Vastu : ಬೆಂಗಳೂರು, ಜ. 10 : ಒಂದು ಮನೆಯನ್ನು ನಿರ್ಮಾಣ ಮಾಡುತ್ತಿದ್ದೇವೆ ಎಂದರೆ, ಹಲವರ ಕಣ್ಣು ಬೀಳುತ್ತದೆ. ಸಾಕಷ್ಟು ಬಾರಿ ದಾರಿಯಲ್ಲಿ ಓಡಾಡುವವರು ಕೂಡ ಮನೆಯ ಬಗ್ಗೆ ಮಾತನಾಡುವುದು, ಆ ಮನೆಯನ್ನು ನೋಡುವುದು ಮಾಡುತ್ತಾರೆ. ಯಾರು ಕೂಡ ಬೇಕೆಂದು ಮನೆಯ ಮೇಲೆ ಕಟ್ಟ ದೃಷ್ಟಿಯನ್ನು ಹಾಕುವುದಿಲ್ಲ. ಆದರೆ, ಕೆಲ ದೃಷ್ಟಿಗಳು ಕೆಟ್ಟದ್ದಾಗಿರುತ್ತವೆ. ಅಷ್ಟೇ. ಮನೆಯ ಮೇಲೆ ಕೆಟ್ಟ ದೃಷ್ಟಿ ಬಿದ್ದರೆ, ಕೆಡುಕಾಗುತ್ತದೆ ಎಂದು ನಂಬಲಾಗಿದೆ. ಹಾಗಾಗಿ ಇಂಥಹ ಕೆಟ್ಟ ದೃಷ್ಟಿಗಳು ಬೀಳದಂತೆ ಕಾಪಾಡಿಕೊಳ್ಳಬೇಕು.
ಕಲ್ಲಿನಿಂದ ಏಟು ಬಿದ್ದರು ಪರವಾಗಿಲ್ಲ. ಆದರೆ, ಕಣ್ಣಿನಿಂದ ಏಟು ಬೀಳಬಾರದು ಎಂದು ನಮ್ಮ ಹಿರಿಯರು ಹೇಳುತ್ತಾರೆ. ಇದರ ಅರ್ಥ ದೃಷ್ಟಿಯಾಗುವುದು ಎಂದು. ದೃಷ್ಟಿಯಾದರೆ, ಅದರಿಂದ ನೆಗೆಟಿವ್ ಎಫೆಕ್ಟ್ ಗಳು ಹೆಚ್ಚಾಗಿರುತ್ತದೆ. ನಿರ್ಮಾಣ ಹಂತದಲ್ಲಿರುವ ಮನೆಗಾಗಿ ಅಥವಾ ತಮ್ಮ ಮನೆಯ ಮೇಲೆ ಕೆಟ್ಟ ದೃಷ್ಟಿಗಳು ಬೀಲಬಾರದು ಎಂಬುದು ಇದ್ದರೆ, ಅದಕ್ಕಾಗಿ ಒಂದಷ್ಟು ಪರಿಹಾರ ಮಾಡಿಕೊಳ್ಳುವುದು ಬಹಳ ಮುಖ್ಯ. ಇನ್ನು ನಿವೇಶನವನ್ನು ಕಟ್ಟುವಾಗ ಮನೆಗೆ ಯಾವುದೇ ನೆಗೆಟಿವ್ ಎನರ್ಜಿ ಬರಬಾರದು ಎಂದು ದಿಗ್ಬಂಧನ ಮಾಡಲಾಗುತ್ತದೆ. ಇದೆಲ್ಲಾ ಹೇಗೆ ಮಾಡುವುದು ವಾಸ್ತುವಿನಲ್ಲಿ ಏನು ಹೇಳಲಾಗಿದೆ ಎಂಬುದನ್ನು ತಿಳಿಯೋಣ ಬನ್ನಿ.
ಮನೆ ಕಟ್ಟುವ ಪ್ರಾರಂಭದಲ್ಲೇ ಮನೆಯ ದೃಷ್ಟಿ ಬಗ್ಗೆ ಗಮನ ಹರಿಸಬೇಕು. ಹಾಗಾಗಿ ವಾಸ್ತು ಶಾಸ್ತ್ರದಲ್ಲಿ ಐದು ರೀತಿಯ ದೃಷ್ಟಿ ನಿವಾರಣೆಗೆ ಪರಿಹಾರಗಳನ್ನು ನೀಡಲಾಗಿದೆ. ಇದರ ಬಗ್ಗೆ ಡಾ. ರೇವತಿ ವೀ ಕುಮಾರ್ ಅವರು ಸರಳವಾಗಿ ಹೇಳಿದ್ದಾರೆ. ವಾಸ್ತು ಶಾಸ್ತ್ರದ ಬಗ್ಗೆ ಸಾಕಷ್ಟು ಅಧ್ಯಯನವನ್ನು ಡಾ.ರೇವತಿ ವೀ ಕುಮಾರ್ ಅವರು ನಡೆಸಿದ್ದಾರೆ. ಅಷ್ಟೇ ಅಲ್ಲದೇ, ಕಳೆದ 20 ವರ್ಷಗಳಿಂದ ಇದೇ ವಿಷಯವಾಗಿ ಬೋಧನೆ ಮಾಡುತ್ತಿದ್ದಾರೆ. ಜೋತಿಷಿ ಹಾಗೂ ಸಂಖ್ಯಾ ಶಾಸ್ತ್ರಜ್ಞರು ಆಗಿರುವ ಡಾ. ರೇವತಿ ವೀ ಕುಮಾರ್ ವಾಸ್ತು ಬಗ್ಗೆ ಜನರಲ್ಲಿ ಇರುವ ಸಾಕಷ್ಟು ಪ್ರಶ್ನೆಗಳಿಗೆ, ಗೊಂದಲ ಹಾಗೂ ಅನುಮಾನಗಳಿಗೆ ಸರಳವಾಗಿ ಉತ್ತರ ಕೊಡುತ್ತಾರೆ.
ಇನ್ನು ಮನೆಯನ್ನು ನಿರ್ಮಾಣ ಮಾಡಬೇಕಾದಾಗ ಅಲ್ಲಿ ಭೂಮಿ ಅಥವಾ ಗುದ್ಲಿ ಪೂಜೆ ಅಂತ ಮಾಡಲಾಗುತ್ತದೆ. ಇದಕ್ಕೆ ಸರಿಯಾದ ಪಂಡಿತರನ್ನ ಕರೆದು ಭೂಮಿ ಪೂಜೆ ಮಾಡಬೇಕು. ಇದು ಮೊದಲನೇಯ ಪರಿಹಾರವಾಗಿದೆ. ಎರಡನೇಐ ಪರಿಹಾರವೆಂದರೆ, ವಾಸ್ತು ಪ್ರಕಾರವೇ ಎಲ್ಲವೂ ಮಾಡಿದರೂ ಕೂಡ ನಕರಾತ್ಮಕ ಶಕ್ತಿ ಬಾರದಿರಲಿ ಎಂದು ಅಂಕೋಲ ಕಡ್ಡಿಯನ್ನು ತಂದು ನಾಲ್ಕೂ ದಿಕ್ಕಿನಲ್ಲಿ ಪಾಯ ಕಟ್ಟುವಾಗ ಅದರೊಳಗೆ ಹಾಕುವುದು ಒಳ್ಳೆಯದು. ಇನ್ನು ಮೂರನೇಯದಾಗಿ ಸಂಪನ್ನು ಕಟ್ಟುವಾಗ ಈಶಾನ್ಯದಲ್ಲಿ ಮೊದಲು ಕಟ್ಟಬೇಕು. ಸಂಪ್ ತುಂಬಾ ನೀರು ಇದ್ದಷ್ಟೂ ಮನೆ ನಿರ್ಮಾಣಕ್ಕೆ ತೊಂದರೆ ಕಡಿಮೆಯಾಗುತ್ತದೆ. ಆ ಮನೆಗೆ ಹಣದ ಅಭಾವ ಇರುವುದಿಲ್ಲ. ಇದು ಮನೆಕಟ್ಟುವಾಗಲೂ ಸಮಸ್ಯೆ ಮಾಡುವುದಿಲ್ಲ.
ನಾಲ್ಕನೇಯದಾಗಿ ನೈರುತ್ಯದಲ್ಲಿ ಎತ್ತರವಾಗಿ ಕಟ್ಟಿ, ಇಲ್ಲಿ ಒಂದು ಲೈಟ್ ಪ್ರತಿ ದಿನ ರಾತ್ರಿ ಆನ್ ಮಾಡಬೇಕು. ಆಗ ಮನೆಯ ಕಟ್ಟಡ ಕಟ್ಟಲು ಯಾವ ತೊಂದರೆಯೂ ಎದುರಾಗೊಲ್ಲ. ಇನ್ನು ಮನೆ ಕಟ್ಟುವಾಗ ಪೂರ್ವದಲ್ಲಿ ಇಲ್ಲವೇ ಯಾವುದಾದರೂ ಮೂಲೆಯಲ್ಲಿ ಕಾಣುವಂತೆ ಬಿದಿರಿನ ಗೊಂಬೆಯನ್ನು ಎಲ್ಲರಿಗೂ ಕಾಣುವಂತೆ ಹಾಕಿದರೆ ಒಳ್ಳೆಯದು. ಈ ಐದರಲ್ಲಿ ಯಾವ ಪರಿಹಾರವನ್ನು ಮಾಡಿದರೂ ಪ್ರಯೋಜನವಾಗುತ್ತದೆ. ಇನ್ನು ಕೆಲವರು ದಿಗ್ಭಂಧನ ಪೂಜೆಗಳನ್ನು ಮಾಡಿಸುತ್ತಾರೆ. ಅದೂ ಕೂಡ ಒಳ್ಳೆಯದೇ, ಮನೆ ನಿರ್ಮಾಣದ ಸಂದರ್ಭದಲ್ಲಿ ಮೇಲೆ ಹೇಳಿರುವ ಪರಿಹಾರವನ್ನು ಮಾಡಿದರೆ, ಸೂಕ್ತ ಎಂದು ಹೇಳಿದ್ದಾರೆ ಡಾ. ರೇವತಿ ವೀ ಕುಮಾರ್.