ಫ್ಲ್ಯಾಟ್ ಖರೀದಿಸಿದ ನಂತರ ಈ ಹಕ್ಕುಪತ್ರ ಸಿಕ್ಕಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿ!

0
147
ಸಾಂದರ್ಭಿಕ ಚಿತ್ರ

ಸ್ವತಂತ್ರ ಮನೆಗಳ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿವೆ. ಈ ಮೊದಲು ಬೆಂಗಳೂರಿನಂತಹ ಮಹಾನಗರಗಳಲ್ಲಿ ಕಾಣುತ್ತಿದ್ದ ಅಪಾರ್ಟ್‌ಮೆಂಟ್‌ಗಳು ಈಗ ಜಿಲ್ಲಾ ಕೇಂದ್ರಗಳಲ್ಲೂ ತಲೆಯೆತ್ತುತ್ತಿವೆ. ಹೀಗಿರುವಾಗ ಅವುಗಳ ಖರೀದಿ ವ್ಯವಹಾರ ಹೇಗಿರುತ್ತದೆ. ಅದರ ಹಕ್ಕುಗಳ ವರ್ಗಾವಣೆ ಯಾವ ರೀತಿ ಇರುತ್ತದೆ ಎಂದು ತಿಳಿಯುವುದು ಬಹಳ ಮುಖ್ಯವಾಗಿರುತ್ತದೆ.

ಸಾಮಾನ್ಯವಾಗಿ ಸ್ವತಂತ್ರ ಮನೆ ಹಾಗು ನಿವೇಶನಗಳ ಖರೀದಿ ಕುರಿತು ಬಹುತೇಕರಿಗೆ ಮಾಹಿತಿ ಇರುತ್ತದೆ. ಆದರೆ ಪಾಶ್ಚಾತ್ಯ ದೇಶಗಳಲ್ಲಿನ ಈ ಅಪಾರ್ಟ್‌ಮೆಂಟ್ ವಿಚಾರ ನಮಗೆಲ್ಲ ಈಗಲೂ ಹೊಸತು ಎಂದೇ ಎನಿಸುತ್ತದೆ. ಒಂದೆರಡು ದಶಕಗಳ ಹಿಂದಷ್ಟೇ ಪರಿಚಯವಾಗಿರುವ ಅಪಾರ್ಟ್‌ಮೆಂಟ್ ಖರೀದಿ ಮಾಹಿತಿಗಳು ಸಾಮಾನ್ಯ ಜನರಿಗೆ ಈಗಲೂ ಹೊಸತೇ.

ಅಪಾರ್ಟ್ಮೆಂಟ್ ಖರೀದಿಸಿದರೆ ಅದರ ನೋಂದಣಿ ಹೇಗಿರುತ್ತದೆ, ವ್ಯವಹಾರ ಹೇಗೆ ನಡೆಯುತ್ತದೆ ಇತ್ಯಾದಿ ವಿಷಯಗಳು ಹೆಚ್ಚಿನವರಿಗೆ ತಿಳಿದಿರುವುದೇ ಇಲ್ಲ. ಅಪಾರ್ಟ್‌ಮೆಂಟ್ ಖರೀದಿ ವ್ಯವಹಾರವು ಸಹ ಇತರೆ ಖರೀದಿ ವ್ಯವಹಾರಗಳಂತೆ ಅತೀ ಸರಳ ವ್ಯವಹಾರವಾಗಿದೆ. ಪ್ರತಿಯೊಬ್ಬ ಖರೀದಿದಾರರು ತಮ್ಮ ಹಕ್ಕನ್ನು ಪ್ರತಿಪಾದಿಸಿ ಖರೀದಿ ಪತ್ರವನ್ನು ಸಬ್-ರಿಜಿಸ್ಟ್ರಾರ್ ಕಛೇರಿಯಲ್ಲಿ ನೋಂದಾಯಿಸಿಕೊಳ್ಳಬೇಕು.

ಅಪಾರ್ಟ್ಮೆಂಟ್ ಖರೀದಿ ವ್ಯವಹಾರದಲ್ಲಿ ಆಸ್ತಿಯ ಹಕ್ಕಗಳ ವರ್ಗಾವಣೆ ಇತರೆ ಆಸ್ತಿ ಖರೀದಿ ಅಂದರೆ ನಿವೇಶನ, ಮನೆ ವ್ಯವಹಾರದಂತೆ ಇರದೆ ಸ್ವಲ್ಪ ವ್ಯತ್ಯಾಸವಿರುತ್ತದೆ. ಅದೆಂದರೆ, ಭೂಮಿಯಲ್ಲಿ ಅವಿಭಾಜ್ಯದ ಹಕ್ಕು, ಫ್ಲ್ಯಾಟ್/ಅಪಾರ್ಟ್ ಮೆಂಟ್ ಕಾರ್ಪೆಟ್ ಏರಿಯಾ (ಕಟ್ಟಡ) ಮತ್ತು ಬಹುತ್ವದಲ್ಲಿ ಉಪಯೋಗಿಸುವ ಹಕ್ಕು (Proportionate share in common area) ಈ ಮೂರು ಹಕ್ಕಗಳನ್ನು ಒಟ್ಟಿಗೆ ಮಾರಾಟ ಮಾಡಿ ಖರೀದಿ ಪತ್ರದಲ್ಲಿ ವಿವರಿಸಿ ಸಬ್-ರಿಜಿಸ್ಟ್ರಾರ್ ಕಛೇರಿಯಲ್ಲಿ ನೋಂದಾಯಿಸಿದ ನಂತರ ಖರೀದಿದಾರನು ಅದರ ಸಂಪೂರ್ಣ ಮಾಲೀಕತ್ವ ಹೊಂದುತ್ತಾನೆ.

ಹೀಗಾಗಿ ಅಪಾರ್ಟ್ಮೆಂಟ್ ಖರೀದಿ ಮಾಡುವವರು ಮಾರಾಟಗಾರರಿಂದ ಈ ಮೂರು ಹಕ್ಕುಗಳನ್ನು ವಿವರಸುವ ಖರೀದಿ ಪತ್ರ ಪಡೆಯುವುದನ್ನು ಮರೆಯಬಾರದು.