ಬೆಂಗಳೂರು, ಫೆ. 25 : ವಾಸ್ತು ಪ್ರಕಾರ ಒಂದೇ ಫ್ಲೋರ್ ನಲ್ಲಿ ಮೂರು ಮನೆಗಳನ್ನು ಕಟ್ಟಬೇಕು ಎಂದು ಯಾವೆಲ್ಲಾ ವಾಸ್ತುಗಳನ್ನು ಫಾಲೋ ಮಾಡಬೇಕು ಎಂಬುದನ್ನು ತಿಳಿಯೋಣ ಬನ್ನಿ. ಕೆಲವರು ಬಾಡಿಗೆ ಮನೆಗಳಿಗಾಗಿ ಒಂದೇ ಫ್ಲೋರ್ ನಲ್ಲಿ ಎರಡ ರಿಂದ ಮೂರು ಮನೆಗಳನ್ನು ಕಟ್ಟುತ್ತಾರೆ. ತುಂಬಾ ದೊಡ್ಡ ಜಾಗವಿದ್ದು, ಅಲ್ಲಿ ಒಂದೇ ಫ್ಲೋರ್ ನಲ್ಲಿ ಮನೆಯನ್ನು ಕಟ್ಟುವುದಾದರೂ ಹೇಗೆ..? ಅದಕ್ಕೆ ಯಾವೆಲ್ಲಾ ನಿಯಮಗಳನ್ನು ವಾಸ್ತು ಪ್ರಕಾರ ಫಾಲೋ ಮಾಡಬೇಕು ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ. ಇಲ್ಲಿ ನಾವು ವಾಸ್ತು ಪ್ರಕಾರ ಗಮನ ಹರಿಸಬೇಕಾದ ಕೆಲ ವಿಚಾರಗಳಿವೆ.
ಹೀಗೆ ಮನೆಯನ್ನು ಕಟ್ಟುವಾಗ ಯಾವ ದಿಕ್ಕಿನಲ್ಲಿ ಯಾವ ಕೊಠಡಿಗಳನ್ನು ಕಟ್ಟಬೇಕು ಎಂಬುದನ್ನು ತಿಳಿಯಬೇಕು. ಯಾವ ಮನೆಯಲ್ಲಿ ಈಶಾನ್ಯ ದಿಕ್ಕಿಗೆ ಅಡುಗೆ ಮನೆ ಬರಬೇಕು. ರೂಮ್ ಎಲ್ಲಿ ಬರಬೇಕು ಎಂಬುದನ್ನು ನೋಡಬೇಕು. ಯಾಕೆಮದರೆ ಕೆಲವರು ಎಲ್ಲಾ ಮನೆಯೂ ಒಂದೇ ರೀತಿ ಕಟ್ಟಿ ಬಿಡುತ್ತಾರೆ. ಬಾತ್ ರೂಮ್ ಹಾಗೂ ಅಡುಗೆ ಮನೆ ಸೇರಿದಂಮತೆ ಎಲ್ಲಾ ಕೊಠಡಿಗಳ ವಾಸ್ತುವನ್ನು ತಿಳಿಯುವುದೇ ಇಲ್ಲ. ನಾವು ಎರಡು ಮನೆಯನ್ನು ಕಟ್ಟಿದಾಗ ಮನೆಯನ್ನು ಪ್ರೊಪೋಷನ್ ಮಾಡಿ ಬ್ರಹ್ಮಾಸ್ಥಾನದ ಮೇಲೆ ಗೋಡೆಯನ್ನು ನಿರ್ಮಾಣ ಮಾಡುತ್ತಾರೆ. ಇದು ಖಂಡಿತವಾಗಿಯೂ ಅಶುಭ ಎಂದು ಹೇಳಬಹುದು.
ಹೀಗೆ ಎರಡು ಪ್ರಪೋಷನ್ ಮಾಡುವಾಗ ಒಂದು ದೊಡ್ಡದಾಗಿಯೂ ಮತ್ತೊಂದು ಚಿಕ್ಕದಾಗಿಯೂ ಇರಬೇಕು. ಇನ್ನು ಮೂರು ಪೋರ್ಷನ್ ಅನ್ನು ಮಾಡುವಾಗ ಬ್ರಹ್ಮಾಸ್ಥಾನದಲ್ಲಿ ಬರುವ ಮನೆಯನ್ನು ಎಚ್ಚರದಿಂದ ಪ್ಲಾನ್ ಮಾಡಿ ನಿರ್ಮಾಣ ಮಾಡಬೇಕಾಗುತ್ತದೆ. ಮರ್ಮಸ್ಥಾನ, ಅತಿ ಮರ್ಮಸ್ಥಾನಗಳ ಬಗ್ಗೆ ಆದಷ್ಟು ಗಮನ ಹರಿಸಬೇಕಾಗುತ್ತದೆ. ಹೀಗೆ ಎರಡು ಮೂರು ಭಾಗ ಮಾಡಿದಾಗ, ಎಲ್ಲೆಲ್ಲಿ ಗೋಡೆಗಳು ಬರಬೇಕು. ಎಲ್ಲೆಲ್ಲಿ ಬರಬಾರದು ಎಂಬುದನ್ನು ಬಹಳ ಎಚ್ಚರವಹಿಸಬೇಕಾಗುತ್ತದೆ. ಯಾಕೆಂದರೆ ಈ ಇಡೀ ಬಿಲ್ಡಿಂಗ್ ಗೆ ಒಬ್ಬರೇ ಮಾಲೀಕರಾಗಿರುವುದರಿಂದ ಬ್ರಹ್ಮಸ್ಥಾನ, ಮರ್ಮಸ್ಥಾನಗಳ ಬಗ್ಗೆ ಆದಷ್ಟು ಗಮನಿಸಬೇಕಾಗುತ್ತದೆ.