ಬೆಂಗಳೂರು, ಫೆ. 20 : ಬೆಂಗಳೂರಿನಲ್ಲಿ ಮಧ್ಯಮ ವರ್ಗದವರು ಮನೆಯನ್ನು ಖರೀದಿಸುವುದು ಕನಸೇ ಸರಿ. ರಿಯಲ್ ಎಸ್ಟೇಟ್ ದೇಶದಲ್ಲಿ ಕೈಗೆಟುಕದಷ್ಟು ಎತ್ತರಕ್ಕೆ ಬೆಳೆಯುತ್ತಿದೆ. ದಿನ ದಿನಕ್ಕೂ ಭೂಮಿ ಬೆಲೆ ಹೆಚ್ಚಾಗುತ್ತಲೇ ಇದೆ. ಭಾರತದಲ್ಲಿ ಸರಿಸುಮಾರು 140 ಕೋಟಿಗೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಪ್ರತಿ ನಗರಗಳಲ್ಲೂ ಭೌತಿಕ ಮೂಲಸೌಕರ್ಯ, ಸಾಮಾಜಿಕ ಮೂಲಸೌಕರ್ಯ ಮತ್ತು ಗುಣಮಟ್ಟದ ವಸತಿಗಳು ವಿಭಿನ್ನವಾಗಿವೆ. ಕೆಲವು ನಗರಗಳು ಆರ್ಥಿಕತೆ, ದೃಢವಾದ ಮೂಲಸೌಕರ್ಯ ಅಥವಾ ಸುಸ್ಥಿರ ಅಭಿವೃದ್ಧಿಯನ್ನು ಸುಧಾರಿಸಲು ಸಲೀಸಾಗಿ ಕೆಲಸ ಮಾಡುತ್ತವೆ. ಅಲ್ಲದೇ, ರಿಯಲ್ ಎಸ್ಟೇಟ್ ಉದ್ಯಮ ತುಂಬಾ ಎತ್ತರಕ್ಕೆ ಬೆಳೆಯುತ್ತಿದೆ.
ಈಸ್ ಆಫ್ ಲಿವಿಂಗ್ ಸೂಚ್ಯಂಕದ ಪ್ರಕಾರ ಭಾರತದಲ್ಲಿ ಹೆಚ್ಚು ವಾಸಯೋಗ್ಯ ನಗರಗಳಲ್ಲಿ ಬೆಂಗಳೂರು ಮೊದಲ ಸ್ಥಾನವನ್ನು ಪಡೆದಿದೆ. ಬೆಂಗಳೂರಿನಲ್ಲಿ ಕಳೆದ ಇಪ್ಪತ್ತು ವರ್ಷಗಳಲ್ಲಿ ರಿಯಲ್ ಎಸ್ಟೇಟ್ ಸಿಕ್ಕಾಪಟ್ಟೆ ದೊಡ್ಡದಾಗಿ ಬೆಳೆದು ಬಿಟ್ಟಿದೆ. ಬೆಂಗಳೂರಿನಲ್ಲಿ IT, ಮೂಲಸೌಕರ್ಯ, ಮತ್ತು ಟ್ರಾಫಿಕ್ಗೆ ಸಹ ಪ್ರಸಿದ್ಧವಾಗಿದೆ. ಬೆಂಗಳೂರು ದೇಶದ ಮೂರನೇ ಅತಿದೊಡ್ಡ ನಗರವಾಗಿದೆ. ಭಾರತವಷ್ಟೇ ಅಲ್ಲದೇ, ವಿದೇಶಿಗರು ಕೂಡ ಬೆಂಗಳುರಿನಲ್ಲಿ ವಾಸ ಮಾಡಲು ಬಯಸುತ್ತಾರೆ. ಸಾಕಷ್ಟು ಯುವಕರು ಬೆಂಗಳೂರಿನಲ್ಲಿ ವ್ಯಾಸಂಗ ಮಾಡಲು ಬರುತ್ತಾರೆ. ಇನ್ನೂ ಕೆಲವರು ಕೆಲಸವನ್ನು ಹರಸಿಕೊಂಡು ಬೆಂಗಳೂರಿಗೆ ಬರುತ್ತಾರೆ. ಬೆಂಗಳೂರಿನಲ್ಲಿ ಕೆಲಸ ಮಾಡುವುದು ಸುಲಭ ಎಂದು ಹೇಳುತ್ತಾರೆ.
ಬೆಂಗಳೂರಿನಲ್ಲಿ ವಾಸಿಸಲು ವಾತಾವರಣವೂ ಚೆನ್ನಾಗಿರುತ್ತದೆ. ಮಳೆ, ಚಳಿ, ಬಿಸಿಲು ಎಲ್ಲವೂ ಸಮವಾಗಿರುತ್ತದೆ. ಅತಿವೃಷ್ಟಿ ಅನಾವೃಷ್ಟಿ ಇರುವುದಿಲ್ಲ. ಇಂತಹ ವಾತಾವರಣ ಎಲ್ಲಾ ಕಾಲಕ್ಕೂ ಜನರಿಗೆ ಇಷ್ಟವಾಗುತ್ತದೆ. ಹಾಗಾಗಿ ಬೆಂಗಳೂರಿಗೆ ಬಂದು ನೆಲೆಸಲು ಹಲವರು ಬಯಸುತ್ತಾರೆ. ಬೆಂಗಳೂರು ಮೊದಲಿನಂತಿಲ್ಲ. ಈಗ ಬಹಳ ಬೇಗ ಬೆಳೆದಿರುವ ನಗರವಾಗಿದೆ. ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಬಿಸಿನೆಸ್ ಕೂಡ ಗಗನದೆತ್ತರಕ್ಕೆ ಬೆಳದು ನಿಂತಿದೆ. ಹಾಗಿದ್ದರೂ ಎಲ್ಲರಿಗೂ ಬೆಂಗಳೂರಿನಲ್ಲಿ ಒಂದು ಸ್ವಂತ ಮನೆಯನ್ನು ಖರೀದಿಸಿ, ವಾಸ ಮಾಡಬೇಕು ಎಂದು ಎಲ್ಲರೂ ಬಯಸುತ್ತಾರೆ.
ಬೆಂಗಳೂರಿನಲ್ಲಿ ಈಗ ಮಧ್ಯಮ ವರ್ಗದ ಜನ ವಾಸಿಸುವುದು ಬಹಳ ಕಷ್ಟವಾಗಿದೆ. ಬಾಡಿಗೆ ಮನೆಗಳ ಬೆಲೆಯೂ ಹೆಚ್ಚಾಗಿದೆ. ಬಸವನಗುಡಿ, ಇಂದಿರಾ ನಗರ, ಜಯನಗರ, ಕೋರಮಂಗಲ, ಮಲ್ಲೇಶ್ವರಂ ಹಾಗೂ ರಾಜಾಜಿನಗರದಂತಹ ನಗರಗಳಲ್ಲಿ ಮಧ್ಯಮವರ್ಗದವರು ವಾಸಿಸುವುದಿರಲಿ, ಹೊಸ ಮನೆಯನ್ನು ಖರೀದಿಸಲು ಕೂಡ ಸಾಧ್ಯವಾಗದು. ಇಲ್ಲೆಲ್ಲಾ ಒಂದು ಚದರ ಅಡಿಗೆ ಬರೂಬ್ಬರಿ 10 ಸಾವಿರದಿಂದ 15 ಸಾವಿರದವರೆಗೂ ಇದೆ. ಇನ್ನು ಹೆಬ್ಬಾಳ, ಯಲಹಂಕದ ಕಡೆಗಳಲ್ಲೂ ಐದರಿಂದ ಆರು ಸಾವರಿ ರೂಪಾಯಿ ಚದರ ಅಡಿ ಇದೆ. ಮಧ್ಯಮವರ್ಗದವರು ಸಾಲ ಮಾಡಿಯೂ ಮನೆಯನ್ನು ಖರೀದಿಸುವುದು ಕಷ್ಟವಾಗಿದ್ದು, ಸ್ವಂತ ಮನೆ ಎಂಬುದು ಕನಸಾಗಿಯೇ ಉಳಿಯಬಹುದು.