ಬೆಂಗಳೂರು, ಫೆ. 09 : ಮನೆಯನ್ನು ಕಟ್ಟಿದ ಮೇಲೆ ಅಥವಾ ಮುನ್ನ ನಮ್ಮ ಜಾಗದ ಸುತ್ತ ಕಾಂಪೌಂಡ್ ಅನ್ನು ಹಾಕುತ್ತೇವೆ. ಈ ಕಾಂಪೌಂಡ್ ಬಗ್ಗೆ ವಾಸ್ತು ಶಾಸ್ತ್ರದಲ್ಲಿ ಏನು ಹೇಳಲಾಗಿದೆ. ಕಾಂಪೌಂಡ್ ಅನ್ನು ಹಾಕುವಾಗ ಹೇಗೆ ಹಾಕಬೇಕು ಎಂದು ಮೊದಲು ತಿಳಿಯಬೇಕು. ಹಲವರಲ್ಲಿ ಮೂಡುವ ವಾಸ್ತು ಪ್ರಶ್ನೆಗಳಿಗೆ ಡಾ. ರೇವತಿ ವೀ ಕುಮಾರ್ ಅವರು ಸರಳವಾಗಿ ಉತ್ತರ ನೀಡಿದ್ದಾರೆ. ವಾಸ್ತು ಶಾಸ್ತ್ರದ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿರುವಂತಹ ಹಾಗೂ ಕಳೆದ 20 ವರ್ಷಗಳಿಂದ ಇದೇ ವಿಷಯವಾಗಿ ಬೋಧನೆ ಮಾಡಿರುವಂತಹ ಜೋತಿಷಿ ಹಾಗೂ ಸಂಖ್ಯಾ ಶಾಸ್ತ್ರಜ್ಞರು ಆಗಿರುವ ಡಾ. ರೇವತಿ ವೀ ಕುಮಾರ್ ವಾಸ್ತು ಬಗ್ಗೆ ಜನರಲ್ಲಿ ಇರುವ ಸಾಕಷ್ಟು ಪ್ರಶ್ನೆಗಳಿಗೆ, ಗೊಂದಲ ಹಾಗೂ ಅನುಮಾನಗಳಿಗೆ ಸರಳವಾಗಿ ಉತ್ತರ ಕೊಟ್ಟಿದ್ದಾರೆ.
ಮನೆಯ ಬೌಂಡರಿಯಲ್ಲಿ ನಾವು ಕಾಂಪೌಂಡ್ ಅಳವಡಿಸುತ್ತೇವೆ. ಇದು ಬಹಳ ಮುಖ್ಯವಾಗುತ್ತದೆ. ಯಾರ ಮನೆಯೇ ಆಗಲಿ ಕಾಂಪೌಂಡ್ ಅನ್ನು ಹಾಕಿ ಒಂದು ಗೇಟ್ ಅನ್ನು ಇಡುತ್ತೇವೆ. ಇದರಿಂದ ಮನೆಗೂ ಹಾಗೂ ಮನೆಯಲ್ಲಿರುವವರಗೂ ಸೇಫ್ಟಿ. ಒಂದು ಮನೆ ಎಂದ ಮೇಲೆ, ಆ ಮನೆಗೆ ಕಾಂಪೌಂಡ್ ಅಂತೂ ಖಡಾಖಂಡಿತವಾಗಿ ಇರಬೇಕು ಎಂದು ವಾಸ್ತು ಶಾಸ್ತ್ರಜ್ಞರು ಹೇಳೇ ಹೇಳುತ್ತಾರೆ. ಹಾಗಾದರೆ, ಕಾಂಪೌಂಡ್ ಅನ್ನು ಹೇಗೆ ಕಟ್ಟಬೇಕು. ಮನೆಗೂ ಕಾಂಪೌಂಡ್ ಗೂ ಗ್ಯಾಪ್ ಇರಬೇಕಾ..? ಇರದಿದ್ದರೂ ನಡೆಯುತ್ತಾ ಎಂಬುದನ್ನು ಇಂದಿನ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಯೋಣ ಬನ್ನಿ..
ಆದರೆ ನಗರಗಳಲ್ಲಿ ಎಲ್ಲರೂ ಮನೆಯನ್ನು ಕಟ್ಟುವಾಗ ಮಾಡುವ ತಪ್ಪೆಂದರೆ ಕಾಂಪೌಂಡ್ ಅನ್ನು ಹಾಕದೇ ಇರುವುದು. ಮನೆಯ ಎದು ಕಾಂಫೌಂಡ್ ಇರುತ್ತೆ. ಅದಕ್ಕೆ ಗೇಟ್ ಸಹ ಇರುತ್ತೆ. ಆದರೆ, ಮನೆಯ ಸುತ್ತಾ ಸರಿಯಾದ ಕಾಂಪೌಂಡ್ ಇರುವುದಿಲ್ಲ. ಎಲ್ಲರೂ ಪಕ್ಕದ ಮನೆಯ ಗೋಡೆಗಳಿಗೆ ಅಟ್ಯಾಚ್ಡ್ ಆಗಿ ಮನೆಯನ್ನು ಕಟ್ಟಿಕೊಳ್ಳುತ್ತಾರೆ. ಇದರಿಂದ ಯಾವೆಲ್ಲಾ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಹಾಗಾಗಿ ಮನೆಯ ಸುತ್ತಲೂ ಸಣ್ಣ ಮಟ್ಟಕ್ಕಾದರೂ ಸ್ಥವನ್ನು ಬಿಟ್ಟು ಮನೆ ಕಟ್ಟಬೇಕು. ಮನೆಯ ಸುತ್ತಲೂ ಕಾಂಪೌಂಡ್ ಇರಬೇಕು ಎನ್ನುತ್ತಾರೆ ವಾಸ್ತು ಶಾಸ್ತ್ರಜ್ಞರು.
ನಗರಗಳಲ್ಲಿ ಹಲವರು ಪಕ್ಕದ ಮನೆಯ ಗೋಡೆಗೆ ತಮ್ಮ ಮನೆಯನ್ನು ಅಟ್ಯಾಚ್ ಮಾಡಿ ನಿರ್ಮಾಣ ಮಾಡಿರುತ್ತಾರೆ. ಇನ್ನು ಕೆಲವರು ಹಿಂದೆಗಡೆ ಕಾಂಪೌಂಡ್ ಅನ್ನು ಹಾಕಿರುವುದಿಲ್ಲ. ಹೀಗಿರುವಾಗ ಮನೆಯ ಸುತ್ತಲೂ ವಾಸ್ತು ಪ್ರಕಾರ ಖಾಲಿ ಜಾಗವನ್ನು ಬಿಡಬೇಕು. ಆದರೆ, ಯಾರೂ ಬಿಡುವುದಿಲ್ಲ. ಇದು ಅಶುಭದ ಸಂಕೇತವಾಗಿದೆ. ಎನರ್ಜಿ ಮಾಡಿಫಿಕೇಶನ್ ಗಾಗಿ ಕಾಂಪೌಂಡ್ ಇರುವುದು ಬಹಳ ಮುಖ್ಯ. ಇನ್ನು ಕೆಳಗೆ ಕಾಂಪೌಂಡ್ ಇದ್ದರೂ ಕೂಡ ಮೇಲೆ ಕಟ್ಟುವ ಮನೆಯನ್ನು ಕಾಂಪೌಂಡ್ ಮೀರುವಂತೆ ಕಟ್ಟಿರುತ್ತಾರೆ. ಇದರಿಂದಲೂ ಮನೆಗೆ ಒಳ್ಳೆಯದಲ್ಲ.
ಇನ್ನು ಕೌಂಪೌಂಡ್ ಗೋಡೆಯ ಎತ್ತರ ಎಂದು ಬಂದಾಗ ಪೂರ್ವಕ್ಕಿಂತ ಪಶ್ಚಿಮ ದಿಕ್ಕಿನ ಕಾಂಪೌಂಡ್ ಎತ್ತರವಾಗಿರಬೇಕು. ಉತ್ತರ ದಿಕ್ಕಿನಲ್ಲಿರುವುದಕ್ಕಿಂತ ದಕ್ಷಿಣದ ಕಾಂಪೌಂಡ್ ಎತ್ತರವಾಗಿರಬೇಕು. ಸ್ಮೂತ್ ಆಗಿ ಸ್ಲೋಪ್ ಇರಬೇಕು. ಆದಷ್ಟು ಮನೆಯ ಸುತ್ತ ಕಾಂಪೌಂಡ್ ಇದ್ದರೆ ಸೂಕ್ತ ಎಂದು ಹೇಳಲಾಗಿದೆ.