“ತೂಗುದೀಪ” ಹೆಸರಿನ ಹಿನ್ನಲೆ:
ದರ್ಶನ್ ಅವರು ನಟ ತೂಗುದೀಪ ಶ್ರೀನಿವಾಸ್ ಮತ್ತು ಮೀನಾ ದಂಪತಿಗಳಿಗೆ 16 ಫೆಬ್ರವರಿ 1977ರಂದು ಭಾರತದ ಕರ್ನಾಟಕ ರಾಜ್ಯದ ಕೊಡಗು ಜಿಲ್ಲೆಯ ಪೊನ್ನಂಪೇಟೆ ಯಲ್ಲಿ ಜನಿಸಿದರು. ಅವರಿಗೆ ಹುಟ್ಟಿನಿಂದಲೇ ಹೇಮಂತ್ ಕುಮಾರ್ ಎಂಬ ಹೆಸರನ್ನು ನೀಡಲಾಯಿತು.ತೂಗುದೀಪ 1966 ರ ಕನ್ನಡ ಚಲನಚಿತ್ರವಾಗಿದ್ದು, ಇದರಲ್ಲಿ ಶ್ರೀನಿವಾಸ್ ನಟಿಸಿ ಖ್ಯಾತಿಯನ್ನು ಗಳಿಸಿದರು, ಅದರ ನಂತರ ಅವರ ಹೆಸರಿಗೆ ಅಂಟಿಕೊಂಡಿತು. ಅವರ ಕಾಲದಲ್ಲಿ ಜನಪ್ರಿಯ ನಟರಾಗಿದ್ದ ಅವರು ತಮ್ಮ ಚಲನಚಿತ್ರ ನಟನೆಯ ಹಾದಿಯನ್ನುಅನುಸರಿಸಿ ದರ್ಶನ್ ಗೆ ಇಷ್ಟವಿರಲಿಲ್ಲ. ಅವರ ಇಚ್ಛೆಗೆ ವಿರುದ್ಧವಾಗಿ, ದರ್ಶನ್ ಅವರು 1995 ರಲ್ಲಿ ತಮ್ಮ ತಂದೆಯ ಮರಣದ ಮೊದಲು ಶಿವಮೊಗ್ಗದ ನೀನಾಸಂ ಎಂಬ ನಾಟಕ ತರಬೇತಿ ಸಂಸ್ಥೆಗೆ ಸೇರಿಕೊಂಡರು.
ದರ್ಶನ್ ಗೆ ಒಬ್ಬ ಸಹೋದರಿ, ದಿವ್ಯಾ ಮತ್ತು ಕಿರಿಯ ಸಹೋದರ, ದಿನಕರ್, ಚಲನಚಿತ್ರ ನಿರ್ಮಾಪಕ, ತೂಗುದೀಪ ಪ್ರೊಡಕ್ಷನ್ಸ್ ಎಂಬ ನಿರ್ಮಾಣ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಬಾಲ್ಯದಲ್ಲಿ ದರ್ಶನ್ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಮೈಸೂರಿನಲ್ಲಿ ಓದಿದ್ದರು.
ತಂದೆ ತೂಗುದೀಪ ಶ್ರೀನಿವಾಸ್ ರವರು ದೈವಾಧೀನರಾದ ನಂತರ ತುಂಬಾ ಕಷ್ಟದ ದಿನಗಳನ್ನು ದರ್ಶನ್ ರವರ ಕುಟುಂಬ ಎದುರಿಸಬೇಕಾಯಿತು. ಆ ಸಮಯದಲ್ಲಿ ಅವರು ತಮ್ಮ ಮೈಸೂರಿನ ಹಳೆಯ ನಿವಾಸದಲ್ಲೆ ಇದ್ದಿದ್ದನ್ನು ನಾವು ಸ್ಮರಿಸಬೇಕು.ಶಿವಮೊಗ್ಗದ ನೀನಾಸಂ ಎಂಬ ನಾಟಕ ತರಬೇತಿ ಸಂಸ್ಥೆಯಲ್ಲಿ ತರಬೇತಿ ಪಡೆದ ದರ್ಶನ್ ರವರು, ಕಲವು ನಾಟಕಗಳಲ್ಲಿ ನಟನಾಭ್ಯಾಸ ಪಡೆದು,ಗಾಂಧಿನಗರದಲ್ಲಿ ಛಾಪುಮೂಡಿಸಿ , ಆರ್ಥಿಕವಾಗಿ ಸಧೃಡರಾಗುತ್ತಿದ್ದ ಅವರಿಗೆ ಆನೆಬಲ ಕೊಟ್ಟಿದ್ದು ಆಗತಾನೆ ಕಟ್ಟಿಸಿದ್ದ ಅವರ ಕನಸಿನ ಮನೆ “ತೂಗುದೀಪ”. ಇಲ್ಲಿ ವಾಸ್ತವ್ಯವೂಡಿದ ನಂತರ ದರ್ಶನ್ ರವರಿಗೆ ಮುಟ್ಟಿದೆಲ್ಲ ಚಿನ್ನ “ಅಂದು ಲೈಟ್ ಬಾಯ್ ಆಗಿದ್ದ ಅವರು ಇಂದು ಸ್ಯಾಂಡಲ್ವುಡ್ ಸುಲ್ತಾನ”ನಾಗಿದ್ದಾರೆ. ಅದಕ್ಕೆಲ್ಲ ಅವರ ಮನೆ “ತೂಗುದೀಪ” ದ ವಾಸ್ತುವೇ ಕಾರಣ ಎಂಬುದು ಅನೇಕ ವಾಸ್ತುಶಾಸ್ತ್ರಜ್ಞರ ಅಭಿಪ್ರಾಯ, ಈ ರೀತಿ ಒಬ್ಬ ವ್ಯಕ್ತಿಯ ಬೆಳವಣಿಗೆಗೆ ಮನೆಯ ವಾಸ್ತುವು ಕೂಡ ಕಾರಣವಾಗುತ್ತದೆ ಎಂಬುದಕ್ಕೆ ದರ್ಶನ್ ರವರೇ ಸಾಕ್ಷಿ,
ಅವರ ಮನೆ “ತೂಗುದೀಪ”ವು ದರ್ಶನ್ ರವರಿಗೆ ಎಸ್ಟೇ ತೊಂದರೆಯುಂಟು ಮಾಡುವ ಕೈಗಳಿಂದ ಕಾಪಾಡಿಕೊಂಡು ಬಂದಿರುವುದನ್ನು ನಾವು ನೋಡಿದ್ದೇವೆ, ಇದಲ್ಲದೇ ನಮ್ಮ ಸುತ್ತಲಿನ ವಸ್ತುಗಳು
ನಮ್ಮ ಮನಸ್ಸಿನಲ್ಲಿ ಹೇಗೆ ಕೂತಿರುತ್ತವೆ ಎಂಬುದಕ್ಕೆ ದರ್ಶನ್ ರವರ ಮಾರುತಿ – 800 ಕಾರಿನ ಸ್ಟೋರಿ ನಿಮಗಾಗಿ,
■ ಒಮ್ಮೆ ಯೋಚಿಸಿ ನೋಡಿ : 4 ಕೋಟಿಯ ಐಷಾರಾಮಿ ಲ್ಯಾಂಬೋರ್ಗಿನಿ ಕಾರೆಲ್ಲಿ? 22 ವರ್ಷಗಳ ಹಿಂದಿನ ಹಳೆಯ ಮಾರುತಿ – 800 ಕಾರೆಲ್ಲಿ? ಆದರೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಮಾರುತಿ ಮೇಲೆಯೇ ಲವ್ವು!!! ಮನೆಯ ಸೆಲ್ಲರ್’ನಲ್ಲಿ ಕೋಟ್ಯಾಂತರ ಬೆಲೆ ಬಾಳುವ ಹತ್ತಾರು ಕಾರುಗಳು ನಿಂತಿರುವಾಗಲೇ ಮನೆಯ ಹೊರಗಿನ ರಸ್ತೆಯಲ್ಲಿ ಕೇವಲ 10 ಸಾವಿರ ಬೆಲೆ ಬಾಳುವ ತೀರಾ ಹಳೆಯ ಮಾರುತಿ – 800 ಕಾರಿನಲ್ಲಿ ತಮ್ಮ ಆಜಾನುಬಾಹು ದೇಹವನ್ನು ತೂರಿಸಿಕೊಂಡು, ತಾವೇ ಸ್ವತಃ ಡ್ರೈವ್ ಮಾಡುತ್ತಾ ಪುಟ್ಟ ಮಗುವಿನಂತೆ ಕೇಕೆ ಹಾಕಿದರು ನೂರಾರು ಕೋಟಿ ಬೆಲೆ ಬಾಳುವ ದರ್ಶನ್!!!
■ ಹಾಗಿದ್ದರೆ ಮಾರುತಿ – 800 ಕಾರಿನ ಮೇಲಿನ ದರ್ಶನ್ ಲವ್ವಿಗೆ ಕಾರಣವೇನು? ಉತ್ತರ ಬೇಕಿದ್ದರೆ 22 ವರ್ಷಗಳ ಹಿಂದಿನ ಫ್ಲಾಶ್ ಬ್ಯಾಕ್’ಗೆ ಹೋಗಬೇಕು! ಆಗ ದರ್ಶನ್ ನಟನೆಯ ಮೊಟ್ಟಮೊದಲ “ಮೆಜೆಸ್ಟಿಕ್” ಚಿತ್ರದ ಹಾಡುಗಳು ಬಿಡುಗಡೆಯಾದ್ದುವು. ಈ ಹಾಡನ್ನು ನಿರ್ಮಾಪಕ ಎಂ.ಜಿ.ರಾಮಮೂರ್ತಿಯವರು ತಮ್ಮ ಮಾರುತಿ – 800 ಕಾರಿನ ಸಿ.ಡಿ.ಪ್ಲೇಯರ್’ನಲ್ಲಿ ಹಾಕಿ ವಾಲ್ಯೂಮ್ ಏರಿಸಿದ್ದರು. ಅದು ಡಕ್ ಎಫ್ಫೆಕ್ಟ್. ವಿಪರೀತ ವಾಲ್ಯೂಮ್’ನೊಂದಿಗೆ ಹಾಡು ಕೇಳುತ್ತಿದ್ದರೆ ದರ್ಶನ್ ಎದ್ದೆದ್ದು ಕುಣಿಯುತ್ತಿದ್ದರಂತೆ! ಅದು ಅವರ ಪ್ರಥಮ ಚಿತ್ರದ ಹಾಡು ಎಂಬ ಆಕರ್ಷಣೆ ಬೇರೆ! ಅಂಥಾ ಪುಟ್ಟ ಕಾರಿನಲ್ಲೂ ಡಕ್ ಎಫ್ಫೆಕ್ಟ್ ಕೊಡಿಸುವ ಸಿ.ಡಿ.ಪ್ಲೇಯರನ್ನು ಹಾಕಿಸಿದ್ದರು ನಿರ್ಮಾಪಕ ರಾಮಮೂರ್ತಿ. ಹಾಡಿನ ಮೋಡಿಗೆ ಮರುಳಾಗಿ ಯದ್ವಾ ತದ್ವಾ ಕುಣಿಯುತ್ತಿದ್ದ ದರ್ಶನ್’ಗೆ ಆ ಕಾರಿನ ಮೇಲೆ ಲವ್ವು ಬಂದದ್ದು ಆಗಲೇ! ಅದು ಲವ್ ಅಟ್ ಫಸ್ಟ್ ಸೈಟ್!!!
■ ಇಂಥಾ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಂದೆ ಯಾವ ಮಟ್ಟಕ್ಕೆ ಆ ಮಾರುತಿ – 800 ಕಾರನ್ನು ಮೋಹಿಸಿದರೆಂದರೆ ನಿರ್ಮಾಪಕ ಎಂ.ಜಿ.ರಾಮಮೂರ್ತಿ ಸಿಕ್ಕಾಗಲೆಲ್ಲಾ ಅದನ್ನು ತಮಗೆ ಕೊಡಿಸುವಂತೆ ಪೀಡಿಸುತ್ತಿದ್ದರಂತೆ! ಆದರೆ ಆಗ ಕಾಲ ಕೂಡಿ ಬಂದಿರಲಿಲ್ಲ. ಕೊನೆಗೂ ಕಾಲ ಕೂಡಿಬಂದದ್ದು 22 ವರ್ಷಗಳ ನಂತರ ಹೈದರಾಬಾದಿನ ರಾಮೋಜಿ ಫಿಲಂ ಸಿಟಿಯಲ್ಲಿ! ಇದು ನಡೆದದ್ದು ತೀರಾ ಇತ್ತೀಚೆಗೆ. ದರ್ಶನ್ ನಟನೆಯ “ಕುರುಕ್ಷೇತ್ರ” ಚಿತ್ರದ ಚಿತ್ರೀಕರಣ ಆ ಸ್ಟುಡಿಯೋದಲ್ಲಿ ನಡೆಯುತ್ತಿತ್ತು. ದರ್ಶನ್ ಜೊತೆ ನಟಿಸಲು ಅರ್ಜುನ್ ಸರ್ಜಾ ಕೂಡಾ ಚೆನ್ನೈನಿಂದ ರಾಮೋಜಿ ಫಿಲಂ ಸಿಟಿಗೆ ಬಂದಿದ್ದರು. ಅದೇ ಹೊತ್ತಿಗೆ ನಿರ್ಮಾಪಕ ಮುನಿರತ್ನ ಮತ್ತು ರಾಮಮೂರ್ತಿ ಕೂಡಾ ಅಲ್ಲಿ ಹಾಜರಿದ್ದರು. ಮಾತಿಗೆ ಮಾತು ಬಂದು ದರ್ಶನ್ ತಮ್ಮ ದುರ್ಯೋಧನ ಗೆಟಪ್’ನಲ್ಲಿರುವಂತೆಯೇ ರಾಮಮೂರ್ತಿಯವರಿಗೆ ಕೇಳಿಸುವಂತೆ ಜೋರಾಗಿ ಹೇಳುತ್ತಿದ್ದರಂತೆ : “22 ವರ್ಷಗಳಿಂದ ಸತಾಯಿಸುತ್ತಿದ್ದಾರೆ. ಆಸಾಮಿ ಇನ್ನೂ ಕೊಡುವ ಮನಸ್ಸು ಮಾಡಿಲ್ಲ. ಮಾರುತಿ – 800 ಮೇಲಿನ ನನ್ನ ಲವ್ವಿಗೆ ಬೆಲೆನೇ ಇಲ್ವಾ? ನೀನೇ ಹೇಳಪ್ಪಾ… ಇದು ನ್ಯಾಯಾನಾ?” – ಅಂತ ಅರ್ಜುನ್ ಸರ್ಜಾಗೇ ನ್ಯಾಯವನ್ನು ಒಪ್ಪಿಸಿಕೊಂಡು ಬಿಟ್ಟರು ದರ್ಶನ್. ಅರ್ಜುನ್ ಕೂಡ ದರ್ಶನ್ ಪರವಾಗಿ ಮಾತಾಡಿದಾಗ ಬೇರೆ ದಾರಿ ಕಾಣದೇ ರಾಮಮೂರ್ತಿಗಳು ಆ ಕಾರನ್ನು ದರ್ಶನ್ ಬರ್ತ್’ಡೇ ಯಂದೇ ಕೊಡುವುದಾಗಿ ಮಾತು ಕೊಟ್ಟರಂತೆ!
■ ಆದರೆ ಅರ್ಜುನ್’ಗೂ ರಾಮಮೂರ್ತಿಗಳಿಗೂ ಒಂದೇ ಸಂಶಯ : ಅದೆಂದರೆ, ಕೋಟಿ ಕೋಟಿ ಬೆಲೆ ಬಾಳುವ ಮಹಾತಾರೆಯೊಬ್ಬ ಕೇವಲ ಕೆಲವೇ ಸಾವಿರ ಬೆಲೆ ಬಾಳುವ ಮಾರುತಿ – 800 ಕಾರಿಗಾಗಿ ಈ ಪರಿ ಯಾಕೆ ಗೋಗರೆಯುತ್ತಾರೋ ಎಂಬ ಸಂಶಯ! ಅದೇನೇ ಇರಲಿ, ಕೊನೆಗೂ ಮಾರುತಿಯನ್ನು ಹಸ್ತಾಂತರಿಸುವ ದಿನಾಂಕ ಫಿಕ್ಸ್ ಆಯಿತು…!
■ ಅಂದು ರಾಮೋಜಿ ಫಿಲಂ ಸಿಟಿಯಲ್ಲಿ ಪ್ರಾಮಿಸ್ ಮಾಡಿದಂತೆ ದರ್ಶನ್ ಜನ್ಮ ದಿನದಂದು ತಮ್ಮ ಜೀವಕ್ಕೆ ಜೀವವಾಗಿದ್ದ ಮಾರುತಿ – 800 ಕಾರನ್ನು ರಾಮಮೂರ್ತಿಯವರು ಒಲ್ಲದ ಮನಸ್ಸಿನಿಂದಲೇ ಕೈ ಬದಲಾಯಿಸಿಕೊಂಡರು. ತಮ್ಮ 22 ವರ್ಷಗಳ ಸುದೀರ್ಘ ಕಾಲದ ಕನಸು ನನಸಾದ ಸಂಭ್ರಮದಲ್ಲಿ ದರ್ಶನ್ ಕೀಲಿ ಕೈ ಪಡೆದು ಆ ಪುಟ್ಟ ಕಾರಿನೊಳಗೆ ತಮ್ಮ ಆಜಾನುಬಾಹು ದೇಹವನ್ನು ತೂರಿಸಿ, ಸ್ಟೇರಿಂಗ್ ಹಿಡಿದು ತಾವೇ ಡ್ರೈವ್ ಮಾಡುತ್ತಾ ರಸ್ತೆಗುಂಟ ಓಡಾಡಿದರು!!!
■ ಹಾಗಿದ್ದರೆ, ತಮ್ಮ ವರ್ಷಗಳ ಹಿಂದಿನ ಸಂಗಾತಿಯನ್ನು ಕಳೆದುಕೊಂಡಾಗ ರಾಮಮೂರ್ತಿಯವರಿಗೆ ನೋವಾಗಲಿಲ್ಲವೇ? ನೋವಾಗದೇ ಇರುತ್ತದಾ? 22 ವರ್ಷಗಳ ಹಿಂದೆ ಆ ಕಾರಿಗೆ 80 ಸಾವಿರ ರೂಪಾಯಿಗಳ ಬೆಲೆ. ಯಾವುದೋ ವ್ಯವಹಾರದಲ್ಲಿ 15 ಸಾವಿರ ರೂಪಾಯಿ ಲಾಭ ಬಂದಿತ್ತು. ಉಳಿದದ್ದನ್ನು ಬ್ಯಾಂಕ್’ನಿಂದ ಸಾಲ ಪಡೆದು ಖರೀದಿಸಿದ ಕಾರದು! ಏಕಾಏಕಿ ಬೇರೆಯವರಿಗೆ ಕೊಟ್ಟರೆ ಹೇಗಾಗಬೇಡ? ಆದರೆ ರಾಮಮೂರ್ತಿಗಳಿಗೆ ಒಂದೇ ಒಂದು ಸಮಾಧಾನವೆಂದರೆ, ದರ್ಶನ್ ತಮಗಿಂತಲೂ ಆ ಕಾರನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂಬ ಭರವಸೆ! ಕೊನೆಯ ಬಾರಿಗೆ ಆ ಕಾರನ್ನು ಸ್ಪರ್ಶಿಸಿ ಬರುವಾಗ ಕಣ್ಣಂಚು ಒದ್ದೆಯಾದದ್ದನ್ನು ದರ್ಶನ್ ಗಮನಿಸಲಿಲ್ಲ ಎನ್ನುವ ಸಮಾಧಾನ ರಾಮಮೂರ್ತಿಯವರದ್ದು!
■ ಒಂದು ಗುಟ್ಟಿನ ವಿಚಾರ : ಮೈಸೂರಿನಲ್ಲಿರುವಾಗ ದರ್ಶನ್ ಕೈಲಿ ಒಂದು ಹಳೆಯ ಲೂನಾ ಗಾಡಿ ಇತ್ತು. ಪೆಟ್ರೋಲ್’ಗೆ ದುಡಿಲ್ಲದೇ ಇಳಿಜಾರಿನಲ್ಲಿ ಎಂಜಿನ್ ಆಫ್ ಮಾಡಿ ಓಡಿಸುತ್ತಿದ್ದ ದಿನಗಳಿದ್ದುವು! ನಂತರ “ನಮ್ಮ ಪ್ರೀತಿಯ ರಾಮು” ಚಿತ್ರದ ಸಂಭಾವನೆಯಲ್ಲಿ ಒಂದು ಸೆಕೆಂಡ್ ಹ್ಯಾಂಡ್ ಟಾಟಾ ಸಿಯಾರಾ ಖರೀದಿಸಿದ್ದರು ದರ್ಶನ್. ಇದೇ ಗಾಡಿಯಲ್ಲಿ ಚಿತ್ರದ ಪ್ರಮೋಷನ್’ಗಾಗಿ ಪ್ರೆಸ್’ನಿಂದ ಪ್ರೆಸ್’ಗೆ ಓಡಾಡಿದ್ದರು ಚಾಲೆಂಜಿಂಗ್ ಸ್ಟಾರ್! ಈಗ ಬಿಡಿ, ಕೋಟ್ಯಾಂತರ ಬೆಲೆ ಬಾಳುವ ಕಾರುಗಳನ್ನು ಲೆಕ್ಕ ಹಾಕಲು ಹೋಗುವುದಿಲ್ಲ ದರ್ಶನ್!
■ ಇವುಗಳ ನಡುವೆಯೇ ಮಾರುತಿ – 800 ಕಾರಿನ ಮೇಲೆ ಇವರ ಕಣ್ಣು ಏಕೆ ಬಿತ್ತೋ ಆ ಚಾಮುಂಡೇಶ್ವರಿಗೇ ಗೊತ್ತು!!!
∆ ಈಗ ನೋಡಿದ್ರೆ ಎದೆ ಮೇಲೆ ‘ನನ್ನ ಸೆಲೆಬ್ರಿಟಿ’ ಅಂತ ಬರೆಸಿ ಕೊಂಡಿದ್ದಾರೆ. ಅಣ್ಣಾವ್ರು ತಮ್ಮ ಅಭಿಮಾನಿಗಳನ್ನು ‘ದೇವರು’ ಎಂದು ಕರೆದರು. ದರ್ಶನ್ ‘ಸೆಲೆಬ್ರಿಟಿ’ಎಂದು ಕರೆದಿದ್ದಾರೆ. ಸದಾ ಹೃದಯದಲ್ಲಿ ನೆಲೆಸಿರುವ ಅಭಿಮಾನಿಗಳಿಗೆ ಎದೆಯ ಮೇಲೆ ಜಾಗ ಕೊಟ್ಟು ಹಚ್ಚೆ ಹಾಕಿಸಿಕೊಂಡು ಸುದ್ದಿಯಲ್ಲಿದ್ದಾರೆ. ಇಂಥಾ ನಾಯಕನನ್ನು ಪಡೆದ ಅಭಿಮಾನಿಗಳೇ ಧನ್ಯ…ಹ್ಯಾಪಿ ಬರ್ತ್ ಡೇ ವಿಶಸ್ ದರ್ಶನ್ ಸರ್… ತಾಯಿ ಚಾಮುಂಡೇಶ್ವರಿಯ ಅನುಗ್ರಹ ನಿಮ್ಮ ಮೇಲೆ ಸದಾ ಹೀಗೆ ಇರಲಿ……Dboss