ಬೆಂಗಳೂರು, ಜೂ. 09 : ಜಗತ್ತು ಬೆಳೆಯುತ್ತಿರುವಂತೆ ಭೂಮಿಯ ಬೆಲೆಯೂ ಹೆಚ್ಚುತ್ತಿದೆ. ಪ್ರಪಂಚದಲ್ಲಿ ಮನುಷ್ಯರು ಭೂಮಿಯನ್ನು ಸೃಷ್ಟಿಸದಿದ್ದರೂ ಕೂಡ. ಇಲ್ಲಿ ವಾಸ ಮಾಡಲು ಹಣ ಪಾವತಿಸಬೇಕು. ಭೂಮಿಗೆ ಬಂದ ಬಳಿಕ ಸಾಯುವವರೆಗೂ ನಾವಿರುವ ಸ್ಥಲಕ್ಕಾಗಿ ಹಣ ನೀಡಬೇಕು. ಸ್ವಂತಕ್ಕೆ ಮನೆಯನ್ನು ಗಳಿಸಲು ಬಾರೀ ಮೊತ್ತದ ಹಣವನ್ನು ನೀಡಬೇಕಿದೆ. ಈಗಂತೂ ಭೂಮಿಯ ಬೆಲೆ ಗಗನಕ್ಕ ಏರಿದ್ದು, ಚದರ ಅಡಿಗೂ ಸಾವಿರಾರು ರೂಪಾಯಿ ಅನ್ನು ನೀಡಬೇಕಿದೆ.
ಬನ್ನಿ ಹಾಗಿದ್ದರೆ, ಪ್ರಪಂಚದ ಯಾವ ನಗರದಲ್ಲಿ ಭೂಮಿಯ ಬೆಲೆ ಅಧಿಕವಾಗಿದೆ ಎಂಬುದನ್ನು ತಿಳಿದುಕೊಳ್ಳೋಣ. ಮೊದಲ ಬಾರಿಗೆ ಹಾಂಗ್ ಕಾಂಗ್ನಲ್ಲಿ 1 ಚದರ ಮೀಟರ್ ಜಾಗಕ್ಕೆ ಬರೋಬ್ಬರಿ 25,03,385 ರೂಪಾಯಿ ಬೆಲೆ ಇದೆ. ಹಾಂಗ್ ಕಾಂಗ್ ಬಳಿಕ ಸ್ವಿಟ್ಜರ್ಲೆಂಡ್‌ನ ಜ್ಯೂರಿಚ್ ನಗರದಲ್ಲಿ 1 ಚದರ ಮೀಟರ್ ಗೆ 19,81,280 ರೂಪಾಯಿ ಇದೆ. ನಂತರದಲ್ಲಿ ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್ನಲ್ಲಿ 1 ಚದರ ಮೀಟರ್ ಜಾಗಕ್ಕೆ 17,19,814 ರೂಪಾಯಿ ಆಗಿದೆ.
ಸಿಂಗಾಪುರದಲ್ಲಿ 1 ಚದರ ಮೀಟರ್ ಗೆ 16,52,262 ರೂಪಾಯಿ, ಸ್ವಿಟ್ಜರ್ಲೆಂಡ್ನ ಜಿನೀವಾದಲ್ಲಿ 1 ಚದರ ಮೀಟರ್ ಸ್ಥಳದಲ್ಲಿ 15,77,204 ರೂಪಾಯಿಗಳಷ್ಟಿವೆ. ಚೀನಾದ ಶಾಂಘೈ ನಲ್ಲಿ 1 ಚದರ ಮೀಟರ್ ಗೆ 14,68,000 ರೂಪಾಯಿ, ಚೀನಾದ ಶೆನ್ಜೆನ್ನಲ್ಲಿಯೂ 1 ಚದರ ಮೀಟರ್ ಬೆಲೆ 14,20,243 ರೂಪಾಯಿ ಬೆಲೆ ಇದೆ. ಇನ್ನು ಬೀಜಿಂಗ್ ನಲ್ಲಿ 1 ಚದರ ಮೀಟರ್ ಗೆ 13,84,611 ರೂಪಾಯಿ, ಬ್ರಿಟನ್ ರಾಜಧಾನಿ ಲಂಡನ್ ನಲ್ಲಿ 13,26,214 ರೂಪಾಯಿ ಬೆಲೆಗೆ ಒಂದು ಚದರ ಮೀಟರ್ ಲಭ್ಯವಿದೆ.
ಇಸ್ರೇಲ್ನ ಟೆಲ್ ಅವಿವ್ ಯಾಫೊ ದಲ್ಲಿ 1 ಚದರ ಮೀಟರ್ 12,95,284 ರೂಪಾಯಿ, ಅಮೆರಿಕಾದ ನ್ಯೂಯಾರ್ಕ್ ನಲ್ಲಿ ಒಂದು ಚದರ ಮೀಟರ್ ಸ್ಥಳಕ್ಕೆ 12,66,003 ರೂಪಾಯಿ ಇದ್ದು, ಆಸ್ಟ್ರೇಲಿಯಾದ ಸಿಡ್ನಿಯಲ್ಲಿ 12,56,600 ರೂಪಾಯಿಗೆ ಒಂದು ಚದರ ಮೀಟರ್ ಬೆಲೆ ಇದೆ. ಈ ಪಟ್ಟಿಯಲ್ಲಿ ಭಾರತದ ಮುಂಬೈಗೆ 32ನೇ ಸ್ಥಾನ ದೊರೆತಿದ್ದು, 1 ಚದರ ಮೀಟರ್ ಗೆ 4,95,960 ರೂಪಾಯಿ ಇದೆ. ದೆಹಲಿಗೆ 46ನೇ ಸ್ಥಾನದಲ್ಲಿದ್ದು, 2,05,955 ರೂಪಾಯಿ ಗೆ ಒಂದು ಚದರ ಮೀಟರ್ ಇದೆ.