25.2 C
Bengaluru
Friday, May 16, 2025

ಕಿಚನ್ ಗೆ ಆಕ್ರೈಲಿಕ್ ಅಥವಾ ಲ್ಯಾಮಿನೇಟೆಡ್ ಫಿನಿಶಿಂಗ್ ನಲ್ಲಿ ಯಾವುದು

ಬೆಂಗಳೂರು, ಫೆ. 16 : ಕಿಚನ್ ಕ್ಯಾಬಿನೆಟ್ ಗೆ ಯಾವ ರೀತಿಯ ಫಿನಿಶಿಂಗ್ ಇದ್ದರೆ ಉತ್ತಮ ಎಂಬುದನ್ನು ಇಂದಿನ ಆರ್ಟಿಕಲ್ ನಲ್ಲಿ ನೋಡೋಣ ಬನ್ನಿ. ಕಿಚನ್ ಸ್ಲ್ಯಾಬ್ ಗಳಿಗೆ ಆಕ್ರೈಲಿಕ್, ಲ್ಯಾಮಿನೇಟ್ , ಮೆಮ್ಬ್ರೇನ್ ಹಾಗೂ ಸ್ಟೈನ್ ಲೆಸ್ ಸ್ಟೀಲ್ ಫಿನಿಶಿಂಗ್ ಅನ್ನು ಕಿಚನ್ ಸ್ಲ್ಯಾಬ್ ಗಳಿಗೆ ಅಳವಡಿಸಬಹುದು. ಇದರಲ್ಲಿ ಬಹಳ ಬಳಕೆಯಲ್ಲಿರುವುದು ಆಕ್ರೈಲಿಕ್ ಹಾಗೂ ಲ್ಯಾಮಿನೇಟೆಡ್ ಫಿನಿಶಿಂಗ್ ಅನ್ನು ಬಳಸುತ್ತಾರೆ. ಹಾಗಾದರೆ, ಇವರೆಡರಲ್ಲಿ ಏನು ವ್ಯತ್ಯಾಸ ಎಂಬುದನ್ನು ನೋಡೋಣ ಬನ್ನಿ.

ಆಕ್ರೈಲಿಕ್ ಫಿನಿಶಿಂಗ್ ನಲ್ಲಿ ಗ್ಲಾಸಿ ಲುಕ್ ಬರುತ್ತದೆ. ಇದು ನೋಡುವುದಕ್ಕೆ ಆಕರ್ಷಕವಾಗಿ ಕಾಣಿಸುತ್ತದೆ. ಇನ್ನು ಇದರಲ್ಲಿ ಪಾಲಿಮರ್ ಫೈಬರ್ ಅನ್ನು ಫಿನಿಶಿಂಗ್ ನಿಂದ ಮಿರರ್ ರೀತಿ ಅಪಿಯರೆನ್ಸ್ ಇರುತ್ತದೆ. ಆಕ್ರೈಲಿಕ್ ಫಿನಿಶಿಂಗ್ ಬಾಳಿಕೆ ಬಹಳ ವರ್ಷಗಳ ಕಾಲ ಬರುತ್ತದೆ. ಇನ್ನು ಇದರ ಗ್ಲಾಸಿ ಲುಕ್, ಆಕರ್ಷಣೆ ಎಲ್ಲವೂ ಹೆಚ್ಚು ಕಾಲ ಬಾಳಿಕೆ ಬರುತ್ತದೆ. ಇದನ್ನು ಕ್ಲೀನ್ ಮಾಡಲು ಅಮೋನಿಯ ಇರುವಂತಹ ಲಿಕ್ವಿಡ್ ಅನ್ನು ಬಳಸಿ ಸ್ವಚ್ಛ ಮಾಡಬಾರದು. ಇದರಿಂದ ಸ್ಕ್ರ್ಯಾಚಸ್ ಗಳು ಆಗುತ್ತವೆ. ಇದು ದಿನಕಳೆದಂತೆ ಹಳದಿ ಬಣ್ಣದ ಕಲೆಗಳನ್ನು ಉಳಿಸುತ್ತದೆ.

ಲ್ಯಾಮಿನೇಟೆಡ್ ಫಿನಿಶಿಂಗ್ ನಲ್ಲೂ ಗ್ಲಾಸಿ ಲುಕ್ ಇದ್ದರೂ ರಿಫ್ಲೆಕ್ಷನ್ ಕಡಿಮೆಯೇ ಇರುತ್ತದೆ. ಲ್ಯಾಮಿನೇಟೆಡ್ ನಲ್ಲಿ ಪ್ಲಾಸ್ಟಿಕ್ ರೀತಿಯ ಫಿನಿಶಿಂಗ್ ಬರುತ್ತದೆ. ಇದರ ಟಾಪ್ ಲೇಯರ್ ನಲ್ಲಿ ಕಲರ್ ಪ್ರಿಂಟಿಂಗ್ ಅನ್ನು ಮಾಡಬಹುದು. ಹೈ ಪ್ರೆಶರ್ ಲ್ಯಾಮಿನೇಟ್ ಗಳಿಗೆ ಪ್ಲೇವುಡ್ ಮೇಲೆ ಬಳಸಲಾಗುತ್ತೆ. ಲ್ಯಾಮಿನೇಟೆಡ್ ಫಿನಿಶಿಂಗ್ ನಲ್ಲಿ ಇದೂ ಕೂಡ ಬಹಳ ಕಾಲ ಬಾಳಿಕೆ ಬರುತ್ತದೆ. ಲ್ಯಾಮಿನೇಟೆಡ್ ನಲ್ಲಿ ಚಿಪ್ಪಿಂಗ್ಸ್ ಬರುತ್ತದೆ. ವುಡ್ ಕೊನೆಯಲ್ಲಿ ಎದ್ದೇಳುತ್ತವೆ. ಇದನ್ನು ರಿಪೇರಿ ಮಾಡುವುದಕ್ಕೆ ಆಗುವುದಿಲ್ಲ. ಆಗ ಇದನ್ನು ಪೂರ್ತಿ ಶೀಟ್ ಅನ್ನೇ ಬದಲಾಯಿಸಬೇಕಾಗುತ್ತದೆ. ಇದು ಒಂದು ಡಿಸ್ ಅಡ್ವಾಂಟೇಜ್ ಎಂದೇ ಹೇಳಬಹುದು.

ಇನ್ನು ಆಕ್ರೈಲಿಕ್ ಹಾಗೂ ಲ್ಯಾಮಿನೇಟೆಡ್ ಎರಡೂ ಫಿನಿಶಿಂಗ್ ಗಳಲ್ಲಿ ಸಾಕಷ್ಟು ವೆರೈಟಿಗಳು ಸಿಗುತ್ತವೆ. ಬಣ್ಣಗಳಲ್ಲೂ ಸಾಕಷ್ಟು ಇದ್ದು, ನಮ್ಮ ಕಿಚನ್ ಸ್ಲ್ಯಾಬ್ ಗೆ ಯಾವುದು ಮುಖ್ಯವೋ ಅದನ್ನೇ ಆಯ್ಕೆ ಮಾಡಿಕೊಳ್ಳಬಹುದು. ಲ್ಯಾಮಿನೇಟ್ ಫಿನಿಶಿಂಗ್ ನಲ್ಲಿ ವುಡೆನ್, ಸ್ಟೋನ್, ಅಲ್ಟ್ರಾ ಹೈ ಗ್ಲಾಸಿ ಸ್ಟಕ್ಚರ್ ಗಳಲ್ಲಿ ಸಿಗುತ್ತದೆ. ಇನ್ನು ಇದನ್ನು ಮೇಟೈನ್ ಮಾಡುವುದು ಎಂದು ಬಂದಾಗ ಆಕ್ರೈಲಿಕ್ ಫೀನಿಶಿಂಗ್ ನಲ್ಲಿ ಯಾವುದೇ ರೀತಿಯ ಫೇಡಿಂಗ್ ಆಗುವುದು ಆಗುವುದಿಲ್ಲ. ಆದರೆ, ರೆಗುಲರ್ ಆಗಿ ಮೇಂಟೈನ್ ಮಾಡಬೇಕಾಗುತ್ತದೆ. ಇನ್ನು ಆರ್ಕೆಲಿಕ್ ಫಿನಿಶಿಂಗ್ ಅನ್ನು ಸದಾ ಕ್ಲೀನ್ ಮಾಡುತ್ತಿರಬೇಕಾಗುತ್ತದೆ. ಲ್ಯಾಮಿನೇಟೆಡ್ ಫಿನಿಶಿಂಗ್ ಅನ್ನು ಕ್ಲೀನ್ ಮಾಡುವುದು ತುಂಬಾ ಸುಲಭ.

ಇನ್ನು ಬೆಲೆ ವಿಚಾರಕ್ಕೆ ಬಂದರೆ, ಆಕ್ರೈಲಿಕ್ ಫಿನಿಶಿಂಗ್ ಒಂದು ಚದರ ಅಡಿಗೆ 1500 ರೂ. ಯಿಂದ ಶುರುವಾಗುತ್ತದೆ. ಆಕ್ರೈಲಿಕ್ ಫಿನಿಶಿಂಗ್ ಸ್ವಲ್ಪ ಕಾಸ್ಟ್ಲಿ ಕೂಡ ಹೌದು. ಅದೇ ಲ್ಯಾಮಿನೇಟೆಡ್ ಫಿನಿಶಿಂಗ್ ಒಂದು ಚದರ ಅಡಿಗೆ 700 ರೂ.ನಿಂದ ಶುರುವಾಗುತ್ತದೆ. ಇದು ಕಡಿಮೆ ಬಜೆಟ್ ಆಗಿದ್ದು, ಇತ್ತೀಚೆಗೆ ಇದೆರಡೂ ಫಿನಿಶಿಂಗ್ ಅನ್ನು ಒಂದೇ ಕಿನ್ ಗೆ ಬಳಸಲಾಗುತ್ತಿದೆ. ಅಡುಗೆ ಮನೆಯ ಮೇಲಿನ ಭಾಗದಲ್ಲಿ ಆಕ್ರೈಲಿಕ್ ಫಿನಿಶಿಂಗ್ ಅನ್ನು ನೀಡಲಾಗುತ್ತದೆ. ಇನ್ನು ಕೆಳಗಿನ ಭಾಗಕ್ಕೆ ಲ್ಯಾಮಿನೇಟೆಡ್ ಫಿನಿಶಿಂಗ್ ಕೊಡುವುದು ಈಗ ಟ್ರೆಂಡ್ ಆಗುತ್ತಿದೆ.

Related News

spot_img

Revenue Alerts

spot_img

News

spot_img