27.5 C
Bengaluru
Wednesday, November 6, 2024

ನಿಮ್ಮ ಮನೆಯ ಮೆಟ್ಟಿಲುಗಳ ಕೆಳಗಿನ ಜಾಗದ ಬಳಕೆಗೆ ಸಲಹೆಗಳು

ಬೆಂಗಳೂರು, ಫೆ. 06 : ಮನೆಯನ್ನು ನಿರ್ಮಾಣ ಮಾಡುವಾಗ ಈ ಆಧುನಿಕ ಕಾಲದಲ್ಲಿ ಸಣ್ಣ ಜಾಗವನ್ನೂ ಹೇಗೆ ಉಪಯೋಗಿಸಿಕೊಳ್ಳಬಹುದು ಎಂಬುದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಉದಾಹರಣೆಗೆ ಬಾಕ್ಸ್ ರೀತಿಯ ಕಾರ್ಟ್ ಅನ್ನು ಖರೀದಿಸಿದರೆ, ಅದರ ಒಳಗಿನ ಜಾಗವನ್ನು ಸಾಕಷ್ಟು ಬೇಡದ ಕೆಲ ವಸ್ತುಗಳನ್ನು ಇಡಲು ಉಪಯೋಗವಾಗುತ್ತದೆ. ಹೀಗೆ ಈಗ ಮನೆಗಳಲ್ಲಿ ಮೆಟ್ಟಿಲುಗಳ ಕೆಳಗೆ ಉಳಿಯುತ್ತಿದ್ದ ಜಾಗವನ್ನು ಮೊದಲೆಲ್ಲಾ ಏನಕ್ಕೂ ಪ್ರಯೋನಕ್ಕೆ ಬರುತ್ತಿರಲಿಲ್ಲ. ಆದರೆ ಈಗ ಹಾಗಲ್ಲ. ಮೆಟ್ಟಿಲು ಕೆಳಗಿನ ಜಾಗವನ್ನು ಸಾಕಷ್ಟು ರೀತಿಯಲ್ಲಿ ಉಪಯೋಗಿಸಿಕೊಳ್ಳಬಹುದು. ಈ ಬಗ್ಗೆ ಕೆಲವು ಸಲಹೆಗಳನ್ನು ಕೆಳಗೆ ನೀಡಲಾಗಿದೆ.

ಮನೆಯನ್ನು ಡ್ಯುಪ್ಲೆಕ್ಸ್ ನಿರ್ಮಿಸಿದ್ದರೆ, ಮೆಟ್ಟಿಲುಗಳ ಕೆಳಗೆ ಸಾಕಷ್ಟು ಜಾಗ ಉಳಿದಿರುತ್ತದೆ. ಲಿವಿಂಗ್ ಏರಿಯಾದಲ್ಲಿ ಮೆಟ್ಟಿಲುಗಳು ಬರುವ ಕಾರಣ ಅಲ್ಲಿ ಏನುನ್ನೂ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಭಾವಿಸಲಾಗಿತ್ತು. ಆದರೆ ಈಗ ಮೆಟ್ಟಿಲುಗಳ ಕೆಳಗೆ ವಾಡ್ರೂಬ್ ಗಳನ್ನು ಜೋಡಿಸಬಹುದು. ಶೇಖರಣಾ ಪರಿಹಾರಗಳಿಂದ ಹಿಡಿದು ಸ್ನೇಹಶೀಲ ಓದುವ ಮೂಲೆಗಳವರೆಗೆ ಬಳಸಬಹುದು. ಕಡೆಗಣಿಸದ ಈ ಜಾಗವನ್ನು ಬಳಕೆಗೆ ಬರುವಂತೆ ಪರಿವರ್ತಿಸಲು ಸೃಜನಶೀಲ ಮತ್ತು ಮೋಜಿನ ಮಾರ್ಗಗಳ ಕೊರತೆಯಿಲ್ಲ. ಮೆಟ್ಟಿಲುಗಳ ಕೆಳಗಿರುವ ಸ್ಥಳವು ಸಾಮಾನ್ಯವಾಗಿ ಕಡೆಗಣಿಸಲ್ಪಡುವ ಪ್ರದೇಶವಾಗಿದ್ದು ಅದನ್ನು ಕೆಲವು ಆಧುನಿಕ ಸ್ಪರ್ಶಗಳೊಂದಿಗೆ ಸೊಗಸಾದ ಮತ್ತು ಪ್ರಾಯೋಗಿಕ ಸ್ಥಳವಾಗಿ ಪರಿವರ್ತಿಸಬಹುದು.

ಮೆಟ್ಟಿಲುಗಳ ಕೆಳಗೆ ಸಂಗ್ರಹಣೆಯನ್ನು ಹೆಚ್ಚಿಸಲು ಉತ್ತಮ ಮಾರ್ಗವಾಗಿದೆ. ಮನೆಯ ಬಾಗಿಲ ಬಳಿ ಮೆಟ್ಟಿಲುಗಳಿದ್ದರೆ, ಅಲ್ಲಿ ಬೂಟುಗಳನ್ನು ಇಟ್ಟುಕೊಳ್ಳಲು ವಾಡ್ರೂಬ್‌ ಮಾಡಬಹುದು. ಇಲ್ಲವೆ ಚಪ್ಪಲಿಗಳನ್ನು ಇಡಲು ಮನೆಯಿಂದ ಹೊರಗಿಡುವುದಾದರೆ, ಕೋಟ್‌ಗಳು, ಪುಸ್ತಕಗಳು, ಮಕ್ಕಳ ಆಟಿಕೆಗಳು, ಕ್ರೀಡಾ ಉಪಕರಣಗಳನ್ನು ಸಂಗ್ರಹಿಸಲು ವಾಡ್ರೂಬ್‌ ಗಳನ್ನು ನಿರ್ಮಿಸಬಹುದು. ಅದರಲ್ಲೂ ಹೆಚ್ಚುವರಿ ಶೈಲಿಗಾಗಿ ನೀವು ಸ್ಲೈಡಿಂಗ್ ಬಾಗಿಲು ಅಥವಾ ಪರದೆಗಳನ್ನು ಕೂಡ ಅಳವಡಿಸಬಹುದು.

ಈನ್ನು ಮೆಟ್ಟಿಲುಗಳ ಕೆಳಗೆ ಮಕ್ಕಳ ಆಟದ ಮನೆಯನ್ನು ಪುಟ್ಟದಾಗಿ ನಿರ್ಮಾಣ ಮಾಡಬಹುದು. ಆಟದ ಮನೆಗಳನ್ನು ನಿಮಗೆ ಬೇಕಾದ ಅಲಂಕಾರದಲ್ಲಿ ನಿರ್ಮಾಣ ಮಾಡಬಹುದು. ಬಣ್ಣಗಳೀಮದ ತುಂಬಿಸಿ ಮಕ್ಕಳನ್ನು ಆಕರ್ಷಿಸಬಹುದು. ಇಲ್ಲಿ ಮಕ್ಕಳು ಆಟವಾಡಲು, ಕೂತು ಓದಲು, ಇಲ್ಲವೆ ಮಲಗಲು ಬಯಸಿದಾಗ ಮಲಗಲು ಪುಟ್ಟ ಬೆಡ್‌ ಅನ್ನು ಕೂಡ ಅಳವಡಿಸಬಹುದು. ಇಲ್ಲವೇ ಇಲ್ಲಿ ಮಕ್ಕಳಿಗೆ ಇಷ್ಟವಾಗುವಂತೆ ಅಕ್ವೇರಿಯಂ ಅನ್ನು ಜೋಡಿಸಲು ಪೀಠೋಪಕರಣಗಳನ್ನು ಅಳವಡಿಸಬಹುದು. ಅಕ್ವೇರಿಯಂನಲ್ಲಿ ಮೀನುಗಳನ್ನು ನೋಡುತ್ತಾ ಮಕ್ಕಳು ಆಟವಾಡುತ್ತಾರೆ. ಖುಷಿಯಿಂದ ಕಾಲ ಕಳೆಯುತ್ತಾರೆ.

 

ಇನ್ನು ಇದಿಷ್ಟೇ ಅಲ್ಲದೇ, ಮನೆಯಲ್ಲಿನ ಲಾಮಡ್ರಿ ಬಟ್ಟೆಗಳನ್ನು ಇಟ್ಟುಕೊಳ್ಳಲು ಈ ಮೆಟ್ಟಿಲುಗಳ ಕೆಳಗಿನ ಜಾಗವನ್ನು ಬಳಸಬಹುದು. ಅಲಂಕಾರಿಕ ವಸ್ತುಗಳನ್ನು ಇಟ್ಟುಕೊಳ್ಳುವುದಕ್ಕಾಗಿ ಶೋಕೇಸ್‌ ಮಾದರಿಯಲ್ಲಿ ಪೀಠೋಪಕರಣಗಳನ್ನು ಡಿಸೈನ್‌ ಮಾಡಬಾರದು. ಮಕ್ಕಳು ಓದುವುದಕ್ಕೆ, ಬರೆಯುವುದಕ್ಕಾಗಿ ಟೇಬಲ್‌ ಗಳನ್ನು ಅಳವಡಿಸಬಹುದು. ಇಲ್ಲವೇ ಟಿವಿಗಳನ್ನು ಕೂಡ ವಾಲ್‌ ನಲ್ಲಿ ನೇತು ಹಾಕಬಹುದು. ಆಗ ಟಿವಿಗಾಗಿ ಸಪರೇಟ್‌ ಪೀಠೋಪಕರಣಗಳನ್ನು ಇಡುವ ಅವಶ್ಯಕತೆ ಇರುವುದಿಲ್ಲ. ಇಲ್ಲವೇ ಇಲ್ಲಿ ಡ್ರಾಯರ್‌ ಗಳನ್ನು ಇಡಬಹುದು. ಇದರೊಳಗೆ ನಿಮಗೆ ಬೇಕಾದ ವಸ್ತುಗಳನ್ನು ಇಡಬಹುದು.

Related News

spot_img

Revenue Alerts

spot_img

News

spot_img