ಬೆಂಗಳೂರು, ಫೆ. 21 : ನಿವೇಶನದ ಆಕಾರ ಎಂದು ಬಂದಾಗ ಸಾಮಾನ್ಯವಾಗಿ ಚೌಕಾಕಾರ, ಆಯತಾಕಾರವನ್ನೇ ಹೆಚ್ಚು ಪ್ರಿಫರ್ ಮಾಡಲಾಗುತ್ತದೆ. ಇನ್ನು ಬೇರೆ ಆಕಾರಗಳು ಅಂದರೆ, ನಕ್ಷತ್ರ, ರೌಡ್, ಓವೆಲ್ ಶೇಪ್ ಗಳಲ್ಲಿ ಮನೆಯನ್ನು ಕಟ್ಟುವುದು ಅಷ್ಟು ಒಳ್ಳೆಯದಲ್ಲ. ಆದರೆ, ಗೋಮುಖಿ ಬಗ್ಗೆ ಹೇಳುತ್ತೇವೆ. ಆದರೆ ಇದರ ಬಗ್ಗೆ ಸಾಕಷ್ಟು ಮಂದಿಗೆ ಗೊತ್ತಿಲ್ಲ. ಗೋಮುಖಿ ನಿವೇಶನ ಎಂದರೆ ಏನು.? ಈ ನಿವೇಶನವನ್ನು ಹೇಗೆ ನಿರ್ಮಾಣ ಮಾಡಲಾಗುತ್ತದೆ.? ನೋಡಲು ಗೋಮುಖಿ ನಿವೇಶನ ಹೇಗಿರುತ್ತದೆ ಎಂಬುದನ್ನು ಮೊದಲು ತಿಳೀಯೋಣ ಬನ್ನಿ.
ಈ ಗೋಮುಖಿ ನಿವೇಶನ ಅಂದರೆ ಗೋವಿನ ಮುಖವನ್ನು ನೋಡಿದಾಗ ಅದರ ತಲೆಯ ಭಾಗ ದಪ್ಪವಿರುತ್ತದೆ. ನಂತರ ಅಲ್ಲಿಂದ ಮುಂದಕ್ಕೆ ಬರುತ್ತಾ ಸಣ್ಣದಾಗುತ್ತದೆ. ಇದನ್ನೇ ಗೋಮುಖ ನಿವೇಶನ ಎಂದು ಹೇಳಲಾಗಿದೆ. ಮನೆಯನ್ನು ಕೂಡ ಇದೇ ರೀತಿಯಲ್ಲಿ ಹಿಂಭಾಗ ದೊಡ್ಡದಾಗಿಯೂ, ಮುಂಭಾಗ ಚಿಕ್ಕದಾಗಿಯೂ ನಿರ್ಮಾಣ ಮಾಡಲಾಗುತ್ತದೆ. ರಸ್ತೆಗೆ ಮುಖವಾಗಿ ಬಾಗಿಲನ್ನು ನ್ಯಾರೋ ಆಗಿ ಸಣ್ಣದಾಗಿ ಕಟ್ಟಿ, ಮನೆಯ ಹಿಂಭಾಗವನ್ನು ದೊಡ್ಡದಾಗಿ ನಿರ್ಮಿಸಲಾಗುತ್ತದೆ. ಇದನ್ನೇ ಗೋಮುಖಿ ನಿವೇಶನ ಎಂದು ಹೇಳಲಾಗುತ್ತದೆ. ಇನ್ನು ವಾಸ್ತು ಶಾಸ್ತ್ರದಲ್ಲಿ ಗೋಮುಖಿ ಮನೆಗಳನ್ನು ಕಟ್ಟುವುದು ಶುಭ ಎಂದು ಹೇಳಲಾಗಿದೆ.
ಇನ್ನು ವ್ಯಾಘ್ರಮುಖಿ ಮನೆಯನ್ನು ಕೂಡ ಕಟ್ಟಲಾಗುತ್ತದೆ. ಸಿಂಹಮುಖಿ, ಶೇರ್ ಮುಖಿ ಎಂದು ಕರೆಯಲಾಗುತ್ತದೆ. ಇದು ಮೂರು ಕೂಡ ಒಂದೇ ಆಗಿರುತ್ತದೆ. ಈ ಸಿಂಹಮುಖಿ ನಿವೇಶನಗಳು ಹೇಗಿರುತ್ತವೆ ಎಂದು ಸಿಂಹಗಳ ಮುಖ ದಪ್ಪದಾಗಿರುತ್ತವೆ. ಆದರೆ, ಹಿಂದೆ ಹೋದಂತೆ ದೇಹ ಸಣ್ಣದಾಗಿ ಕಾಣುತ್ತದೆ. ಮನೆಯನ್ನು ಇದೇ ಆಕಾರದಲ್ಲಿ ನಿರ್ಮಾಣ ಮಾಡಲಾಗುತ್ತದೆ. ರಸ್ತೆಗೆ ಮುಖವಾಗಿ ಬರುವ ಮನೆಯ ಭಾಗವನ್ನು ದೊಡ್ಡದಾಗಿಯೂ ಮನೆಯ ಹಿಂದಿನ ಭಾಗವನ್ನು ಚಿಕ್ಕದಾಗಿ ನಿರ್ಮಾಣ ಮಾಡಲಾಗುತ್ತದೆ. ಆದರೆ ವಾಸ್ತು ಪ್ರಕಾರ ಈ ಸಿಂಹಮುಖಿ ನಿವೇಶನದಲ್ಲಿ ವಾಸ ಮಾಡುವುದು ಅಶುಭ ಎಂದು ಹೇಳಲಾಗಿದೆ.
ಸಿಂಹಮುಖಿ ಮನೆಗಳು ಏನಿದ್ದರೂ ಕಮರ್ಷಿಯಲ್ ಎಂಟರ್ ಪ್ರೈಸಸ್ ಸಲುವಾಗಿ ನಿರ್ಮಿಸಬಹುದು. ಇಂಡಸ್ಟರೀಸ್ ಅಥವಾ ಕಮರ್ಷಿಯಲ್ ವಿಚಾರಕ್ಕೆ ಇದು ಶುಭ ಎಂದು ಹೇಳಲಾಗಿದೆ. ಗೋಮುಖಿ ನಿವೇಶನಗಳು ಮನೆಗೆ ಶುಭವಾಗಿದ್ದು, ಸಿಂಹಮುಖಿ ಕಟ್ಟಡಗಳನ್ನು ಕರ್ಮಷಿಯಲ್ ಪರ್ಪಸ್ ಗೆ ಬಳಸಬಹುದು ಎಂದು ವಾಸ್ತು ಶಾಸ್ತ್ರದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಹಾಗಾಗಿ ಮನೆ ನಿರ್ಮಾಣ ಮಾಡುವಾಗ ಈ ಬಗ್ಗೆ ಎಚ್ಚರವಹಿಸುವುದು ಬಹಳ ಮುಖ್ಯ.