26.1 C
Bengaluru
Saturday, April 26, 2025

ಮನೆಯ ಆವರಣದಲ್ಲಿ ಮರಗಳು ಇದ್ದರೆ ತೊಂದರೆ ಎದುರಾಗುತ್ತಾ..?

ಬೆಂಗಳೂರು, ಜ. 23 : ಎಲ್ಲರಿಗೂ ತಮ್ಮ ಮನೆಯನ್ನು ಹಸಿರಿನಿಂದ ಕಂಗೊಳಿಸುವಂತೆ ಮಾಡಬೇಕು ಎಂಬ ಆಸೆ ಇರುತ್ತದೆ. ಮನೆಯ ಮುಂದೆ ಜಾಗ ಬಿಟ್ಟು, ಅಲ್ಲಿ ಕೆಲ ಗಿಡ-ಮರಗಳನ್ನು ಬೆಳೆಸುತ್ತಾರೆ. ಆದರೆ ಈ ಗಿಡ-ಮರಗಳಿಂದ ಮನೆಗೆ ಸಮಸ್ಯೆಯಾಗುತ್ತದೆ. ಅಥವಾ ಮನೆಗೆ ಒಳ್ಳೆಯದಲ್ಲ ಎಂಬುದಾದರೆ, ಅಂತಹ ಮರಗಳನ್ನು ಬೆಳೆಸುವುದು ಸೂಕ್ತವಲ್ಲ. ಇದರ ಬಗ್ಗೆ ವಾಸ್ತು ಶಾಸ್‌ತರದಲ್ಲಿ ಏನು ಹೇಳಲಾಗಿದೆ ಎಂದು ತಿಳಿಯೋಣ ಬನ್ನಿ.. ಪರಿಸರದಲ್ಲಿ ವೃಕ್ಷಗಳು ಇರುವುದು ಅಗತ್ಯ. ಆದರೆ, ವೃಕ್ಷ ವೇದದಲ್ಲಿ ಏನು ಹೇಳಲಾಗಿದೆ ಗೊತ್ತೇ..?

 

ಯಾವುದೇ ಗಿಡ ಮರ ಇದ್ರೂ ಕೂಡ ಮನುಷ್ಯರಿಗೆ ಹಲವು ಲೈಫ್‌ ಸಪೋರ್ಟ್‌ ಸಿಗುತ್ತದೆ. ಪರಿಸರದಲ್ಲಿ ಹೆಚ್ಚು ಗಿಡ ಮರಗಳು ಇದ್ದಷ್ಟು ಉಸಿರಾಟಕ್ಕೆ ಒಳ್ಳೆಯದಾಗುತ್ತದೆ. ಹಾಗಾಗಿ ನಮ್ಮ ಸುತ್ತ ಗಿಡ ಮರಗಳು ಇರುವುದು ಸೂಕ್ತ. ಇನ್ನು ವಾಸ್ತು ಪ್ರಕಾರವಾಗಿ ಮನೆಯ ಆವರಣದಲ್ಲಿ ಗಿಡ ಮರಗಳು ಇರುವುದಕ್ಕೂ, ಮನೆಯ ಕಾಂಪೌಂಡ್‌ ಹೊರಗಡೆ ಇರುವುದಕ್ಕೂ ವ್ಯತ್ಯಾಸವಿರುತ್ತದೆ. ಹಾಗಾದರೆ ಮೊದಲನೇಯದಾಗಿ ಕಾಂಪೌಂಡ್‌ ಒಳಗಿರುವ ಬಗ್ಗೆ ತಿಳಿಯೋಣ. ಗಿಡ ಮರಗಳೀಂದ ಮನೆಗೆ ಬೆಳಕು ಬರುತಿಲ್ಲ ವೆಂದರೆ ಅದು ಒಳ್ಳೆಯದಲ್ಲ. ಯಾಕೆ ಸೂರ್ಯನ ಕಿರಣಗಳು ಮನೆಗೆ ಬೇಕು ಎಂಬುದನ್ನು ಈ ಹಿಂದೆಯೇ ಹೇಳಲಾಗಿದೆ.

ಇನ್ನು ಆಲದ ಮರ, ಅರಳಿ ಮರ, ಹುಣಸೆ ಮರ, ಬೇವಿನ ಮರ, ಹತ್ತಿ ಮರಗಳು ಮನೆಯ ಸುತ್ತ ಇರುವುದು ಸೂಕ್ತವಲ್ಲ. ಆಲದ ಮರದ ಕೆಳಗೆ ಮತ್ಯಾವ ಗಿಡ ಮರಗಳು ಬೆಳೆಯುವುದಿಲ್ಲ. ಆಲದ ಮರ ಒಳ್ಳೆಯದೇ ಆದರೂ, ಎಲ್ಲಾ ಎನರ್ಜಿಯನ್ನು ಅದೊಂದೇ ತೆಗೆದುಕೊಳ್ಳುತ್ತದೆ. ಇನ್ನು ಅರಳಿ ಮರ ಎಂದರೆ, ಅದರಲ್ಲಿ ದೇವರ ವಾಸವಿರುತ್ತದೆ ಎಂದು ಹೇಳುತ್ತೇವೆ. ಹಾಗಾಗಿ ಇಂತಹ ಮರಗಳೆಲ್ಲವೂ ಆದಷ್ಟು ಮನೆಯ ಆವರಣದಿಂದ ದೂರ ಇರಬೇಕು. ಇನ್ನು ಹುಣಸೆ ಮರವು ಹಗಲಿನಲ್ಲಿ ಅದರ ಕೆಳಗೆ ಕುಳಿತುಕೊಳ್ಳಬಹುದು. ಆದರೆ, ರಾತ್ರಿ ಮಲಗಿದ್ದರೆ, ಮರದ ಬುಡದ ಬಳೀಗೆ ಹೋಗಿರುತ್ತೇವೆ. ಇದನ್ನು ಜನ ಪಿಶಾಚಿ ಎಂದೆಲ್ಲಾ ಹೇಳುತ್ತಾರೆ. ಆದರೆ, ಹುಣಸೆ ಮರ ಅತಿ ಹೆಚ್ಚು ಕಾರ್ಬನ್‌ ಡಯಾಕ್ಸೈಡ್‌ ಅನ್ನು ರಿಲೀಸ್‌ ಮಾಡುತ್ತದೆ. ಇದರಿಂದಲೇ ಹೀಗಾಗುವುದು.

ಇವೆಲ್ಲಾ ಇಂತಹ ಸ್ಥಳಗಳಲ್ಲೇ, ದಿಕ್ಕುಗಳಲ್ಲೇ ಇರಬೇಕು ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಇನ್ನೊಂದು ಕಡೆ ಮನೆಯ ಕಾಂಪೌಂಡ್‌ ಒಳಗಡೆ ಮರಗಳು ಇರಬೇಕೆಂದರೆ ಯಾವ ದಿಕ್ಕಿನಲ್ಲಿ ಇರಬೇಕು ಎಂಬುದನ್ನು ನೋಡಬೇಕು. ಇನ್ನು ಮನೆಯ ಮುಂದೆಗಡೆ ಮರಗಳನ್ನು ಬೆಳೆಸಬೇಕು ಎಂದರೆ ಪೂರ್ವದಲ್ಲಿ ಅಥವಾ ಉತ್ತರದಲ್ಲಿ ಆದರೆ, ಚಿಕ್ಕ ಗಿಡಗಳು ಇರಬಹುದು. ಆದಷ್ಟು ನಾಲ್ಕು ಅಡಿ ಅಷ್ಟು ಇದ್ದರೆ ಒಳ್ಳೆಯದು. ಇನ್ನು ಈ ದಿಕ್ಕಿನಲ್ಲಿ ಮನೆಯ ಎದುರು ಲಾನ್‌ ಇದ್ದರೂ ಓಕೆ. ಇನ್ನು ಮನೆಯ ಪಶ್ಚಿಮ ಹಾಗೂ ದಕ್ಷಿಣದಲ್ಲಿ ದೊಡ್ಡ ದೊಡ್ಡ ಮರಗಳು ಇದ್ದರೆ ತೊಂದರೆ ಇಲ್ಲ. ಯಾವುದೇ ಮರ ಎತ್ತರವಾಗಿ ಬೆಳೆದು, ಪಾಯಕ್ಕೆ ಅದರ ಬೇರಿನಿಂದ ತೊಂದರೆಯಾಗುತ್ತದೆ ಎಂದರೆ ಬೆಳೆಸುವುದು ಒಳ್ಳೆಯದಲ್ಲ.

Related News

spot_img

Revenue Alerts

spot_img

News

spot_img