ಬೆಂಗಳೂರು: ಶಕ್ತಿ ಯೋಜನೆಯಿಂದ ತಮಗೆ ನಷ್ಟವಾಗುತ್ತಿದೆ ಎಂದು ಆರೋಪಿಸಿ 32 ಸಂಘಟನೆಗಳ ಸುಮಾರು 7 ಲಕ್ಷ ವಾಹನಗಳು ಇಂದು ಸೋಮವಾರ (ಸೆ.11ರಂದು)ಸಂಚಾರವನ್ನು ಸ್ಥಗಿತ ಮಾಡಲಿವೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಲಿದೆ.ರಾಜ್ಯ ಪ್ರಾಥಮಿಕ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟವು ಶಾಲೆಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ ಎಂದೇ ಹೇಳುತ್ತಿದೆ. ಶಾಲೆಗಳು ರಜೆ ಕೊಡೋದಿಲ್ಲ. ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ತಲುಪಿಸಲು ಹಾಗೂ ವಾಪಸ್ ಕರೆದೊಯ್ಯಲು ತಮ್ಮದೇ ಆದ ರೀತಿಯಲ್ಲಿ ವ್ಯವಸ್ಥೆ ಮಾಡಿಕೊಳ್ಳಬೇಕಿದೆ ಎಂದು ಹೇಳಿದೆ.ವಾಹನಗಳ ಮಾಲಕರು ಹಾಗೂ ಚಾಲಕರಿಗೂ ತಮ್ಮದೇ ಆದ ಹಲವಾರು ಸಮಸ್ಯೆಗಳಿತ್ತು. ಈ ಕುರಿತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಗಮನಕ್ಕೂ ತರಲಾಗಿತ್ತು. 36ಕ್ಕಿಂತ ಹೆಚ್ಚು ಸಂಘಟನೆಗಳು ಸೇರಿಕೊಂಡು ಮಾಡಿದ್ದ ಒಕ್ಕೂಟವೇ ಸರ್ಕಾರದ ಮುಂದೆ ಮನವರಿಕೆ ಮಾಡಿತ್ತು. ಆದರೆ ಭರವಸೆ ಈಡೇರಿಸೋದಾಗಿ ಹೇಳಿ ಎರಡು ಬಾರಿ ಅವಧಿ ಮುಗಿದರೂ ಇನ್ನೂ ಈಡೇರದೇ ಇರುವುದರಿಂದ ಬಂದ್‌ಗೆ ಕರೆ ನೀಡಲಾಗಿದೆ.
ಖಾಸಗಿ ಸಾರಿಗೆ ಸಂಘಗಳ ಒಕ್ಕೂಟದ ಬೇಡಿಕೆಗಳೇನು?
ಚಾಲಕರಿಗೆ ಮಾಸಿಕ ಒಂದು ಸಾವಿರ ರೂಪಾಯಿ ಪರಿಹಾರ ನೀಡಬೇಕು
ಅಸಂಘಟಿತ ವಾಣಿಜ್ಯ ವಾಹನ ಚಾಲಕರ ಮತ್ತು ಸಾರಿಗೆ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು
ಚಾಲಕರ ಪುನಶ್ಚೇತನಕ್ಕೆ ಕಡಿಮೆ ಬಡ್ಡಿಯಲ್ಲಿ ರೂ. 2 ಲಕ್ಷದವರೆ ಸಾಲ ನೀಡಬೇಕು
ಎಲೆಕ್ಟ್ರಿಕ್ ಆಟೋಗಳಿಗೆ ಪರ್ಮಿಟ್ ನೀಡಬೇಕು
ರ್ಯಾಪಿಡೋ, ಓಲಾ, ಊಬರ್ ಸೇವೆ ಸ್ಥಗಿತಗೊಳಿಸಬೇಕು
ವಿಮಾನ ನಿಲ್ದಾಣಕ್ಕೆ ಏಕರೂಪ ದರ ನಿಗದಿ ಮಾಡಬೇಕು
ರೂ. 10 ರಿಂದ 15 ಲಕ್ಷದ ಬೆಲೆಯ ವಾಹನಗಳಿಗೆ ಇರುವ ಶೇಕಡಾ 9ರಷ್ಟು ಜೀವಿತಾವಧಿ ತೆರಿಗೆ 20 ಲಕ್ಷದ ವಾಹನಗಳಿಗೂ ಮುಂದುವರೆಸಬೇಕು
ಚಾಲಕರಿಗೆ ವಸತಿ ಯೋಜನೆ, ಕಾರು ಖರೀದಿಗೆ ಸಬ್ಸಿಡಿ ನೀಡಬೇಕು
ವೈಟ್ ಬೋರ್ಡ್ ನಲ್ಲಿ ಬಾಡಿಗೆ ಮಾಡುವ ವಾಹನ ಚಾಲಕ, ಮಾಲಕರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು
ಚಾಲಕರ ಮಕ್ಕಳಿಗೆ ಶಾಲಾ ವಿದ್ಯಾರ್ಥಿ ವೇತನ ನೀಡಬೇಕು
ಶಕ್ತಿ ಯೋಜನೆಯನ್ನು ಖಾಸಗಿ ಬಸ್ ಗಳಿಗೂ ವಿಸ್ತರಣೆ ಮಾಡಬೇಕು
ಸರ್ಕಾರಿ ಬಸ್ ಗಳಲ್ಲಿ ನಿರ್ದಿಷ್ಟ ಪ್ರಯಾಣಿಕರನ್ನು ಮಾತ್ರ ಕರೆದೊಯ್ಯಲು ನಿಯಮ ವಿಧಿಸಬೇಕು
ಖಾಸಗಿ ಬಸ್ ಗಳನ್ನು ಕಿಲೋ ಮೀಟರ್ ಆಧಾರದ ಮೇಲೆ ಸರ್ಕಾರ ಬಾಡಿಗೆಗೆ ಪಡೆಯಬೇಕು