20.5 C
Bengaluru
Tuesday, July 9, 2024

ಹುಣ್ಣಿಗೆರೆಯಲ್ಲಿ ಸಿದ್ಧವಾದವು ವಿಲ್ಲಾಗಳು : ಜುಲೈನಲ್ಲಿ ಮಾರಾಟಕ್ಕೆ ಲಭ್ಯ

ಬೆಂಗಳೂರು, ಮೇ. 19 : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ 271.46 ಕೋಟಿ ರೂ. ವೆಚ್ಚದಲ್ಲಿ ವಿಲ್ಲಾಗಳನ್ನು ನಿರ್ಮಾಣ ಮಾಡಿದೆ. ಬಿಡಿಎ ನ ವಿಲ್ಲಾ ಯೋಜನೆ ಇದೇ ವರ್ಷ ಅಂದರೆ 2023ರ ಜುಲೈ ತಿಂಗಳಿನಲ್ಲಿ ಮಾರಾಟ ಮಾಡಲಾಗುವುದು ಎಂದು ಬಿಡಿಎ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ತುಮಕೂರು ರಸ್ತೆಯಲ್ಲಿರುವ ದಾಸನಪುರ ಹೋಬಳಿಯ ಹುಣ್ಣಿಗೆರೆಯಲ್ಲಿ ವಿಲ್ಲಾಗಳನ್ನು ಬಿಡಿಎ ನಿರ್ಮಾಣ ಮಾಡಿದ್ದು, ಈ ಮೂಲಕ ವಿಲ್ಲಾ ಹೊಂದಬೇಕು ಎಂಬುವವರ ಕನಸು ನನಸಾಗುವುದು ಹೆಚ್ಚು ದೂರವಿಲ್ಲ.

ಬಿಡಿಎ ಮೊದಲ ವಿಲ್ಲಾ ಯೋಜನೆ ಇನ್ನೆರಡು ತಿಂಗಳಿನಲ್ಲಿ ಯಶಸ್ವಿಯಾಗಿ ಸಂಪೂರ್ಣವಾಗಲಿದೆ. ಹುಣ್ಣಿಗೆರೆಯಲ್ಲಿ ಬಿಡಿಎ 31 ಎಕರೆ ಜಾಗದಲ್ಲಿ ವಿಲ್ಲಾ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಈ ಜಾಗದಲ್ಲಿ ಒಟ್ಟು 170 ವಿಲ್ಲಾಗಳು ನಾಲ್ಕು ಬಿಎಚ್ಕೆಯಲ್ಲಿದೆ. 35*50 ಅಡಿ ಅಳತೆಯಲ್ಲಿ ಇವನ್ನು ನಿರ್ಮಾಣ ಮಾಡಿದೆ. ಇನ್ನು 31 ವಿಲ್ಲಾಗಳನ್ನು ಮೂರು ಬಿಎಚ್ಕೆ ಯಲ್ಲಿದ್ದು, ಇದೂ ಕೂಡ 35*50 ಅಡಿ ಅಳತೆ ಇದೆ. ಮೂರು ಬಿಎಚ್ಕೆಯ 121 ವಿಲ್ಲಾಗಳನ್ನು 30*40 ಅಡಿ ಅಳತೆಯಲ್ಲಿ ನಿರ್ಮಾಣ ಮಾಡಲಾಗುತ್ತದೆ. ಇವೆಲ್ಲಾ ಅದಾಗಲೇ ಶೇ.95 ರಷ್ಟು ಕಾಮಗಾರಿ ಪೂರ್ಣಗೊಂಡಿದೆ.

 


ಇನ್ನು ಕೇವಲ ಶೇ.05ರಷ್ಟು ಕಾಮಗಾರಿ ಮಾತ್ರ ಬಾಕಿಯಿದ್ದು, ಜುಲೈ ತಿಂಗಳೊಳಗೆ ಪೂರ್ಣಗೊಳ್ಳಲಿದೆ. ಹೊಸ ಸರ್ಕಾರ ರಚನೆಯಾದ ಬಳಿಕ ಮಾರಾಟಕ್ಕಿಡಲಾಗುವುದು ಎಂದು ಹೇಳಲಾಗಿದೆ. ಇನ್ನು ಈ ವಿಲ್ಲಾಗಳಲ್ಲಿನ ಪ್ರತಿಯೊಂದು ಘಟಕದಲ್ಲಿಯೂ ಕೂಡ ಪಾರ್ಕಿಂಗ್ ಸ್ಥಳಗಳಲ್ಲಿ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಸೌಲಭ್ಯವನ್ನು ಒದಗಿಸಲಾಗಿದೆ. ಇನ್ನು ಈ ಜಾಗದಲ್ಲಿ 27 ಉದ್ಯಾನವನಗಳಿದ್ದು, ಎರಡು ರೆಸ್ಟೋರೆಂಟ್‌ಗಳು ಹಾಗೂ ರೆಸ್ಟೋರೆಂಟ್ ಆವರಣಗಳಲ್ಲಿ ಮನರಂಜನಾ ಕೇಂದ್ರಗಳಿವೆ.

170 4 ಬಿಹೆಚ್’ಕೆ ವಿಲ್ಲಾಗಳಿದ್ದು, 152 3ಬಿಹೆಚ್’ಕೆ ವಿಲ್ಲಾಗಳಿವೆ. ಹಾಗೂ 320 1 ಬಿಹೆಚ್’ಕೆ ಫ್ಲಾಟ್‌ಗಳು ಇವೆ. ಇದರಲ್ಲಿ 4ಬಿಹೆಚ್’ಕೆ ಮನೆಗಳಿಗೆ 1.1 ಕೋಟಿ ರೂಪಾಯಿ, 3ಬಿಹೆಚ್’ಕೆ 75 ಲಕ್ಷ ರೂಪಾಯಿ ಮತ್ತು 1ಬಿಹೆಚ್’ಕೆ ಫ್ಲಾಟ್‌ಗಳಿಗೆ 13.5 ಲಕ್ಷ ರೂಪಾಯಿ ಎಂಬ ಮಾಹಿತಿ ನೀಡಿದ್ದು, ನಿಖರವಾದ ಮೊತ್ತವನ್ನು ಬಹಿರಂಗಪಡಿಸಿಲ್ಲ. ಇಷ್ಟೇ ಅಲ್ಲದೇ, ಬ್ಯಾಸ್ಕೆಟ್ಬಾಲ್, ಕ್ರಿಕೆಟ್ ಮತ್ತು ಮಕ್ಕಳ ಆಟದ ಮೈದಾನ, ಕೂಡ ಇದೆ.

600 ಕೆಎಲ್ಡಿಯ ಎಸ್ಟಿಪಿ ಘಟಕ, 1.5 ಲಕ್ಷ ಲೀಟರ್ ಕುಡಿಯುವ ನೀರಿನ ಓವರ್ಹೆಡ್ ಟ್ಯಾಂಕ್, 1.5 ಲಕ್ಷ ಲೀಟರ್ ಸಾಮರ್ಥ್ಯದ ಸಂಪ್, 10 ಕೊಳವೆ ಬಾವಿಗಳು ಇವೆ. 31 ಎಕರೆ ಸುತ್ತ 2.1 ಮೀಟರ್ ಎತ್ತರದ ಕಾಂಪೌಂಡ್ ಅನ್ನು ನಿರ್ಮಾಣ ಮಾಡಲಾಗಿದೆ. ಸುತ್ತಲೂ ಮುಳ್ಳು ತಂತಿಯನ್ನು ಹಾಕಲಾಗಿದೆ. ಅದೂ ಕೂಡ 0.6 ಮೀಟರ್. ಇಲ್ಲಿ 6 ಮೀಟರ್ ಅಗಲದ ರಸ್ತೆ ಇದ್ದು, 5 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ಸಾರ್ವಜನಿಕರಿಗಾಗಿ ಉದ್ಯಾನವನವಿದೆ.

ಈ ಹಿಂದೆ ಬಿಡಿಎ ಆಲೂರಿನಲ್ಲಿ 452 ವಿಲ್ಲಾಗಳನ್ನು ನಿರ್ಮಾಣ ಮಾಡಿತ್ತು. ಈ ವಿಲ್ಲಾಗಳು ಶೇ.100ರಷ್ಟು ಸಂಪೂರ್ಣವಾಗಿ ಮಾರಾಟವಾಗಿವೆ. ಇದರ ಯಶಸ್ಸಿನಿಂದ ಬಿಡಿಎ ಪ್ರೇರಣೆಗೊಂಡು ಮತ್ತೊಂದು ಯೋಜನೆಗೆ ಕೈ ಹಾಕಿತು. ಹುಣ್ಣಿಗೆರೆಯಲ್ಲಿ ಮತ್ತೊಂದು ವಿಲ್ಲಾ ಯೋಜನೆಯನ್ನು ಕೂಡ ಈಗ ಯಶಸ್ವಿಯಾಗಿ ನಿರ್ಮಾಣ ಮಾಡುತ್ತಿದೆ. ಹುಣ್ಣಿಗೆರೆ ವಿಲ್ಲಾ ಯೋಜನೆಯನ್ನು 2018ರ ಸೆ.25 ರಂದು ಪ್ರಾರಂಭಿಸಲಾಯ್ತು. ಹೊಂಬಾಳೆ ಕನ್ಸ್ಟ್ರಕ್ಷನ್ ಆ್ಯಂಡ್ ಎಸ್ಟೇಟ್ ಪ್ರೈ.ಲಿ. ಕಂಪನಿ ಇದರ ಕಾಮಗಾರಿಯ ಹೊಣೆಯನ್ನು ಹೊತ್ತು ಕೊಂಡಿತು. ಈ ಯೋಜನೆಯನ್ನು 2023ರ ಮೇ ಅಂತ್ಯದೊಳಗೆ ಪೂರ್ಣಗೊಳಿಸುವುದಾಗಿ ಕಂಪನಿ ಹೇಳಿತ್ತು.

Related News

spot_img

Revenue Alerts

spot_img

News

spot_img