ಬೆಂಗಳೂರು, ಜ. 23 : ಭಾರತದಲ್ಲಿ ಸರಿಸುಮಾರು 4000 ನಗರಗಳು ಮತ್ತು ಪಟ್ಟಣಗಳು ಇವೆ. 140 ಕೋಟಿಗೂ ಹೆಚ್ಚು ಜನರು ಭಾರತದಲ್ಲಿ ವಾಸಿಸುತ್ತಿದ್ದಾರೆ. ಪ್ರತಿ ನಗರಗಳಲ್ಲೂ ಭೌತಿಕ ಮೂಲಸೌಕರ್ಯ, ಸಾಮಾಜಿಕ ಮೂಲಸೌಕರ್ಯ ಮತ್ತು ಗುಣಮಟ್ಟದ ವಸತಿಗಳು ವಿಭಿನ್ನವಾಗಿವೆ. ಕೆಲವು ನಗರಗಳು ಆರ್ಥಿಕತೆ, ದೃಢವಾದ ಮೂಲಸೌಕರ್ಯ ಅಥವಾ ಸುಸ್ಥಿರ ಅಭಿವೃದ್ಧಿಯನ್ನು ಸುಧಾರಿಸಲು ಸಲೀಸಾಗಿ ಕೆಲಸ ಮಾಡುತ್ತವೆ. ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಬಿಡುಗಡೆ ಮಾಡಿದ ಈಸ್ ಆಫ್ ಲಿವಿಂಗ್ ಸೂಚ್ಯಂಕದ ಪ್ರಕಾರ ಭಾರತದಲ್ಲಿ ಹೆಚ್ಚು ವಾಸಯೋಗ್ಯ ನಗರಗಳನ್ನು ಹುಡುಕಿದ್ದಾರೆ. ಅದರಲ್ಲಿ ಮುಖ್ಯವಾಗಿ ಬೆಂಗಳುರು ನಗರ ಟಾಪ್ ಮೊದಲನೇ ಸ್ಥಾನವನ್ನು ಪಡೆದುಕೊಂಡಿದೆ.
ಭಾರತದ ವಾಸಯೋಗ್ಯ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಅಗ್ರಸ್ಥಾನವನ್ನು ಪಡೆದುಕೊಂಡಿದೆ. ಭಾರತದ ಈ ಸ್ಟಾರ್ಟ್ ಅಪ್ ಕ್ಯಾಪಿಟಲ್ ಯಾವಾಗಲೂ ತನ್ನ ಸಂಪೂರ್ಣ ಪರಿಪೂರ್ಣತೆಯಿಂದ ಮಂತ್ರಮುಗ್ಧಗೊಳಿಸುತ್ತದೆ. ಬೆಂಗಳೂರು ನಗರವು 2022 ರಲ್ಲಿ ವಾಸಿಸಲು ಭಾರತದ ಅತ್ಯುತ್ತಮ ನಗರಗಳಲ್ಲಿ ಮೊದಲ ಸ್ಥಾನದಲ್ಲಿದೆ. ಬೆಂಗಳೂರು ತನ್ನ IT ಮೂಲಸೌಕರ್ಯ, ಪ್ರಾರಂಭ ಮತ್ತು ಟ್ರಾಫಿಕ್‌ಗೆ ಸಹ ಪ್ರಸಿದ್ಧವಾಗಿದೆ. ಈ ನಗರವು 8.4 ಮಿಲಿಯನ್ ಜನಸಂಖ್ಯೆಯೊಂದಿಗೆ 709 ಚದರ ಕಿಲೋಮೀಟರ್‌ಗಳಲ್ಲಿ ಹರಡಿದೆ. ಅಲ್ಲದೆ, 2011 ರ ಜನಗಣತಿಯ ಪ್ರಕಾರ ಬೆಂಗಳೂರು ದೇಶದ ಮೂರನೇ ಅತಿದೊಡ್ಡ ನಗರವಾಗಿದೆ. ನೀವು ಬೆಂಗಳೂರಿನಲ್ಲಿರುವಾಗ ಲಾಲ್ ಬಾಗ್, ಚರ್ಚ್ ಸ್ಟ್ರೀಟ್, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ, ಕಬ್ಬನ್ ಪಾರ್ಕ್ ಮತ್ತು ಮತ್ತಷ್ಟು ಸ್ಥಳಗಳನ್ನು ನೋಡುವುದನ್ನು ಮರೆಯಲೇ ಬಾರದು.
ಭಾರತವಷ್ಟೇ ಅಲ್ಲದೇ, ವಿದೇಶಿಗರು ಕೂಡ ಬೆಂಗಳುರಿನಲ್ಲಿ ವಾಸ ಮಾಡಲು ಬಯಸುತ್ತಾರೆ. ಸಾಕಷ್ಟು ಯುವಕರು ಬೆಂಗಳೂರಿನಲ್ಲಿ ವ್ಯಾಸಂಗ ಮಾಡಲು ಬರುತ್ತಾರೆ. ಇನ್ನೂ ಕೆಲವರು ಕೆಲಸವನ್ನು ಹರಸಿಕೊಂಡು ಬೆಂಗಳೂರಿಗೆ ಬರುತ್ತಾರೆ. ಬೆಂಗಳೂರಿನಲ್ಲಿ ಕೆಲಸ ಮಾಡುವುದು ಸುಲಭ ಎಂದು ಹೇಳುತ್ತಾರೆ. ಇಲ್ಲಿ ವಾಸಿಸಲು ವಾತಾವರಣವೂ ಚೆನ್ನಾಗಿರುತ್ತದೆ ಎಂಬುದು ಕೂಡ ಹಲವರ ಮಾತು. ಮಳೆ, ಚಳಿ, ಬಿಸಿಲು ಎಲ್ಲವೂ ಸಮವಾಗಿರುತ್ತದೆ. ಅತಿವೃಷ್ಟಿ ಅನಾವೃಷ್ಟಿ ಇರುವುದಿಲ್ಲ. ಇಂತಹ ವಾತಾವರಣ ಎಲ್ಲಾ ಕಾಲಕ್ಕೂ ಜನರಿಗೆ ಇಷ್ಟವಾಗುತ್ತದೆ. ಹಾಗಾಗಿ ಬೆಂಗಳೂರಿಗೆ ಬಂದು ನೆಲೆಸಲು ಹಲವರು ಬಯಸುತ್ತಾರೆ.
ಇನ್ನು ಬೆಂಗಳೂರು ಮೊದಲಿನಂತಿಲ್ಲ. ಈಗ ಬಹಳ ಬೇಗ ಬೆಳೆದಿರುವ ನಗರವಾಗಿದೆ. ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಬಿಸಿನೆಸ್ ಕೂಡ ಗಗನದೆತ್ತರಕ್ಕೆ ಬೆಳದು ನಿಂತಿದೆ. ಹಾಗಿದ್ದರೂ ಎಲ್ಲರಿಗೂ ಬೆಂಗಳೂರಿನಲ್ಲಿ ಒಂದು ಸ್ವಂತ ಮನೆಯನ್ನು ಖರೀದಿಸಿ, ವಾಸ ಮಾಡಬೇಕು ಎಂದು ಎಲ್ಲರೂ ಬಯಸುತ್ತಾರೆ. ಇನ್ನು ಬೆಂಗಳುರಿನಲ್ಲಿ ಯೋಗ್ಯವಾದ ಐದು ಸ್ಥಳಗಳನ್ನು ಕೂಡ ಈಸ್ ಆಫ್ ಲಿವಿಂಗ್ ಗುರುತಿಸಿದೆ. ಅವುಗಳೆಂದರೆ. ಬಸವನಗುಡಿ, ಇಂದಿರಾ ನಗರ, ಜಯನಗರ, ಕೋರಮಂಗಲ ಹಾಗೂ ರಾಜಾಜಿನಗರ. ಈ ಐದು ನಗರಗಳು ಕೂಡ ಅಭಿವರದ್ಧಿ ಹೊಂದಿರುವ ನಗರಗಳು. ಈ ಐದು ನಗರಗಳಲ್ಲಿ ಭೂಮಿಯ ಬೆಲೆ ಎಷ್ಟಿದೆ ಎಂದು ಈ ಕೆಳಗೆ ಹೇಳಲಾಗಿದೆ.
ಬಸವನಗುಡಿಯಲ್ಲಿ ಒಂದು ಚದರಡಿಗೆ 10,256 ರೂಪಾಯಿ ತಗುಲಿದೆ. ಇನ್ನು ಇಂದಿರಾ ನಗರ 10.805 ರೂಫಾಯಿ ತಗುಲಿದರೆ, ಜಯನಗರದಲ್ಲಿ 10,973 ರೂಪಾಯಿ ಬೆಲೆ ಇದೆ. ಇನ್ನು ಕೋರಮಂಗಲದಲ್ಲಿ ಒಂದು ಚದರ ಅಡಿಗೆ 11,412 ರೂಪಾಯಿ ತಗುಲುತ್ತದೆ. ಇನ್ನು ರಾಜಾಜಿನಗರ ಸಿಕ್ಕಾಪಟ್ಟೆ ಕಾಸ್ಟ್ಲಿ ಆಗಿದ್ದು, ಬರೋಬ್ಬರಿ 14,001 ರೂಪಾಯಿ ಬೆಲೆ ಇದೆ.