ಬೆಂಗಳೂರು, ಮಾ. 10 : ಸರ್ಕಾರ ಬಡವರಿಗಾಗಿ ಸಾಕಷ್ಟು ವಸತಿ ಯೋಜನೆಗಳನ್ನು ಕೈಗೊಂಡಿದೆ. ಅದರಲ್ಲಿ ರಾಜೀವ್ ಗಾಂಧಿ ನಿಗಮದ ವತಿಯಿಂದ ಒಂದು ಲಕ್ಷ ಬಹುಮಹಡಿ ಗಳನ್ನು ಬೆಂಗಳೂರು ನಗರದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಈ ಯೋಜನೆ ಅಡಿಯಲ್ಲಿ ವಸತಿ ಇಲ್ಲದ ಒಂದು ಲಕ್ಷ ಬಡವರಿಗೆ ಮನೆಯನ್ನು ನಿರ್ಮಿಸಿಕೊಡುವುದೇ ಸರ್ಕಾರದ ಉದ್ದೇಶ. ಇದೀಗ ವಸತಿ ಯೋಜನೆಯನ್ನು ಪಡೆಯಲು ಅರ್ಜಿಯನ್ನು ಆಹ್ವಾನಿಸಲಾಗಿದೆ.
ಬೆಂಗಳೂರು ನಗರಜಿಲ್ಲೆ ವ್ಯಾಪ್ತಿಯ 5 ತಾಲ್ಲೂಕುಗಳಲ್ಲಿ ಬರುವ ಸರ್ಕಾರಿ ಜಮೀನುಗಳಲ್ಲಿ ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ “ ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆ” ಅಡಿಯಲ್ಲಿ 2ಬಿ.ಹೆಚ್.ಕೆ.- 809, ಫ್ಲಾಟ್ /ಮನೆಗಳನ್ನು Shear Wall ತಂತ್ರಜ್ಞಾನವನ್ನು ಅಳವಡಿಸಿಕೊಂಡು ನಿರ್ಮಿಸಲಾಗುತ್ತಿದೆ. ಇವುಗಳ ಪೈಕಿ ಮೊದಲ ಹಂತದಲ್ಲಿ 3138 [G+3 to S+14], ಫ್ಲಾಟ್ ಮನೆಗಳ ಹಂಚಿಕೆಗಾಗಿ ಆನ್-ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಪ್ರತಿ ಮನೆ ಫ್ಲಾಟ್ 485 ಚದರ ಅಡಿಗಳಿದ್ದು, ಒಂದು ಹಾಲ್, ಒಂದು ಮಲಗುವ ಕೋಣೆ (ಸ್ನಾನ ಗೃಹ ಸಹಿತ), ಮತ್ತೊಂದು ಮಲಗುವ ಕೋಣೆ, ಪ್ರತ್ಯೇಖ ಸ್ನಾನ ಹಾಗೂ ಶೌಚ ಗೃಹ ಮತ್ತು ಒಂದು ಅಡುಗೆ ಕೋಣೆಯೊಂದಿಗೆ ಯುಟಿಲಿಟಿ ಒಳಗೊಂಡಿರುತ್ತದೆ. ಪ್ರತಿ ಘಟಕದ ಅಂದಾಜು ಮೊತ್ತ ರೂ.14.00 ಲಕ್ಷ ರೂಪಾಯಿ. 2 ಜಿ.ಹೆಚ್.ಕೆ. ಮನೆ ಫ್ಲಾಟ್ಗಳ ಹಂಚಿಕೆಗಾಗಿ ಆನ್ ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು. ಯೋಜನೆಯ ಫಲಾನುಭಾವಿಗಳಾಗಲು ಕೆಲ ದಾಖಲೆಗಳನ್ನು ಕೂಡ ಸಲ್ಲಿಸಬೇಕು. ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ, ಕುಟುಂಬದ ಪಡಿತರ ಚೀಟಿ ಸಂಖ್ಯೆ ಅನ್ನು ಸಲ್ಲಿಸಬೇಕು.
ಜೊತೆಗೆ ಕುಟುಂಬದ ಆದಾಯ ಪ್ರಮಾಣ ಪತ್ರ ಅಲ್ಲಿಸಬೇಕು. ಇದರೊಂದಿಗೆ ಈ ಯೋಜನೆ ಅಡಿಯಲ್ಲಿ ಫಲಾನುಭವಿಗಳಾಗಲು ಬೆಂಗಳೂರಿನಲ್ಲಿ ಕಳೆದ ಐದು ವರ್ಷದಿಂದ ವಾಸವಾಗಿರುವ ದೃಢೀಕರಣ ಪತ್ರ ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆ, (ಖಾತೆ ಸಂಖ್ಯೆ, ಬ್ಯಾಂಕ್ ಹೆಸರು, ಬ್ರಾಂಚ್ ಹೆಸರು, ಐಎಫ್ಎಸ್ ಸಿ ಸಂಖ್ಯೆ) ಹಾಗೂ ದಿವ್ಯಾಂಗ ಗುರುತಿನ ಚೀಟಿ ಅನ್ನು ಅರ್ಜಿಯೊಂದಿಗೆ ಸಲ್ಲಿಕೆ ಮಾಡಬೇಕು. ಫ್ಲಾಟ್ ಆಯ್ಕೆಯಾದವರು ಹಣವನ್ನು ಹಂತಗಳಲ್ಲಿ ಪಾವತಿಸಬೇಕಾಗುತ್ತದೆ.
ಫ್ಲಾಟ್ ಗಾಗಿ ಒಟ್ಟು 14 ಲಕ್ಷ ರೂಪಾಯಿಯನ್ನು ಕಟ್ಟಬೇಕು. ಅರ್ಜಿ ಪರಿಶೀಲಿಸಿ ಆಯ್ಕೆಯಾದ ಮೇಲೆ 3 ಲಕ್ಷ ರೂಪಾಯಿಯನ್ನು ಪಾವತಿಸಬೇಕು. ಫ್ಲಾಟ್ ಅನ್ನು ಆಯ್ಕೆ ಮಾಡಿದ 30 ದಿನಗಳೊಳಗೆ 5 ಲಕ್ಷ ರೂಪಾಯಿ ಅನ್ನು ನೀಡಬೇಕು. ಇನ್ನು ಕೊನೆಯದಾಗಿ ಫ್ಲಾಟ್ ಅನ್ನು ನೋಂದಣಿ ಮಾಡಿಸಿಕೊಳ್ಳುವಾಗ 6 ಲಕ್ಷ ರೂಪಾಯಿಯನ್ನು ಸಂದಾಯ ಮಾಡಬೇಕು. ಒಟ್ಟು ಮೂರು ಕಂತುಗಳಲ್ಲಿ ಹಣವನ್ನು ಸಂದಾಯ ಮಾಡಬೇಕು. ಹೆಚ್ಚಿನ ವಿವರಗಳಿಗಾಗಿ:https://ashraya.karnataka.gov.in ವೆಬ್ ಸೈಟ್ ಗೆ ಭೇಟಿ ಕೊಡಬಬಹುದು. ಇಲ್ಲವೇ 9164239699, 8660807796, 9448277072, 9448021564, 9606138200, 7975956234 ಈ ಸಂಖ್ಯೆಗಳಿಗೆ ಕರೆ ಮಾಡಿ ಮಾಹಿತಿಯನ್ನು ಪಡೆಯಬಹುದು.