ಬೆಂಗಳೂರು, ಅ. 31:
ಅಡಮಾನ ಎಂದರೆ ಎಲ್ಲರಿಗೂ ಗೊತ್ತಿರುವ ವಿಚಾರ ಇಷ್ಟೇ. ಒಂದು ವಸ್ತುವನ್ನು ಅಡವಿಟ್ಟು ಸಾಲ ಪಡೆಯುವುದು ಎಂದೇ ಭಾವಿಸಿದ್ದಾರೆ. ಅಡಮಾನ ಇಟ್ಟು ಎಷ್ಟೋ ಮಂದಿ ತಮ್ಮ ಆಸ್ತಿಗಳನ್ನೇ ಕಳೆದುಕೊಂಡಿದ್ದಾರೆ. ಬಡ್ಡಿ ವ್ಯಾಪಾರ ಮಾಡುವರು ಅನೇಕರು ಅಡಮಾನ ಆಧಾರದ ಮೇಲೆ ಸಾಲ ಕೊಟ್ಟು ಬಡವರ ರಕ್ತ ಹೀರುತ್ತಾರೆ. ಅಡಮಾನದಲ್ಲಿ ಹಲವಾರು ವಿಧಗಳಿವೆ. ಯಾವ ಸಂದರ್ಭದಲ್ಲಿ ಯಾವ ವಿಧವಾದ ಅಡಮಾನ ವಿಧಾನ ಬಳಸಬೇಕು ಎಂಬ ಅರಿವು ಇದ್ದರೆ ಅಡಮಾನ ವಿಚಾರದಲ್ಲಿ ಸಂಕಷ್ಟಕ್ಕೆ ಒಳಗಾಗುವ ಸಂದರ್ಭಗಳೇ ಎದುರುಗಾವುದಿಲ್ಲ.
ಅಡಮಾನ ವಿಚಾರ ತಿಳಿದುಕೊಳ್ಳಬೇಕಾದರೆ, ಮೊದಲು ಆಸ್ತಿಯ ವರ್ಗಾವಣೆಯ ಬಗ್ಗೆ ತಿಳಿದುಕೊಳ್ಳಬೇಕು. ವರ್ಗಾವಣೆಯಲ್ಲಿ ಎರಡು ವಿಧ. ಒಂದು ಶುದ್ಧ ವರ್ಗಾವಣೆ. ಮತ್ತೊಂದು ನಿರ್ಧಿಷ್ಟ ವರ್ಗಾವಣೆ. ಶುದ್ಧ ವರ್ಗಾವಣೆ ಎಂದರೆ ಪತ್ರ ನೋಂದಣಿಯಾದ ತಕ್ಷಣ ಆ ಸ್ವತ್ತು ಬರೆಸಿಕೊಂಡವರ ಹೆಸರಿಗೆ ರೈಟ್ ಟೈಟಲ್ ಇಂಟ್ರೆಸ್ಟ್ ( ಅಸಲಿ ಹಕ್ಕು ) ಬರುತ್ತದೆ. ನಿರ್ಧಿಷ್ಟ ವರ್ಗಾವಣೆ ಎಂದರೆ ಪತ್ರ ನೋಂದಣಿಯಾದ ತಕ್ಷಣ ಆ ಸ್ವತ್ತು ಬರೆಸಿಕೊಂಡ ಹೆಸರಿಗೆ ನಿರ್ಧಿಷ್ಟ ಪ್ರಮಾಣದ ಹಕ್ಕು ವರ್ಗಾವಣೆ ಆಗುತ್ತದೆ.
ಶುದ್ಧ ವರ್ಗಾವಣೆಗೆ ಉದಾಹರಣೆ, ಕ್ರಯ ಮತ್ತು ಧಾನ ಪತ್ರ. ನಿರ್ಧಿಷ್ಟ ವರ್ಗಾವಣೆಗೆ ಉದಾಹರಣೆ ಇಭಾಗ ಪತ್ರ, ಆಧಾರ ಪತ್ರ, ವ್ಯವಸ್ಥಾ ಪತ್ರ ಇನ್ನಿತರೆ ಪತ್ರಗಳು.
ಅಡಮಾನ ಪತ್ರಗಳು: ಅಡಮಾನ ನಿರ್ಧಿಷ್ಟ ವರ್ಗಾವಣೆ ಕೆಳಗೆ ಬರುತ್ತದೆ. ಅಡಮಾನ ಪತ್ರ ಎಂದರೆ ಸಾಲ ಕೊಟ್ಟಿರುವುದಕ್ಕೆ ಪ್ರತಿಯಾಗಿ ಸಾಲ ಮರುಪಾವತಿ ಗ್ಯಾರೆಂಟಿಗಾಗಿ ಸ್ವತ್ತುಗಳ ಂಏಲಿನ ನಿರ್ಧಿಷ್ಟ ಹಕ್ಕು ಬಾಧ್ಯತೆಯನ್ನು ನೀಡುವುದು ಎಂಧರ್ಥ. ಅಡಮಾನದಲ್ಲಿ ಆರು ವಿಧಗಳಿವೆ.
ಸಿಂಪಲ್ ಮಾರ್ಟ್ ಗೇಜ್ : ಸಿಂಪಲ್ ಅಥವಾ ಸರಳ ಅಡಮಾನ ಪತ್ರ. ಸಾಲ ಕೊಡುವುದಕ್ಕೆ ಪ್ರತಿಯಾಗಿ ಸ್ವತ್ತುಗಳನ್ನು ಅಡಮಾನ ಮಾಡಿಕೊಳ್ಳುವುದು. ಈ ವಿಧದ ಅಡಮಾನ ಪತ್ರದಲ್ಲಿ ಸ್ವತ್ತುಗಳನ್ನು ಸ್ವಾಧೀನ ಬಿಟ್ಟು ಕೊಡುವ ಅಗತ್ಯವಿಲ್ಲ.
ಕ್ರಯದ ಷರತ್ತುವುಳ್ಳ ಅಡಮಾನ ಪತ್ರ : ಕ್ರಯದ ಅಡಮಾನ ಪತ್ರದಲ್ಲಿ ಷರತ್ತುಗಳನ್ನು ವಿಧಿಸಲಾಗುತ್ತದೆ. ಲೋನ್ ಪಾವತಿಸದಿದ್ದರೆ, ಸ್ವತ್ತುಗಳನ್ನು ಲೋನ್ ಕೊಟ್ಟವರು ಕ್ರಯ ಮಾಡಿಸಿಕೊಳ್ಳಬಹುದು.
ಲಾಭ ದಾಯಕ ಅಡಮಾನ ಪತ್ರ : ಒಂದು ಸ್ವತ್ತಿನ ಮೇಲೆ ಸಾಲ ನೀಡಿದ ಬಳಿಕ ಸ್ವತ್ತಿನ ಸಾಧೀನವನ್ನು ಬಿಟ್ಟುಕೊಡಬೇಕು. ಉದಾಹರಣೆಗೆ ಯಾವುದೇ ಜಮೀನು ಅಡಮಾನ ಇಟ್ಟುಕೊಂಡು, ಆ ಜಮೀನನ್ನು ಸಾಲ ಕೊಟ್ಟವರಿಗೆ ಕೃಷಿ ಚಟುವಟಿಕೆಗೆ ಬಿಟ್ಟುಕೊಡುವುದು ಎಂದರ್ಥ.
ಇಂಗ್ಲಿಷ್ ಅಡಮಾನ ಪತ್ರ : ಸ್ವತ್ತುಗಳನ್ನು ಅಡಮಾನ ಇಟ್ಟು, ಸಾಲ ನೀಡದಿದ್ದರೆ, ಆ ಸ್ವತ್ತನ್ನು ತನ್ನ ಹೆಸರಿಗೆ ವರ್ಗಾವಣೆ ಮಾಡಿಕೊಂಡು ಪರಭಾರೆ ಮಾಡಬಹುದು. ಇದು ಲಾಭ ದಾಯಕ ಅಡಮಾನ ಪತ್ರದ ವರ್ಗಕ್ಕೆ ಸೇರುತ್ತದೆ.
ಹಕ್ಕು ಪತ್ರಗಳ ಒತ್ತೆ ಅಡಮಾನ ಪತ್ರ: ಸಾಲ ಕೊಡುವುದಕ್ಕೆ, ಸಾಲ ಮರುಪಾವತಿಗಾಗಿ ಸ್ವತ್ತುಗಳ ಮೂಲ ದಾಖಲೆಗಳನ್ನು ಒತ್ತೆ ಇಡುವುದು.
ಅಸಂಘತ ಅಡಮಾನ: ಎಲ್ಲಾ ಮೇಲಿನ ಮಾರ್ಟ್ ಗೇಜ್ ಗಳ ಅಂಶಗಳು ಒಳಗೊಂಡಿರುವ ಅಡಮಾನ ವಿಧಾನವಿದು. ಈ ಅಡಮಾನದಲ್ಲಿ ಸಾಮಾನ್ಯವಾಗಿ ಸ್ವತ್ತುಗಳು ಸಾಲ ಕೊಟ್ಟವರ ಸ್ವಾಧೀನಕ್ಕೆ ಒಳಪಡುತ್ತವೆ.