ಬೆಂಗಳೂರು, ಏ. 29 : ಸಣ್ಣ ಫೈನಾನ್ಸ್ ಬ್ಯಾಂಕ್ ಗಳಲ್ಲಿ ಬಡ್ಡಿದರ ಹೆಚ್ಚಾಗಿರುತ್ತವೆ. ಅದರಲ್ಲೂ ಸ್ಥಿರ ಠೇವಣಿಯ ಮೇಲಿನ ಬಡ್ಡಿದರಗಳು ಹೆಚ್ಚಾಗಿರುತ್ತವೆ. ಸಾಮಾನ್ಯವಾಗಿ ಎಲ್ಲಾ ಬ್ಯಾಂಕ್ ಗಳಲ್ಲೂ 7 ದಿನಗಗಳಿಂದ ಹಿಡಿದು 10 ವರ್ಷಗಳ ನಡುವೆ ಮ್ಯುಚುರಿಟಿ ಇರುತ್ತದೆ. ಇನ್ನು ಬಡ್ಡಿದರದಲ್ಲಿ ಸಮಾನ್ಯ ನಾಗರಿಕರಿಗಿಂತಲೂ ಹಿರಿಯ ನಾಗರಿಕರಿಗೆ ಶೇಕಡಾ 0.5 ರಷ್ಟು ಅಧಿಕವಿರುತ್ತದೆ. ಹಾಗಾದರೆ ಯಾವ ಸಣ್ಣ ಬ್ಯಾಂಕ್ ಗಳಲ್ಲಿ ಎಫ್ ಡಿಗೆ ಬಡ್ಡಿ ದರಗಳು ಎಷ್ಟಿದೆ ಎಂಬುದನ್ನು ನೋಡೋಣ ಬನ್ನಿ..
ಸೂರ್ಯೋದಯ ಸಣ್ಣ ಹಣಕಾಸು ಬ್ಯಾಂಕ್
ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್ ನಲ್ಲಿ ಸಾಮಾನ್ಯ ನಾಗರಿಕರಿಗೆ ಶೇ.4 ರಿಂದ 8.51 ರಷ್ಟು ವರೆಗೂ ಎಫ್ ಡಿಗೆ ಬಡ್ಡಿದರಗಳನ್ನು ನಿಗದಿ ಪಡಿಸಲಾಗಿದೆ. ಇನ್ನು ಹಿರಿಯ ನಾಗರಿಕರಿಗೆ ಸ್ಥಿರ ಠವಣಿಗಳ ಮೇಲೆ ಶೇ. 4.5 ರಿಂದ 9.00 ರಷ್ಟರವರೆಗೆ ಬಡ್ಡಿ ಇರುತ್ತದೆ. ಸದ್ಯ ಸಾಮಾನ್ಯ ಜನರಿಗೆ 999 ದಿನಗಳ ಅವಧಿಯ ಸ್ಥಿರ ಠೇವಣಿಯ ವಿಶೇಷ ಸ್ಕೀಮ್ ಇದ್ದು, ಇದರಲ್ಲಿ ಗರಿಷ್ಠ 8.51 ರಷ್ಟು ಬಡ್ಡಿ ದರವನ್ನು ಪಡೆಯಬಹುದಾಗಿದೆ.
ಉಜ್ಜೀವನ್ ಸಣ್ಣ ಹಣಕಾಸು ಬ್ಯಾಂಕ್
ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಎಲ್ಲರಿಗೂ ಚಿರಪರಿಚಿತವಾಗಿದೆ. ಇದರಲ್ಲಿ ಶೇ. 3.75 ರಿಂದ 8.25 ರಷ್ಟು ಬಡ್ಡಿಯನ್ನು ನೀಡುತ್ತದೆ. ಸಾಮಾನ್ಯ ನಾಗರಿಕರಿಗೆ 560 ದಿನಗಳ ಸ್ಥಿರ ಠೇವಣಿಗೆ ಶೇ. 8.25 ರಷ್ಟು ಬಡ್ಡಿದರವನ್ನು ನಿಗಧಿಪಡಿಸಲಾಗಿದೆ.

ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್
ಯೂನಿಟಿ ಸಣ್ಣ ಹಣಕಾಸು ಬ್ಯಾಂಕ್ ನಲ್ಲಿ ಸಾಮಾನ್ಯ ನಾಗರಿಕರಿಗೆ 4.50 ಪ್ರತಿಶತದಿಂದ 9% ವರೆಗಿನ ಬಡ್ಡಿದರ ನಿಗದಿ ಪಡಿಸಲಾಗಿದೆ. ಅದರಂತೆಯೇ ಹಿರಿಯ ನಾಗರಿಕರಿಗೆ 4.50 ಪ್ರತಿಶತದಿಂದ 9.50 ಪ್ರತಿಶತದವರೆಗಿನ ಬಡ್ಡಿ ನೀಡುತ್ತದೆ. 1001 ದಿನಗಳ ಅವಧಿಗೆ 9.50% ಗರಿಷ್ಠ ಬಡ್ಡಿ ದರ ಪಡೆಯಬಹುದು. ಇನ್ನು 999 ದಿನಗಳಲ್ಲಿ ಪಕ್ವವಾಗುವ FD ಗಳ ಮೇಲೆ 8.76% ಬಡ್ಡಿ ಪಡೆಯಬಹುದು.
ಇಎಸ್ ಎಎಫ್
ಇಎಸ್ ಎಎಫ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಸಾಮಾನ್ಯ ನಾಗರಿಕರಿಗೆ 4% ಮತ್ತು 8.50% ನಡುವಿನ ಬಡ್ಡಿದರವಿದ್ದರೆ, ಹಿರಿಯ ನಾಗರಿಕರಿಗೆ 4.50% ಮತ್ತು 9% ರವರೆಗೂ ಬಡ್ಡಿ ನೀಡುತ್ತದೆ.
ಉತ್ಕರ್ಷ್ ಸಣ್ಣ ಹಣಕಾಸು ಬ್ಯಾಂಕ್
ಉತ್ಕರ್ಷ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಗ್ರಾಹಕರಿಗೆ 4 ರಿಂದ 8.25% ವರೆಗೆ ಬಡ್ಡಿದರಗಳಿದ್ದು, ಹಿರಿಯ ನಾಗರಿಕರಿಗೆ 9% ಬಡ್ಡಿಯನ್ನು ಪಡೆಯಬಹುದು. 700 ದಿನಗಳ ಸ್ಥಿರ ಠೇವಣಿಗೆ ಗರಿಷ್ಠ 8.25% ಬಡ್ಡಿ ದರವಿದೆ. ಈದರಲ್ಲಿ ಹಿರಿಯ ನಾಗರಿಕರು ಹೂಡಿಕೆ ಮಾಡಿದರೆ, 8.75% ಬಡ್ಡಿದರವನ್ನು ಗಳಿಸುತ್ತಾರೆ.
ಜನ ಸಣ್ಣ ಹಣಕಾಸು ಬ್ಯಾಂಕ್
ಇದರಲ್ಲಿ 3.75 ರಿಂದ 8.15 ರವರೆಗೆ ಹಾಗೂ ಹಿರಿಯ ನಾಗರಿಕರಿಗೆ 4.45 ರಿಂದ 8.80% ವರೆಗೆ ಬಡ್ಡಿದರ ಸಿಗುತ್ತದೆ. 500-ದಿನಗಳಿಗೆ ಸಾಮಾನ್ಯ ಜನರಿಗೆ 8.15 ಪ್ರತಿಶತ ಮತ್ತು ಹಿರಿಯ ನಾಗರಿಕರಿಗೆ 8.85% ಬಡ್ಡಿ ಲಭ್ಯವಿದೆ.
ಫಿನ್ಕೇರ್ ಸಣ್ಣ ಹಣಕಾಸು ಬ್ಯಾಂಕ್
ಫಿನ್ಕೇರ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಸಾಮಾನ್ಯರಿಗೆ 3% ರಿಂದ 8.11% ವರೆಗೆ ಹಾಗೂ ಹಿರಿಯರಿಗೆ 8.71% ವರೆಗೆ ಬಡ್ಡಿದರಗಳನ್ನು ನೀಡುತ್ತದೆ. 750 ದಿನಗಳಲ್ಲಿ ಪಕ್ವವಾಗುವ ಠೇವಣಿಗಳಿಗೆ ಗರಿಷ್ಠ 8.11% ಬಡ್ಡಿ ನಿಗದಿಸಿದ್ದು, ಹಿರಿಯಿಗೆ 8.71% ವರೆಗೆ ಇದೆ.



