21 C
Bengaluru
Tuesday, December 3, 2024

ಸ್ಥಿರಾಸ್ತಿಗಳ ತಾತ್ಕಾಲಿಕ ಪರಿಷ್ಕೃತ ದರಗಳ ಪರಿಷ್ಕರಣೆ;ಆಕ್ಷೇಪಣೆಗಳ ಸ್ವೀಕಾರಕ್ಕೆ ಆಹ್ವಾನ

#Revision # Provisional #Revised Rates # immovable properties #invitation # receipt # objections

ಬೆಂಗಳೂರು ಸೆ 8;ಅಕ್ಟೋಬರ್ 1ರಿಂದ ಭೂಮಿಯ ಮಾರ್ಗಸೂಚಿ ಬೆಲೆ ಹೆಚ್ಚಳವಾಗಲಿದೆ. ಹೀಗಾಗಿ ಜಮೀನು, ನಿವೇಶನ, ಮನೆ ಖರೀದಿ ಮಾಡುವ ಉದ್ದೇಶವಿದ್ದರೆ ಕೂಡಲೇ ಪ್ರಕ್ರಿಯೆ ಪೂರ್ಣಗೊಳಿಸಿಕೊಳ್ಳಿ, ಅಕ್ಟೋಬರ್‌ನಿಂದ ಸ್ಥಿರಾಸ್ತಿಗಳ ಬೆಲೆ ಹೆಚ್ಚಾಗಲಿದೆ. ಅದಕ್ಕೆ ಪೂರಕವಾಗಿ ತಾತ್ಕಾಲಿಕ ಮಾರ್ಗಸೂಚಿ ಬೆಲೆಗಳನ್ನು ಸರ್ಕಾರ ಶುಕ್ರವಾರ ಪ್ರಕಟಿಸಲಿದ್ದು, 15 ದಿನಗಳ ಕಾಲ ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಸ್ವೀಕರಿಸಲಾಗುತ್ತದೆ. ಅ.1ರಿಂದ ಹೊಸ ದರ ಜಾರಿಗೆ ಬರಲಿದೆ. ಮಾರ್ಗಸೂಚಿ ಬೆಲೆ ಒಟ್ಟಾರೆ ಸರಾಸರಿ ಶೇ.30ರಷ್ಟು ಹೆಚ್ಚಳವಾಗುತ್ತದೆ,ತಾತ್ಕಾಲಿಕ ಸ್ಥಿರಾಸ್ತಿಗಳ ಮಾರ್ಗಸೂಚಿ ದರಗಳನ್ನು ಜಿಲ್ಲಾ ನೋಂದಣಿ ಕಛೇರಿ, ಉಪ ನೋಂದಣಿ ಕಛೇರಿ, ಜಿಲ್ಲಾಧಿಕಾರಿಗಳ ಕಛೇರಿ, ಜಿಲ್ಲಾ ಪಂಚಾಯತ್, ನಗರದಲ್ಲಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕ,ಬೆಂಗಳೂರು ಮಹಾನಗರ ಪ್ರಾದೇಶಾಭಿವೃದ್ಧಿ ಪ್ರಾಧಿಕಾರ ಹಾಗೂ ತಹಶೀಲಾ‌ ಕಛೇರಿಗಳಲ್ಲಿ ಹಾಗೂ ಇಲಾಖೆಯ ಜಾಲತಾಣದ ವಿಳಾಸ:https://gr.karnataka.gov.in ರಲ್ಲಿ ಸಾರ್ವಜನಿಕ ಮಾಹಿತಿಗಾಗಿ ಲಭ್ಯವಿದೆ.ಪ್ರಕಟಿಸಿದ ದಿನಾಂಕದಿಂದ 15 ದಿವಸಗಳ ನಂತರ ಬಂದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ನೋಂದಣಿ ಉಪ ಮಹಾಪರಿವೀಕ್ಷಕರು ಹಾಗೂ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related News

spot_img

Revenue Alerts

spot_img

News

spot_img