28.3 C
Bengaluru
Friday, October 11, 2024

ಇಎಸ್ಐ‌ ಕಾರ್ಡ್ ಮೂಲಕ ನಿಮಗೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತೇ..?

ಬೆಂಗಳೂರು, ಜೂ. 14 : ಇಎಸ್ಐ‌ ಕಾರ್ಡ್‌ ಬಗ್ಗೆ ಎಲ್ಲರೂ ಕೇಳಿರುತ್ತೀರಾ. ಆದರೆ, ಈ ಕಾರ್ಡ್‌ ನೀಮದ ಆಗುವ ಪ್ರಯೋಜನಗಳು, ಈ ಕಾರ್ಡ್‌ ಯಾರಿಗೆ ಸಿಗುತ್ತವೆ, ಈ ಕಾರ್ಡ್‌ ಅನ್ನು ಪಡೆಯುವುದು ಹೇಗೆ ಎಂಬ ಹ=ಲಚು ವಿಚಾರಗಳು ನಿಮಗೆ ತಿಳಿಯದೇ ಇರಬಹುದು. ಇಎಸ್ಐ ಕಾರ್ಡ್‌ ಅನನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಓದಗಿಸುತ್ತವೆ. ಕಡಿಮೆ ಸಂಬಳ ಪಡೆಯುವವರಿಗೆ ಹಾಗೂ ಫ್ಯಾಕ್ಟರಿಗಳಲ್ಲಿ ದುಡಿಯುವ ಜನರಿಗಾಗಿ ಇಎಸ್ಐ ಕಾರ್ಡ್‌ ಅನ್ನು ಮೀಸಲಿಡಲಾಗಿದೆ.

21 ಸಾವಿರಕ್ಕಿಂತಲೂ ಕಡಿಮೆ ಸಂಬಳ ಪಡೆಯುವವರು ಇಎಸ್ಐ ಕಾರ್ಡ್‌ ನ ಸೇವೆಯನ್ನು ಪಡೆಯಬಹುದಾಗಿದೆ. ಖಾಸಗಿ ಕಂಪನಿಯಲ್ಲಿ 10 ಕ್ಕಿಂತ ಅಧಿಕ ಮಂದಿ ಕೆಲಸವನ್ನು ಮಾಡುತ್ತಿರಬೇಕು. ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಇಎಸ್ಐ ಕಾರ್ಡ್‌ ಅನನು ವಿತರಿಸುತ್ತದೆ. ನೌಕರರ ರಾಜ್ಯ ವಿಮಾ ಯೋಜನೆಯೂ ಕೂಡ ಇದರಲ್ಲಿ ಸೇರಿದೆ. ದೇಶದಲ್ಲಿ ಕೋಟ್ಯಾಮತರ ಜನರು ಸರ್ಕಾರದ ಈ ಸವಲತ್ತಿನ ಫಲಾನುಭವಿಗಳಾಗಿದ್ದಾರೆ. ಇಎಸ್ಐ ಕಾರ್ಡ್‌ ಇದ್ದರೆ, ಉಚಿತ ಆರೋಗ್ಯ ಸೇವೆ, ಪಿಂಚಣಿ ಸೇವೆ ಹಾಗೂ ರಜೆ ವೇತನವನ್ನು ಕೂಡ ಪಡೆಯಬಹುದಾಗಿದೆ.

ಇಎಸ್ಐ ಕಾರ್ಡ್‌ ಅನ್ನು ನೀವು ಹೊಂದಿದ್ದರೆ, ನಿಮಗೆ ಸರ್ಕಾರ ನಿಗದಿಪಡಿಸಿಋುವ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ಸಿಗುತ್ತದೆ. ನಿಮಗೆ ಆರೋಗ್ಯ ಸಮಸ್ಯೆ ಇದ್ದಾಗ ಹಣ ವ್ಯಯಿಸುವ ಅಗತ್ಯವಿರುವುದಿಲ್ಲ. ಜೊತೆಗೆ ನಿಮ್ಮ ಕುಟುಂಬ ಸದಸ್ಯರಿಗೂ ಉಚಿತ ಚಿಕಿತ್ಸೆ ದೊರೆಯಲಿದೆ. ನಿಮಗೆ ಅನಾರೋಗ್ಯ ಉಂಟಾದಾಗ ಉಚಿತ ಚಿಕಿತ್ಸೆಯನ್ನು ಪಡೆಯುವುದರ ಜೊತೆಗೆ ಸಂಬಳವನ್ನೂ ಪಡೆಯಬಹುದು. ಅನಾರೋಗ್ಯದಿಂದ ಕೆಲಸಕ್ಕೆ ತೆರಳಲು ಆಗದಿದ್ದಾಗೆ ಸಿಬ್ಬಂದಿಗೆ 91 ದಿನಗಳ ಕಾಲ ಶೇಕಡಾ 70ರಷ್ಟು ಸಂಬಳವನ್ನು ಕಂಪನಿ ನೀಡುತ್ತದೆ.

ಅಕಸ್ಮಾತ್‌ ನಿಮಗೆ ಉದ್ಯೋಗ ನಷ್ಟ ಉಂಟಾದರೆ, ಇಎಸ್ಐ ಕಾರ್ಡ್‌ ಮೂಲಕ ಸೇವೆಯನ್ನು ಪಡೆಯಬಹುದು. ಸರ್ಕಾರ ನಿಮಗೆ ನಿರುದ್ಯೋಗ ಭತ್ಯೆ ಅನ್ನು ನೀಡುತ್ತದೆ. ಇಎಸ್ಐ ಕಾರ್ಡ್ ಸೌಲಭ್ಯ ಹೊಂದಿರುವ ವ್ಯಕ್ತಿ ಸಾವನ್ನಪ್ಪಿದರೆ, ಕುಟುಂಬಕ್ಕೆ ಇಡೀ ಜೀವನ ನಿರ್ವಹಣೆಗಾಗಿ ಪಿಂಚಣಿ ಅನ್ನು ಒದಗಿಸುತ್ತದೆ. ಮೃತನ ಕುಟುಂಬ ಸದಸ್ಯರಿಗೆ 10 ಸಾವಿರ ರೂಪಾಯಿಯ ವರೆಗೂ ಪಿಂಚಣಿ ಅನ್ನು ನೀಡುತ್ತದೆ. ಇನ್ನು ಹೆಣ್ಣು ಮಕ್ಕಳಿಗೆ ಮಾತೃತ್ವ ರಜೆಯಲ್ಲಿ ಸಂಬಳವನ್ನು ನೀಡುತ್ತದೆ. 26 ತಿಂಗಳವರೆಗೂ ಇಎಸ್ಐ ಕಾರ್ಡ್‌ ಇರುವವರಿಗೆ ಸಂಬಳವನ್ನು ನೀಡಲಾಗುತ್ತದೆ.

Related News

spot_img

Revenue Alerts

spot_img

News

spot_img