ಬೆಂಗಳೂರು, ಜ. 17 : ನಗರಗಳಿಗಿಂತಲೂ ಹಳ್ಳಿಗಳಲ್ಲಿ ಬೆಟ್ಟ, ಗುಡ್ಡ ಹಾಗೂ ಹಳ್ಳಗಳು ಅಕ್ಕ-ಪಕ್ಕದಲ್ಲೇ ಮನೆಗಳಿರುತ್ತವೆ. ಅಂತಹ ಕಡೆಗಳಲ್ಲಿ ಮನೆಯ ಮುಂಬಾಗಿಲಲ್ಲೇ ಬೆಟ್ಟ, ಗುಡ್ಡ ಹಾಗೂ ಹಳ್ಳಗಳು ಇದ್ದರೆ, ವಾಸ್ತು ಪ್ರಕಾರ ತೊಂದರೆ ಎದುರಾಗುತ್ತಾ..? ಹಾಗೇನಾದರೂ ಇದ್ದರೆ ಏನು ಮಾಡುವುದು..? ಇದಕ್ಕೆ ವಾಸ್ತುವಿನಲ್ಲಿ ಪರಿಹಾರವಿದೆಯಾ..? ಇಲ್ಲ ಮನೆಯನ್ನೇ ಬಿಟ್ಟು ಬರಬೇಕಾಗುತ್ತಾ..? ತೊಂದರೆಯಾದರೆ ಮನೆಯ ಯಾವ ಸದಸ್ಯರಿಗೆ ಸಮಸ್ಯೆ ಎದುರಾಗಬಹುದು..? ಎಂಬ ಎಲ್ಲಾ ಅನುಮಾನಗಳಿಗೂ ಈ ಲೇಖನದಲ್ಲಿ ಉತ್ತರ ನೀಡಲಾಗಿದೆ.
ವಾಸ್ತುವಿನಲ್ಲಿ ವೇದ ಎಂದು ಹೇಳಲಾಗಿದೆ. ವೇದಾ ಎಂದರೆ ಅಡಚಣೆ ಎಂದರ್ಥ. ಯಾವೆಲ್ಲಾ ರೀತಿ ಅಡಚಣೆಗಳು ಬರಬಹುದು ಎಂಬುದನ್ನು ನೋಡುವುದಾದರೆ, ಮೊದಲನೇಯದಾಗಿ ಗಾಳಿ ಮತ್ತು ಬೆಳಕು. ಈ ಗಾಳಿ ಬೆಳಕು ನಮಗೆ ಪ್ರಕೃತಿ ದತ್ತವಾಗಿ ದೊರೆತಿದೆ. ಮನೆಯೊಳಗೆ ಒಳಗೆ ಯಾವುದೇ ಕಾರಣಕ್ಕೂ ಗಾಳಿ ಬೆಳಕುಗಳಿಗೆ ಅಥವಾ ಮತ್ಯವುದಕ್ಕೂ ಅಡಚಣೆ ಉಂಟಾಗಬಾರದು ಎಂಬುದು ಮೊದಲೆನೆಯ ವಿಚಾರವಾದರೆ, ಎರಡನೇಯದು ನಾವು ಮನೆಗೆ ಹೋಗು ಯಾವುದೇ ರೀತಿಯ ಅಡಚಣೆಗಳು ಇರಬಾರದು. ಇದೆಲ್ಲವನ್ನೂ ವೇದ ಎಂದು ಹೇಳಲಾಗಿದೆ. ವೇದಗಳಲ್ಲಿ 80 ರೀತಿ ಇದ್ದು, ಮೊದಲು ನಾವೀಗ ಮನೆಯ ಎದುರು ಹಳ್ಳ ಇದ್ದರೆ ಏನಾಗುತ್ತೆ ಎಂಬುದನ್ನು ನೋಡೋಣ.
ಮನೆಯ ಮುಂದೆ ಹಳ್ಳ ಅಥವಾ ಗುಡ್ಡಗಳಿದ್ದರೆ ತೊಂದರೆ ಏನಿಲ್ಲ. ಆದರೆ, ಮನೆಯ ಮುಂದೆ ಇರುವ ಹಳ್ಳ ಮತ್ತು ಗುಡ್ಡಗಳು ನಿವಾಸಕ್ಕೆ ಪ್ರವೇಶ ಮಾಡಲು ತೊಂದರೆ ಮಾಡುತ್ತಿದ್ದರೆ ಅದು ಅಶುಭ ಎಂದು ಹೇಳಲಾಗುತ್ತೆ. ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಹಳ್ಳ ಮತ್ತು ಗುಡ್ಡಗಳಿದ್ದು, ಮನೆಯೊಳಗೆ ಪ್ರವೇಶ ಮಾಡಲು ತೊಂದರೆಯಾಗದಿದ್ದರೆ ಯಾವ ಸಮಸ್ಯೆಯೂ ಇಲ್ಲ. ಆದರೆ ಗಾಳಿ ಬೆಳಕು ಅಥವಾ ವ್ಯಕ್ತಿ ಮನೆಯೊಳಗೆ ಪ್ರವೇಶ ಮಾಡಲು ತೊಂದರೆಯಾದರೆ ಅದು ಅಶುಭ ಎಂದು ವಾಸ್ತುವಿನಲ್ಲಿ ಹೇಳಲಾಗಿದೆ. ಇದು ನಿತ್ಯ ಮನೆಯೊಳಗೆ ಬರಬೇಕಿರುವ ಗಾಳಿ ಬೆಳಕಿಗೆ ಈ ಗುಡ್ಡಗಳು ತೊಂದರೆ ಮಾಡಿದಾಗ ಅದು ಅಶುಭವಾಗುತ್ತೆ.
ಇನ್ನು ಉತ್ತರ ದಿಕ್ಕಿನಲ್ಲಿ ಮ್ಯಾಗ್ನೆಟಿಕ್ ಎನರ್ಜಿ ಮನೆಗೆ ಪ್ರವೇಶ ಮಾಡಲು ಬಿಡದಿದ್ದಾಗಲೂ ಸಮಸ್ಯೆ ಎದುರಾಗುತ್ತೆ. ಇದರಿಂದ ಏಳಿಗೆಯನ್ನು ಕೊಡುವುದಕ್ಕೆ ಸಾಧ್ಯವಾಗುವುದಿಲ್ಲ. ಪೂರ್ವದಲ್ಲಿ ಆರೋಗ್ಯ ಸಮಸ್ಯೆಗಳು ಎದುರಾಗುತ್ತೆ. ಅದೇ ದಕ್ಷಿಣ ಮತ್ತು ಪಶ್ಚಿಮ ದಿಕ್ಕಿನಲ್ಲಿ ಬೆಟ್ಟ-ಗುಡ್ಡಗಳು ಇದ್ದರೆ ಅದು ಒಳ್ಳೆಯದು ಎಂದು ಹೇಳಲಾಗಿದೆ. ಇದಕ್ಕೆ ಕಾರಣವೂ ಇದೆ. ಬೆಳಗ್ಗಿನ ಸೂರ್ಯ ಕಿರುಣಗಳೂ ಅಲ್ಟ್ರಾರೇಸ್ ಅನ್ನು ಕೊಡುತ್ತದೆ. ಇದು ಕ್ರಿಮಿ ಕೀಟಗಳನ್ನು ಕೊಲ್ಲಲು ಸಹಾಯ ಮಾಡುತ್ತದೆ. ಹಾಗಾಗಿಯೇ ಪೂರ್ವ ಮತ್ತು ಉತ್ತರ ದಿಕ್ಕಿನಲ್ಲಿ ಮನೆಯ ಎದುರು ಸ್ವಲ್ಪವಾದರೂ ಜಾಗ ಬಿಡಬೇಕು ಎಂದು ಹೇಳುವುದು.
ನಿತ್ಯ ಬೆಳಗ್ಗೆ ಮನೆಯನ್ನು ಸ್ವಚ್ಛ ಮಾಡುವಾಗ ಸೂರ್ಯನ ಕಿರಣಗಳು ಕ್ರಿಮಿ ಕೀಟಗಳನ್ನು ನಾಶ ಮಾಡಲು ಸಹಾಯ ಮಾಡುತ್ತವೆ. ಹಾಗಾಗಿ ಬೆಟ್ಟ-ಗುಡ್ಡಗಳು ಈ ದಿಕ್ಕಿನಲ್ಲಿದ್ದರೆ ಅಶುಭ ಎಂದು ಹೇಳುವುದು. ಇನ್ನು ದಕ್ಷಿಣ ಮತ್ತು ಪಶ್ಚಿಮದಲ್ಲಿ ಮಧ್ಯಾಹ್ನ ಮೂರು ಗಂಟೆ ಮೇಲೆ ಸೂರ್ಯನ ಇನ್ಫ್ರಾರೇಡ್ ರೇಸ್ ಕಿರಣಗಳು ಅಶುಭ ಎಂದು ಹೇಳಲಅಗುತ್ತೆ. ಹಾಗಾಗಿ ದಕ್ಷಿಣ ಮತ್ತು ಪಶ್ಚಿಮದಲ್ಲಿ ಮನೆಯ ಬಾಗಿಲು ಇದ್ದರೆ, ಇಲ್ಲಿ ಸೋರ್ಯನ ಕಿರಣ ಬೀಳದಂತೆ ಬೆಟ್ಟ-ಗುಡ್ಡಗಳು ತಡೆದರೆ ಒಳ್ಳೆಯದೇ ಎಂದು ಹೇಳಲಾಗಿದೆ. ಹಾಗಾಗಿ ನಿಮ್ಮ ಮನೆಯ ಎದುರಿಗೆ ಬೆಟ್ಟ, ಗುಡ್ಡ ಹಾಗೂ ಹಳ್ಳಗಳು ಇದ್ದರೆ, ನಿಮಗೆ ಒಳ್ಳೆಯದಾ ಕೆಟ್ಟದಾ ಎಂಬುದನ್ನು ತಿಳಿದುಕೊಂಡು ಪರಿಹಾರದ ಬಗ್ಗೆ ಯೋಚಿಸಿ.