ಬೆಂಗಳೂರು, ಫೆ. 16 : ದಾವಣಗೆರೆ ನಗರ ಯೋಜನಾ ಪ್ರಾಧಿಕಾರದ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಲಂಚಾವತರ ತಾಮಡವವಾಡುತ್ತಿದೆ. ಇಂದು ಸಂಜೆ ಕಚೇರಿಯಲ್ಲಿ 2 ಲಕ್ಷ ಹಣವನ್ನು ಲಂಚ ಪಡೆಯುವಾಗ ಇಬ್ಬರು ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಯೋಜನಾ ಪ್ರಾಧಿಕಾರದ ಸಹಾಯಕ ನಿರ್ದೇಶಕ ಭರತ್ ಕುಮಾರ್ ಮತ್ತು ನಗರ ಯೋಜನಾಧಿಕಾರಿ ಮಂಜು ಕೆ.ಆರ್ ರವರು ಇಬ್ಬರು ಸೇರಿ ತಮ್ಮ ಕಾರ್ಯಾಲಯದಲ್ಲಿ ಇಂದು ದಾವಣಗೆರೆ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ನಗರದ ಶ್ರೀನಿವಾಸ ಮತ್ತು ತನ್ನ ಸ್ನೇಹಿತನಾದ ಸಂತೋಷ ರವರ ಜಮೀನನ್ನು ಲೇಔಟ್ ಆಗಿ ಪರಿವರ್ತಿಸಲು ತಾಂತ್ರಿಕ ವಿನ್ಯಾಸ ಮತ್ತು ನಕ್ಷೆ ರಚಿಸಲು 03 ಲಕ್ಷ ರೂ.ಗಳ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಈಗಾಗಲೇ 01 ಲಕ್ಷ ರೂ.ಗಳ ಲಂಚದ ಹಣವನ್ನು ಭರತ್ ಕುಮಾರ್ ರವರು ಪಡೆದಿದ್ದಾರೆ.
ಉಳಿದ 02 ಲಕ್ಷ ರೂ.ಗಳ ಲಂಚದ ಹಣವನ್ನು ಇಂದು ಯೋಜನಾ ಪ್ರಾಧಿಕಾರದ ಕಚೇರಿಯಲ್ಲಿ ಭರತ್ ಕುಮಾರ್ ಹಾಗೂ ಮಂಜು ಕೆಆರ್ ಅವರು ಲಂಚ ಪಡೆದಿದ್ದಾರೆ. ಈ ವೇಳೆ ಲೋಕಾಯುಕ್ತರ ಬಲೆಗೆ ಸಿಕ್ಕಿದ್ದು, ಪೊಲೀಸರು ಇಬ್ಬರೂ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.