28.7 C
Bengaluru
Friday, July 12, 2024

74ನೇ ಗಣರಾಜ್ಯೋತ್ಸವದಂದು, ಯಾವ ಸಚಿವರು, ಯಾವ ಜಿಲ್ಲೆಯಲ್ಲಿ ಧ್ವಜಾರೋಹಣ ಮಾಡಲಿದ್ದಾರೆ?

ಬೆಂಗಳೂರು26 ;ಗಣರಾಜ್ಯೋತ್ಸವ 2023 ರ ಕ್ಷಣಗಣನೆ ಪ್ರಾರಂಭವಾಗಿದೆ. ನಾಳೆ ಜನವರಿ 26 ಗಣರಾಜ್ಯೋತ್ಸವದ ಅದ್ಧೂರಿ ಸಮಾರಂಭಕ್ಕೆ ಸಕಲ ಸಿದ್ಧತೆಗಳೊಂದಿಗೆ ಬೆಂಗಳೂರಿನ ಮಾಣೆಕ್ಷಾ ಪರೇಡ್ ಮೈದಾನ ನವವಧುವಿನಂತೆ ಸಿದ್ಧವಾಗಿದೆ.ಕರ್ನಾಟಕದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಧ್ವಜಾರೋಹಣಕ್ಕೆ ಸಿದ್ಧತೆ ನಡೆದಿದೆ. ಬೆಂಗಳೂರು ನಗರ ಹೊರತುಪಡಿಸಿ 30 ಜಿಲ್ಲೆಗಳಲ್ಲಿ ವಿವಿಧ ಜಿಲ್ಲೆಗಳಲ್ಲಿ ಧ್ವಜಾರೋಹಣ ಮಾಡುವ ಸಚಿವರ ಪಟ್ಟಿಯನ್ನು ಸರ್ಕಾರ ಬಿಡುಗಡೆ ಮಾಡಿದ್ದು, 25 ಜಿಲ್ಲೆಗಳಲ್ಲಿ ಆಯಾ ಜಿಲ್ಲೆಗಳ ಉಸ್ತುವಾರಿ ಸಚಿವರು ಧ್ವಜಾರೋಹಣ ಮಾಡಲಿದ್ದು, 4 ಜಿಲ್ಲಾ ಕೇಂದ್ರಗಳಲ್ಲಿ ಆಯಾ ಜಿಲ್ಲಾಧಿಕಾರಿಗಳು ಧ್ವಜಾರೋಹಣ ಮಾಡಲಿದ್ದಾರೆ. . ಹಾಗಾದರೆ ಗಣರಾಜ್ಯೋತ್ಸವದಂದು ಯಾವ ಜಿಲ್ಲೆಯಲ್ಲಿ ಯಾವ ಸಚಿವರು ಧ್ವಜಾರೋಹಣ ಮಾಡಲಿದ್ದಾರೆ ಎಂಬ ಪಟ್ಟಿ ಈ ಕೆಳಗಿನಂತಿದೆ.

ಗೋವಿಂದ ಕಾರಜೋಳ-ಬೆಳಗಾವಿ,

ಬಿ.ಶ್ರೀರಾಮುಲು-ಬಳ್ಳಾರಿ

ವಿ.ಸೋಮಣ್ಣ-ಚಾಮರಾಜನಗರ

ಎಸ್.ಅಂಗಾರ-ಉಡುಪಿ

ಆರಗ ಜ್ಞಾನೇಂದ್ರ-ತುಮಕೂರು

ಸಿ.ಸಿ.ಪಾಟೀಲ-ಗದಗ

ಆನಂದ್ ಸಿಂಗ್-ಕೊಪ್ಪಳ

ಕೋಟ ಶ್ರೀನಿವಾಸ ಪೂಜಾರಿ-ಉತ್ತರ ಕನ್ನಡ

ಪ್ರಭು ಚೌಹಾಣ್-ಯಾದಗಿರಿ

ಮುರುಗೇಶ್ ನಿರಾಣಿ-ಕಲಬುರಗಿ

ಶಿವರಾಮ ಹೆಬ್ಬಾರ್-ಹಾವೇರಿ

ಎಸ್.ಟಿ.ಸೋಮಶೇಖರ್-ಮೈಸೂರು

ಬಿ.ಸಿ.ಪಾಟೀಲ್-ಚಿತ್ರದುರ್ಗ

ಭೈರತಿ ಬಸವರಾಜ-ದಾವಣಗೆರೆ

ಕೆ.ಸುಧಾಕರ್-ಬೆಂಗಳೂರು ಗ್ರಾಮಾಂತರ

ಕೆ.ಗೋಪಾಲಯ್ಯ-ಹಾಸನ

ಶಶಿಕಲಾ ಜೊಲ್ಲೆ-ವಿಜಯನಗರ

ಎಂಟಿಬಿ ನಾಗರಾಜ್-ಚಿಕ್ಕಬಳ್ಳಾಪುರ

ಕೆ.ಸಿ.ನಾರಾಯಣಗೌಡ-ಶಿವಮೊಗ್ಗ

ಬಿ.ಸಿ.ನಾಗೇಶ್-ಕೊಡಗು

ವಿ.ಸುನೀಲ್ ಕುಮಾರ್-ದಕ್ಷಿಣ ಕನ್ನಡ

ಹಾಲಪ್ಪ ಆಚಾರ್-ಧಾರವಾಡ

ಶಂಕರ ಪಾಟೀಲ ಮುನೇನಕೊಪ್ಪ-ರಾಯಚೂರು

ಮುನಿರತ್ನ-ಕೋಲಾರ

ಆರ್.ಅಶೋಕ್-ಮಂಡ್ಯ

ವಿಜಯಪುರ, ಬೀದರ್, ಚಿಕ್ಕಮಗಳೂರು, ಬಾಗಲಕೋಟೆಯಲ್ಲಿ ಆಯಾ ಜಿಲ್ಲಾಧಿಕಾರಿಗಳು ಧ್ವಜಾರೋಹಣ ಮಾಡಲಿದ್ದಾರೆ.

Related News

spot_img

Revenue Alerts

spot_img

News

spot_img