯನ್ನು ವರ್ಷಾನುಗಟ್ಟಲೆ ಖಾಲಿ ಬಿಡಲಾಗದೇ, ಕೆಲವರು ಕಾಂಪ್ರಮೈಸ್‌ ಆಗುತ್ತಿದ್ದಾರೆ. ಬೆಂಗಳೂರಿನಲ್ಲಿ ಬಾಡಿಗೆ ಮನೆಗಳ ಬೆಲೆ ಕೇಳಿದರೆ ತಲೆ ತಿರುಗು ಬೀಳುತ್ತಿದ್ದೆವು. ಆದರೆ, ಈಗ ಮಾಲೀಕರು ಮನೆ ಬಾಡಿಗೆಯನ್ನು ಡಿಸ್ಕೌಂಟ್‌ ರೀತಿ ಕೊಡಲು ಪ್ರಾರಂಭಿಸಿದ್‌ದಾರೆ. ಈಗಾಗಲೇ ಬಾಡಿಗೆ ಮನೆಗಳ ಬೇಡಿಕೆ ಇಳಿಮುಖ ಕಂಡಿದೆ. ಅದರಲ್ಲೂ ರಿಚ್ಮಂಡ್‌ ಸರ್ಕಲ್‌, ಎಂಜಿ ರೋಡ್‌ ಗಳಲ್ಲಿ ಅದಾಗಲೇ ಶೇ. 15 ರಷ್ಟು ಬಾಡಿಗೆ ಮನೆಗಳ ಬೇಡಿಕೆ ಕುಸಿತ ಕಂಡಿರುವುದು ವರದಿಯಾಗಿದೆ.

 

ವೈಟ್‌ ಫೀಲ್ಡ್‌, ಸರ್ಜಾಪುರ, ಔಟರ್‌ ರಿಂಗ್‌ ರೋಡ್‌, ಹೆಬ್ಬಾಳ, ಕೆ.ಆರ್.ಪುರಂ ಸೇರಿದಂತೆ ಐಟಿ ಕಂಪನಿಗಳಿರುವ ಸ್ಥಳಗಳಲ್ಲಿ ಬಾಡಿಗೆ ಅಪಾರ್ಟ್‌ ಮೆಂಟ್‌ ಗಳ ಬೇಡಿಕೆ ಭಾರೀ ಕುಸಿತ ಕಂಡಿವೆ. ಈಗಾಗಲೇ ಶೇ. 5 ರಿಂದ 10 ರಷ್ಟು ರಿಯಾಯಿತಿಯನ್ನು ನೀಡಲು ಮಾಲೀಕರು ಮುಂದಾಗಿದ್ದಾರೆ. ಈ ಸ್ಥಳಗಳಲ್ಲಿ ಎರಡು ಬೆಡ್ರೂಮ್‌ ಮನೆಗಳಿಗೆ 40,000 ಸಾವಿರ ಬಾಡಿಗೆಯ ನೀಡಲಾಗುತ್ತಿತ್ತು. ಆದರೆ, ಇದೀಗ ಬರೋಬ್ಬರಿ 25,000 ಸಾವಿರಕ್ಕೆ ಇಳಿಕೆಯಾಗಿದೆ. ಇದು ಇನ್ನಷ್ಟು ಇಳಿಕೆ ಕಾಣಲಿದೆ ಎಂದು ಹೇಳಲಾಗಿದೆ. ಮನೆ ಮಾಲೀಕರು ಈಗ ತಮ್ಮ ಆದಾಯದ ಮೊತ್ತ ಕಡಿಮೆಯಾಗುತ್ತಿರುವುದಕ್ಕೆ ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ.

Related News

spot_img

Revenue Alerts

spot_img

News

spot_img