31.7 C
Bengaluru
Friday, April 25, 2025

ಮುಖ್ಯದ್ವಾರದಲ್ಲಿ ಇಡಬಹುದಾದಂತಹ ಶುಭ ಸಂಕೇತದ ವಸ್ತುಗಳು ಯಾವುವು..?

ಬೆಂಗಳೂರು, ಏ. 29 : ಈಗಾಗಲೇ ನಾವು ಶುಭ ಸಂಕೇಥಗಳು ಎಂದು ಬಂದಾಗ ಎರಡು ಬಗೆ ಇದೆ. ಹೊರಗಡೆಯಿಂದ ನೆಗೆಟಿವ್ ಎನರ್ಜಿಗಳು ಬರುವಂತಹದ್ದು ಒಂದಾದರೆ, ಮುಖ್ಯದ್ವಾರಕ್ಕೆ ಹೊರಗಡೆಯಿಂದ ದ್ವಾರದ ಮೂಲಕ ಬರಬಾರದು ಎಂದು ಹೇಳಲಾಗುತ್ತದೆ. ಮುಖ್ಯದ್ವಾರದ ಮೂಲಕ ಯಾವುದೇ ನೆಗೆಟಿವ್ ಎನರ್ಜಿಗಳು ಬರಬಾರದು ಎಂದರೆ ಕೆಲವಸ್ತುಗಳನ್ನು ಬಳಸಬಹುದು. ಇಂದ್ರ ಜಾಲ ಎಂಬುದು ಸಾಮಾನ್ಯವಾಗಿ ಎಲ್ಲರಿಗೂ ಸಿಗುತ್ತದೆ. ಹಾಗೆಯೇ ಆಲೋವೆರಾ ಗಿಡವೂ ಕೂಡ. ಇಲ್ಲವೇ ಅಂಕೋಲ ಕಡ್ಡಿ ಅನ್ನು ಕೂಡ ಬಳಸಬಹುದು.

ಮನೆಯ ಮುಖ್ಯದ್ವಾರಕ್ಕೆ ಅಂಕೋಲ ಕಡ್ಡಿಯನ್ನು ಕಟ್ಟುವುದು ಹಾಗೂ ಆಲೋವೆರಾ ಗಿಡವನ್ನು ಕಟ್ಟುವುದು ಬಹಳ ಒಳ್ಳೆಯದು. ಇಲ್ಲವೇ ಇಂದ್ರಜಾಲ ಫೋಟೋವನ್ನು ಕೂಡ ಮುಖ್ಯದ್ವಾರಕ್ಕೆ ಹಾಕಬಹುದಗಿದೆ. ಇಲ್ಲವೇ ನಿಂಬೆಹಣ್ಣು, ಬೂದು ಕುಂಬಳ ಕಾಯಿ, ತೆಂಗಿನ ಕಾಯಿಯನ್ನು ಮಂತ್ರಿಸಿ ತರುವಂತಹದ್ದನ್ನು ಕೂಡ ಮಾಡುತ್ತೀವಿ. ನೆಗೆಟಿವ್ ಎನರ್ಜಿ ಬರದೇ ಇರಲಿ ಎಂದು ಇವನ್ನೆಲ್ಲಾ ಮನೆಯ ಮುಖ್ಯದ್ವಾರಕ್ಕೆ ಕಟ್ಟುತ್ತೀವಿ. ಇದರಿಂದಲೂ ನೆಗೆಟಿವ್ ಎನರ್ಜಿಗಳನ್ನು ಅವಾಯ್ಡ್ ಮಾಡಬಹುದು.

ಇನ್ನು ಕುದುರೆಯ ಲಾಡವನ್ನು ಕೂಡ ಕೆಲವರು ತಮ್ಮ ಮನೆಯ ಬಾಗಿಲಿಗೆ ತಂದು ಹಾಕುತ್ತಾರೆ. ಕಕುದುರೆಗಳಿಂದ ಇವು ಎಷ್ಟು ಸವೆದಿರುತ್ತದೋ ಮನೆಗೆ ಅಷ್ಟೇ ಒಳ್ಳೆಯದು ಎಂದು ಹೇಳುತ್ತಾರೆ. ಹಾಗಾಗಿ ಇದರಿಂದ ಯಾವುದೇ ಕೆಟ್ಟ ಶಕ್ತಿಗಳು ಮನೆಗೆ ಪ್ರವೇಶಿಸುವುದಿಲ್ಲ. ಇವೆಲ್ಲವೂ ಒಂದು ರೀತಿಯಾದಂತ ಸಂಕೇತಗಳು.

ಇನ್ನೊಂದು ಏನೆಂದರೆ, ಓಂ ಎಂದು ಹಾಕಿಕೊಳ್ಳುತ್ತೇವೆ. ಮಹಾಲಕ್ಷ್ಮೀ ಫೋಟೋ, ಶ್ರೀ ಅಕ್ಷರ, ಗಣೇಶನ ಫೋಟೋ, ಲಕ್ಷಮೀ ಆನೆಯ ಮೇಲೆ ಕೂತಿರುವಂತೆ, ಹಣವನ್ನು ಕೊಡುತ್ತಿರುವಂತೆ, ಸ್ವಸ್ತಿಕ್, ಶುಭ್ ಲಾಭ್ ಎಂದು ಹಾಕಿಕೊಳ್ಳುತ್ತಾರೆ. ಒಬ್ಬೊಬ್ಬರು ಒಂದೊಂದು ರೀತಿ ತಮ್ಮ ಮನೆಯ ಮುಖ್ಯದ್ವಾರಕ್ಕೆ ಹಾಕಿಕೊಳ್ಳುತ್ತಾರೆ. ಮನೆಗೆ ನೆಗೆಟಿವ್ ಎನರ್ಜಿಗಳು ಬರಬಾರದು ಎಂದರೆ, ಕುದುರೆ ಲಾಡ, ಆಲೋವೆರಾ, ಅಂಕೋಲ ಕಡ್ಡಿ, ಇಂದ್ರಜಾಲ, ಮಂತ್ರಿಸಿದ ನಿಂಬೆಹಣ್ಣು, ಬೂದು ಕುಂಬಳ ಕಾಯಿ, ತೆಂಗಿನ ಕಾಯಿಗಳನ್ನು ಕಟ್ಟಬಹುದು.

ನಿಮಗೆ ಮನೆಗೆ ಶುಭ ಹೆಚ್ಚು ಬೇಕು ಎಂದರೆ, ಮಹಾಲಕ್ಷ್ಮೀ ಫೋಟೋ, ಶ್ರೀ ಅಕ್ಷರ, ಗಣೇಶನ ಫೋಟೋ, ಲಕ್ಷಮೀ ಆನೆಯ ಮೇಲೆ ಕೂತಿರುವಂತೆ, ಹಣವನ್ನು ಕೊಡುತ್ತಿರುವಂತೆ, ಸ್ವಸ್ತಿಕ್, ಶುಭ್ ಲಾಭ್ ಎಂದು ಹಾಕಿಕೊಳ್ಳಬಹುದು. ಇವನ್ನೆಲ್ಲಾ ಆದಷ್ಟು ಮನೆಯಿಂದ ಹೊರಗಡೆಯೇ ಇರುವುದು ಬಹಳ ಒಳ್ಳೆಯದು. ಸಾಧ್ಯವಾಗದಿದ್ದಾಗ ಮಾತ್ರವೇ ಮನೆಯ ಒಳಗಡೆ ಕಟ್ಟಿಕೊಳ್ಳಬಹುದು ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ.

Related News

spot_img

Revenue Alerts

spot_img

News

spot_img