28.3 C
Bengaluru
Friday, October 11, 2024

ಚಿನ್ನದ ಮೇಲೆ ಯಾಕೆ ಹೂಡಿಕೆ ಮಾಡಬೇಕು..? ಅದರಿಂದಾಗುವ ಲಾಭಗಳೇನು..?

ಬೆಂಗಳೂರು, ಜೂ. 12 : ಚಿನ್ನ ಹಾಗೂ ಭೂಮಿಯ ಮೇಲೆ ಹೂಡಿಕೆ ಮಾಡಿದರೆ, ಎಂದಿಗೂ ನಷ್ಟವಾಗುವುದಿಲ್ಲ. ಹತ್ತು ವರ್ಷಗಳ ಹಿಂದೆ ಇದ್ದ ಚಿನ್ನದ ಬೆಲೆಗೂ ಈಗಿರುವ ಚಿನ್ನದ ಬೆಲೆಯೂ ಮೂರು ಪಟ್ಟು ಹೆಚ್ಚಾಗಿದೆ. ಹಾಗಾಗಿ ಹೂಡಿಕೆ ಮಾಡಲು ಬಯಸುವವರು ಚಿನ್ನದ ಮೇಲೆ ಹೂಡಿಕೆ ಮಾಡಬಹುದು. ಚಿನ್ನದ ಮೇಲೆ ಹೂಡಿಕೆ ಮಾಡುವುದು ಬಹಳ ಸುರಕ್ಷಿತ. ಹಾಗಾದರೆ, ಚಿನ್ನದ ಮೇಲೆ ಎಲ್ಲಿ ಹೂಡಿಕೆ ಮಾಡಬೇಕು..? ಹೇಗೆ ಹೂಡಿಕೆ ಮಾಡಬೇಕು..? ಚಿನ್ನದ ಮೇಲಿನ ಹೂಡಿಕೆಯ ಬಗ್ಗೆ ಕೆಲ ಮಾಹಿತಿಗಳನ್ನು ತಿಳಿಯರಿ.

ಚಿನ್ನದ ಮೇಲೆ ಹೂಡಿಕೆ ಮಾಡುವಾಗ ಒಂದೇ ಕಡೆ ಹೆಚ್ಚು ಹೂಡಿಕೆ ಮಾಡದಿರಿ. ಇದರಿಂದ ಮುಂದೆ ನಷ್ಟ ಅನುಭವಿಸಬೇಕಾಗಬುದು. ಬದಲಿಗೆ ನಿಮ್ಮ ಹೂಡಿಕೆಯ ಮೊತ್ತದ ಶೇ. 10-15 ರಷ್ಟು ಮೊತ್ತವನ್ನು ಮಾತ್ರವೇ ಚಿನ್ನದ ಮೇಲೆ ಹೂಡಿಕೆ ಮಾಡಿ. ಈ ಹೂಡಿಕೆ ನಿಮಗೆ ಲಾಭವನ್ನು ತಂದು ಕೊಡುತ್ತದೆ. ಚಿನ್ನಾಭರಣಗಳನ್ನು ನೀವು ಖರೀದಿಸುವಾಗ ಹತ್ತು ಸಲ ಯೋಚನೆ ಮಾಡಿ. ನಿಮಗೆ ಅದರ ಅಗತ್ಯವಿದೆಯೇ ಎಂದು ತಿಳಿಯಿರಿ. ತೀರಾ ಅನಿವಾರ್ಯತೆ ಇದ್ದಾಗ ಮಾತ್ರವೇ ಚಿನ್ನಾಭರಣವನ್ನು ಖರೀದಿ ಮಾಡಿ.

ಏಕೆಂದರೆ, ವೇಸ್ಟೇಜ್, ಮೇಕಿಂಗ್ ಎಂದು ಹೆಚ್ಚು ಹಣವನ್ನು ವ್ಯಯಿಸಬೇಕಾಗಬಹುದು. ಇನ್ನು ಕಾಯಿನ್ ಅಥವಾ ಬಿಸ್ಕೆಟ್ ಅನ್ನು ಖರೀದಿಸಿದರೂ ಕಾಪಾಡುವುದು ಕೊಂಚ ಕಷ್ಟವೇ. ಹೀಗಾಗಿ ಚಿನ್ನವನ್ನು ಖರೀದಿಸುವಾಗ ಆದಷ್ಟು ಆಲೋಚಿಸಿ ಖರೀದಿ ಮಾಡಿ. ಇನ್ನು ಖರೀದಿಸಿದ ಬಿಲ್ ಗಳನ್ನು ಬಿಸಾಡದೇ ಇಟ್ಟುಕೊಳ್ಳುವುದು ತುಂಬಾ ಒಳ್ಳೆಯದು. ಈಗ ಚಿನ್ನದ ಮೇಲೆ ಹೂಡಿಕೆ ಮಾಡಲು ಸಾಕಷ್ಟು ಡಿಜಿಟಲ್ ಬಾಂಡ್ ಗಳು ಬಂದಿವೆ. ಅದರ ಮೇಲೂ ನೀವು ಹೂಡಿಕೆಯನ್ನು ಮಾಡಬಹುದು.

ಡಿಜಿಟಲ್ ಗೋಲ್ಡ್, ಗೋಲ್ಡ್ ಇಟಿಎಫ್ ಎಸ್, ಗೋಲ್ಡ್ ಫಂಡ್ಸ್ ಹಾಗೂ ಸಾವರಿನ್ ಗೋಲ್ಡ್ ಬಾಂಡ್ ಗಳಲ್ಲಿ ಹೂಡಿಕೆ ಮಾಡಬಹುದು. ಈ ಹೂಡಿಕೆಗಳು ನೀವು ಚಿನ್ನವನ್ನು ಖರೀದಿಸಿದಾಗ ತಂದುಕೊಡುವ ಲಾಭವನ್ನೇ ಇಲ್ಲೂ ತಂದು ಕೊಡುತ್ತದೆ. ಆದರೆ, ಈ ಚಿನ್ನವನ್ನು ನೀವು ಕೈನಲ್ಲಿ ಮುಟ್ಟಲು ಸಾಧ್ಯವಾಗುವುದಿಲ್ಲವಷ್ಟೇ. ಒಟ್ನಲ್ಲಿ ಚಿನ್ನದ ಮೇಲಿನ ಹೂಡಿಕೆಯೂ ಸದಾ ಲಾಭವನ್ನು ತಂದುಕೊಡುತ್ತದೆ. ಆದರೆ, ದೀರ್ಘಾವಧಿಯ ಹೂಡಿಕೆ ನಿಮ್ಮ ಲಾಭವನ್ನು ಹೆಚ್ಚಿಸುತ್ತದೆ ಎಂಬುದು ಗಮನದಲ್ಲಿರಲಿ.

Related News

spot_img

Revenue Alerts

spot_img

News

spot_img