22.3 C
Bengaluru
Friday, July 12, 2024

ಧಾರವಾಡದಲ್ಲಿ ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾನಿಲಯದ ಕರ್ನಾಟಕ ಕ್ಯಾಂಪಸ್: ಶಂಕು ಸ್ಥಾಪನೆ ಮಾಡಿದ ಶ್ರೀ ಅಮಿತ್ ಶಾ.

ಅಪರಾಧಿಗಳಿಗಿಂತ ಪೊಲೀಸರು ಎರಡು ಹೆಜ್ಜೆ ಮುಂದೆ ಇದ್ದಾಗ, ಶಿಕ್ಷೆಯಾಗುವ ದರ ಹೆಚ್ಚಾಗುತ್ತದೆ, ವೈಜ್ಞಾನಿಕ ತಂತ್ರಗಳನ್ನು ಬಳಸುವ ಮೂಲಕ ಎನ್ಎಫ್ಎಸ್.ಯು ಇದಕ್ಕೆ ನೆರವಾಗಬಹುದು.

ಕಾನೂನು ಮತ್ತು ಸುವ್ಯವಸ್ಥೆಯನ್ನು ಬಲಪಡಿಸಬೇಕಾದರೆ, ಅದರ ಮೂರು ಭಾಗಗಳನ್ನು ಬಲಪಡಿಸಬೇಕು: ಪೊಲೀಸರ ಕಾರ್ಯವ್ಯಾಪ್ತಿಯ ಕಾನೂನು ಮತ್ತು ಸುವ್ಯವಸ್ಥೆ, ಅಪರಾಧ ತನಿಖೆ, ಇದರಲ್ಲಿ ವಿಧಿವಿಜ್ಞಾನವೂ ಪ್ರಮುಖ ಪಾತ್ರ ವಹಿಸುತ್ತದೆ ಮತ್ತು ನ್ಯಾಯಾಂಗ ವ್ಯವಸ್ಥೆ ಬಲಪಡಿಸುವುದಾಗಿದೆ

ಇದು ಮೂರನೇ ಹಂತದ ಹಿಂಸೆ ನೀಡುವ ಯುಗವಲ್ಲ, ನಾವು ವೈಜ್ಞಾನಿಕ ಸಂಶೋಧನೆ ಮತ್ತು ತಂತ್ರಜ್ಞಾನದ ಆಧಾರದ ಮೇಲೆ ಮಾತ್ರ ತನಿಖೆ ಮಾಡಬೇಕುಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯನ್ನುಸುಧಾರಿಸಬೇಕಾದರೆ, ನಾವು ನಮ್ಮ ಶಿಕ್ಷೆಯಾಗುವ ಪ್ರಮಾಣವನ್ನು ಹೆಚ್ಚಿಸಬೇಕು ಮತ್ತು ಅಪರಾಧ ನ್ಯಾಯ ವ್ಯವಸ್ಥೆಯನ್ನು ವಿಧಿವಿಜ್ಞಾನ ನಡೆಸಿದ ತನಿಖೆಯೊಂದಿಗೆ ಸಂಯೋಜಿಸಬೇಕು.

ದೇಶದ ಎಲ್ಲಾ ರಾಜ್ಯಗಳಲ್ಲಿ ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯದ ಕ್ಯಾಂಪಸ್ ಗಳನ್ನು ತೆರೆದ ನಂತರ, ನಾವು 10,000 ತಜ್ಞರನ್ನು ಪಡೆಯುತ್ತೇವೆ, ಅವರು ಅನೇಕ ವರ್ಷಗಳವರೆಗೆ ಅಪರಾಧ ನ್ಯಾಯ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ದೇಶಕ್ಕೆ ಸೇವೆ ಸಲ್ಲಿಸುತ್ತಾರೆ.ವಿಧಿವಿಜ್ಞಾನ ವಿಶ್ವವಿದ್ಯಾಲಯವು ಮಕ್ಕಳಿಗೆ ಶಿಕ್ಷಣ ನೀಡಲು ಮತ್ತು ತರಬೇತಿ ಪಡೆದ ಮಾನವ ಸಂಪನ್ಮೂಲವನ್ನು ಸಿದ್ಧಪಡಿಸಲು ಮಾತ್ರ ಶ್ರಮಿಸುವುದಲ್ಲದೆ ವಿಧಿವಿಜ್ಞಾನ ಮೂಲಸೌಕರ್ಯವನ್ನು ಬಲಪಡಿಸಲೂ ಸಹಾಯ ಮಾಡುತ್ತದೆ.

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಧಾರವಾಡದಲ್ಲಿಂದು ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯದ ಕರ್ನಾಟಕ ಕ್ಯಾಂಪಸ್ ಗೆ ಶಂಕುಸ್ಥಾಪನೆ ನೆರವೇರಿಸಿದರು. ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಮತ್ತು ಕೇಂದ್ರ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಸೇರಿದಂತೆ ಹಲವಾರು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ತಮ್ಮ ಭಾಷಣದಲ್ಲಿ, ಶ್ರೀ ಅಮಿತ್ ಶಾ, ಕರ್ನಾಟಕದ ಪ್ರತಿಯೊಂದು ಜಿಲ್ಲೆಯೂ ಈ ರಾಜ್ಯಕ್ಕೆ ಮಾತ್ರವಲ್ಲದೆ ಇಡೀ ಭಾರತಕ್ಕೆ ಸಾಂಸ್ಕೃತಿಕ ಪರಂಪರೆಯಾಗಿದೆ ಎಂದು ಹೇಳಿದರು. 1857ಕ್ಕೂ ಮುಂಚೆಯೇ ಕರ್ನಾಟಕವು ಸ್ವಾತಂತ್ರ್ಯ ಹೋರಾಟಕ್ಕೆ ಕೊಡುಗೆ ನೀಡಿದೆ ಮತ್ತು ಇಲ್ಲಿಂದ ಅನೇಕ ವ್ಯಕ್ತಿಗಳು ಭಾರತದಾದ್ಯಂತದ ಸ್ವಾತಂತ್ರ್ಯ ಹೋರಾಟಗಾರರಿಗೆ ಸ್ಫೂರ್ತಿ ನೀಡಿದ್ದಾರೆ ಎಂದು ಅವರು ಹೇಳಿದರು. ಧಾರವಾಡದ ಅಕ್ಷರಶಃ ಅರ್ಥವೇನೆಂದರೆ ಸುದೀರ್ಘ ಪ್ರಯಾಣದ ಮಧ್ಯೆ ವಿಶ್ರಾಂತಿ ಪಡೆವ ಸ್ಥಳ ಎಂದು. ಇಂದು ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯದ ಕ್ಯಾಂಪಸ್ ನ ಭೂಮಿಪೂಜೆಯೊಂದಿಗೆ, ಇದು ಎರಡು ಹೆಜ್ಜೆ ಮುಂದೆ ಹೋಗಿ ದೇಶದ ಶಿಕ್ಷಣ ಕ್ಷೇತ್ರದಲ್ಲಿ ಕರ್ನಾಟಕದ ಕೊಡುಗೆಗೆ ಹೆಚ್ಚಿನ ವೈಭವವನ್ನು ನೀಡುತ್ತದೆ ಎಂದು ಶ್ರೀ ಶಾ ಹೇಳಿದರು.

ನಮ್ಮ ದೇಶದಲ್ಲಿ ವಿಧಿ ವಿಜ್ಞಾನ ವಿಭಾಗವನ್ನು ಪ್ರಾರಂಭಿಸಿದ ಕೀರ್ತಿ ಮಾಜಿ ಕೇಂದ್ರ ಗೃಹ ಸಚಿವ ಶ್ರೀ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಸಲ್ಲುತ್ತದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. 2002 ರಲ್ಲಿ, ಶ್ರೀ ಅಡ್ವಾಣಿ ಅವರು ವಿಧಿ ವಿಜ್ಞಾನ ಸೇವೆಗಳ ನಿರ್ದೇಶನಾಲಯವನ್ನು ಸ್ಥಾಪಿಸಿದರು ಮತ್ತು ಈ ವಿಷಯದ ಮೇಲೆ ಗಮನಹರಿಸಿದರು. ಅದೇ ವೇಳೆ ಶ್ರೀ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದರು, ಅವರು ವಿಶ್ವದ ಅತ್ಯುತ್ತಮ ವಿಧಿವಿಜ್ಞಾನ ಪ್ರಯೋಗಾಲಯವನ್ನು ಸ್ಥಾಪಿಸಲು ಕ್ರಮ ಕೈಗೊಂಡರು ಎಂದು ಶ್ರೀ ಶಾ ಹೇಳಿದರು.

ಶ್ರೀ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾದ ನಂತರ, ಈ ವಿಶ್ವವಿದ್ಯಾಲಯವನ್ನು ರಾಷ್ಟ್ರಮಟ್ಟದಲ್ಲಿ ಮಾಡುವ ಆಲೋಚನೆ
ಅಪರಾಧ ಜಗತ್ತು ಬಹಳ ವೇಗವಾಗಿ ಬದಲಾಗುತ್ತಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ಖೋಟಾ ನೋಟುಗಳ ವ್ಯಾಪಾರ, ಹವಾಲಾ ವಹಿವಾಟು, ಗಡಿ ಒಳ ನುಸುಳುವಿಕೆ, ಮಾದಕ ದ್ರವ್ಯಗಳು, ಸೈಬರ್ ಅಪರಾಧ ಮತ್ತು ಮಹಿಳೆಯರ ವಿರುದ್ಧದ ಅಪರಾಧಗಳು ಹೆಚ್ಚುತ್ತಿವೆ. ಅಪರಾಧಿಗಳು ಪೊಲೀಸರಿಗಿಂತ ಮುಂದಿದ್ದಾರೆ ಮತ್ತು ಪೊಲೀಸರು ಅಪರಾಧಿಗಳಿಗಿಂತ ಎರಡು ಹೆಜ್ಜೆ ಮುಂದಿರದ ಹೊರತು, ಅಪರಾಧವನ್ನು ತಡೆಗಟ್ಟಲು ಸಾಧ್ಯವಿಲ್ಲ ಎಂದರು. ಪೊಲೀಸರು ಎರಡು ಹೆಜ್ಜೆ ಮುಂದೆ ಇರಬೇಕಾದರೆ, ಶಿಕ್ಷೆಯಾಗುವ ಪ್ರಮಾಣವನ್ನು ಹೆಚ್ಚಿಸಬೇಕು ಮತ್ತು ವೈಜ್ಞಾನಿಕ ತಂತ್ರಗಳ ಬಳಕೆಯೊಂದಿಗೆ, ಎನ್ಎಫ್ಎಸ್.ಯು ಈ ಕ್ಷೇತ್ರದಲ್ಲಿ ಸಹಾಯ ಮಾಡಬಹುದು ಎಂದು ಅವರು ಹೇಳಿದರು. ತನಿಖೆಯು ವೈಜ್ಞಾನಿಕವಾಗಿ ವಿಧಿವಿಜ್ಞಾನವನ್ನು

ಕಾನೂನು ಮತ್ತು ಸುವ್ಯವಸ್ಥೆಗೆ ಮೂರು ಭಾಗಗಳಿವೆ ಎಂದು ಶ್ರೀ ಅಮಿತ್ ಶಾ ಹೇಳಿದರು, ಅವು– ಪೊಲೀಸರ ಕಾರ್ಯವ್ಯಾಪ್ತಿಯ ಪ್ರಾಯೋಗಿಕ ಕಾನೂನು ಮತ್ತು ಸುವ್ಯವಸ್ಥೆ, ಅಪರಾಧ ತನಿಖೆಯಲ್ಲಿ ವಿಧಿವಿಜ್ಞಾನ ದೊಡ್ಡ ಪಾತ್ರ ವಹಿಸುವುದು ಮತ್ತು ಮೂರನೆಯದಾಗಿ, ಅಪರಾಧ ನ್ಯಾಯ ವ್ಯವಸ್ಥೆಯನ್ನು ಬಲಪಡಿಸುವುದು ಎಂದು ಶ್ರೀ ಅಮಿತ್ ಶಾ ಹೇಳಿದರು. ಸರ್ಕಾರ ಶೀಘ್ರದಲ್ಲೇ ಸಾಕ್ಷ್ಯ ಕಾಯ್ದೆಯನ್ನು ತಿದ್ದುಪಡಿ ಮಾಡಲಿದೆ ಎಂದು ಹೇಳಿದರು. ಐಪಿಸಿ, ಸಿಆರ್.ಪಿ.ಸಿ ಮತ್ತು ಸಾಕ್ಷ್ಯ ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ, ವೈಜ್ಞಾನಿಕ ಆಧಾರದ ಮೇಲೆ ಶಿಕ್ಷೆಯ ಕಾರ್ಯವಿಧಾನಕ್ಕಾಗಿ ಅವುಗಳನ್ನು ಮತ್ತಷ್ಟು ಬಲಪಡಿಸಲಾಗುವುದು, ಇದರಿಂದ ವಿಧಿವಿಜ್ಞಾನದ ಎಲ್ಲಾ ಅವಲೋಕನಗಳನ್ನು ಅಪರಾಧಿಯನ್ನು ಶಿಕ್ಷಿಸಲು ಬಳಸಬಹುದು.. ಇದು ಮೂರನೇ ಹಂತದ ಹಿಂಸೆ ನೀಡುವ ಯುಗವಲ್ಲ, ನಾವು ವೈಜ್ಞಾನಿಕ ಸಂಶೋಧನೆ ಮತ್ತು ತಂತ್ರಜ್ಞಾನದ ಆಧಾರದ ಮೇಲೆ ಮಾತ್ರ ತನಿಖೆ ನಡೆಸಬೇಕು ಎಂದು ಶ್ರೀ ಶಾ ಹೇಳಿದರು. ಶಿಕ್ಷೆಯಾಗುವ ದರ ಕೆನಡಾದಲ್ಲಿ ಶೇ.62, ಇಸ್ರೇಲ್ ನಲ್ಲಿ ಶೇ.93, ಇಂಗ್ಲೆಂಡ್ ನಲ್ಲಿ ಶೇ.80 ಮತ್ತು ಅಮೆರಿಕದಲ್ಲಿ ಶೇ.90ರಷ್ಟು ಇದೆ. ಭಾರತದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯನ್ನು ಸುಧಾರಿಸಬೇಕಾದರೆ, ನಾವು ನಮ್ಮ ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಬೇಕು ಮತ್ತು ನಮ್ಮ ಅಪರಾಧ ನ್ಯಾಯ ವ್ಯವಸ್ಥೆಯನ್ನು ವಿಧಿವಿಜ್ಞಾನ ನಡೆಸಿದ ತನಿಖೆಯೊಂದಿಗೆ ಸಂಯೋಜಿಸಬೇಕು ಮತ್ತು ಕೆಲವು ಘೋರ ಅಪರಾಧಗಳಿಗೆ ವಿಧಿವಿಜ್ಞಾನ ತನಿಖೆಯನ್ನು ಕಡ್ಡಾಯಗೊಳಿಸಬೇಕಾಗಿದೆ ಎಂದು ಅವರು ಹೇಳಿದರು. ದೇಶಾದ್ಯಂತ ಪ್ರತಿ ಪೊಲೀಸ್ ಠಾಣೆಯಲ್ಲಿ ವಿಧಿವಿಜ್ಞಾನದ ತನಿಖೆಯನ್ನು ನಾವು ಕಡ್ಡಾಯಗೊಳಿಸಬೇಕಾದರೆ, ರು.

ಕರ್ನಾಟಕ ಮುಖ್ಯಮಂತ್ರಿಗಳು 206 ಅಪರಾಧ ಪತ್ತೆ ಅಧಿಕಾರಿಗಳನ್ನು (ಎಸ್ಒಸಿಒ) ನೇಮಿಸಿದ್ದಾರೆ ಮತ್ತು ಮುಂಬರುವ ದಿನಗಳಲ್ಲಿ ಕರ್ನಾಟಕದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಇಂತಹ ಉಪಕ್ರಮಗಳು ಬಹಳ ದೂರ ಸಾಗುತ್ತವೆ ಎಂದು ಅವರು ಹೇಳಿದರು. ಎನ್ಎಫ್ಎಸ್.ಯು ಕರ್ನಾಟಕದ ಬೆಂಗಳೂರಿನಲ್ಲಿ ವನ್ಯಜೀವಿ ವಿಧಿವಿಜ್ಞಾನಕ್ಕಾಗಿ ಉತ್ಕೃಷ್ಟತೆಯ ಕೇಂದ್ರವನ್ನು ಸ್ಥಾಪಿಸುತ್ತಿದೆ ಎಂದು ಅವರು ಹೇಳಿದರು. ಈ ಕ್ಷೇತ್ರದಲ್ಲೂ ಭಾರತವು ವಿಶ್ವದಲ್ಲಿ ಅಗ್ರಗಣ್ಯವಾಗಬೇಕು ಎಂಬುದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಗುರಿಯಾಗಿದೆ ಎಂದು ಶ್ರೀ ಶಾ ಹೇಳಿದರು. ಧಾರವಾಡದಲ್ಲಿ ಆರಂಭವಾಗುತ್ತಿರುವ ಈ ವಿಶ್ವವಿದ್ಯಾಲಯವು ಧಾರವಾಡದ ಯುವಕರಿಗೆ ಮಾತ್ರವಲ್ಲದೆ ಇಡೀ ಉತ್ತರ ಕರ್ನಾಟಕದ ಯುವಕರಿಗೆ ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ, ಇಡೀ ಕರ್ನಾಟಕದ ಕಾನೂನು ಮತ್ತು ಸುವ್ಯವಸ್ಥೆಯನ್ನು ನಿರ್ವಹಿಸಲು ನೆರವಾಗುತ್ತದೆ ಎಂದು ಅವರು ಹೇಳಿದರು.

Related News

spot_img

Revenue Alerts

spot_img

News

spot_img