Vastu : ಬೆಂಗಳೂರು, ಜ. 09 : ಮನೆಯನ್ನು ಕಟ್ಟುವಾಗ ವಾಸ್ತು ನೋಡಿ ನಿರ್ಮಾಣ ಮಾಡುವುದು ಸಹಜ. ಆದರೆ, ಕೆಲವರ ಮನೆಯ ಮುಖ್ಯದ್ವಾರ ಒಂದು ದಿಕ್ಕಿನಲ್ಲಿದ್ದರೆ, ಪ್ರವೇಶದ್ವಾರ ಅಂದರೆ ಗೇಟ್ ಮತ್ತೊಂದು ದಿಕ್ಕಿನಲ್ಲಿ ಇರುತ್ತದೆ. ಇದರಿಂದ ವಾಸ್ತು ದೋಷ ಉಂಟಾಗಬಹುದಾ ಎಂಬ ಅನುಮಾನಗಳು ಹಲವರನ್ನು ಕಾಡುತ್ತಿರುತ್ತದೆ. ಯಾಕೆಂದರೆ, ಮನೆ ಒಳಗೆ ಬರಬೇಕೆಂದರೆ ಪ್ರವೇಶ ದ್ವಾರ ಹಾಗೂ ಮುಖ್ಯದ್ವಾರ ಎರಡನ್ನು ದಾಟಿಯೇ ಬರಬೇಕು. ಎರಡೂ ದ್ವಾರಗಳು ವಿರುದ್ಧ ದಿಕ್ಕಿನಲ್ಲಿದ್ದರೆ, ಮನೆಗೆ ಒಳಿತಾಗುತ್ತದೆಯೋ ಇಲ್ಲವೋ ಎಂದು ಹಲವರಲ್ಲಿ ಅನುಮಾನ ಕಾಡುತ್ತಿರುತ್ತದೆ. ಅದರಲ್ಲೂ ಮುಖ್ಯವಾಗಿ ಮನೆಯ ಮಾಲೀಕನಿಗೆ ತೊಂದರೆಯಾಗುತ್ತೆದೇನೋ ಎಂದು ಭಾವಿಸಲಾಗಿದೆ.
ಈ ಬಗ್ಗೆ ಡಾ. ರೇವತಿ ವೀ ಕುಮಾರ್ ಅವರು ಸರಳವಾಗಿ ಹೇಳಿದ್ದಾರೆ. ವಾಸ್ತು ಶಾಸ್ತ್ರದ ಬಗ್ಗೆ ಸಾಕಷ್ಟು ಅಧ್ಯಯನವನ್ನು ಡಾ.ರೇವತಿ ವೀ ಕುಮಾರ್ ಅವರು ನಡೆಸಿದ್ದಾರೆ. ಅಷ್ಟೇ ಅಲ್ಲದೇ, ಕಳೆದ 20 ವರ್ಷಗಳಿಂದ ಇದೇ ವಿಷಯವಾಗಿ ಬೋಧನೆ ಮಾಡುತ್ತಿದ್ದಾರೆ. ಜೋತಿಷಿ ಹಾಗೂ ಸಂಖ್ಯಾ ಶಾಸ್ತ್ರಜ್ಞರು ಆಗಿರುವ ಡಾ. ರೇವತಿ ವೀ ಕುಮಾರ್ ವಾಸ್ತು ಬಗ್ಗೆ ಜನರಲ್ಲಿ ಇರುವ ಸಾಕಷ್ಟು ಪ್ರಶ್ನೆಗಳಿಗೆ, ಗೊಂದಲ ಹಾಗೂ ಅನುಮಾನಗಳಿಗೆ ಸರಳವಾಗಿ ಉತ್ತರ ಕೊಡುತ್ತಾರೆ. ಹಾಗಾದರೆ ಮನೆಯ ಮುಖ್ಯದ್ವಾರ ಹಾಗೂ ಪ್ರವೇಶದ್ವಾರದ ದಿಕ್ಕು ಯಾವುದಿದ್ದರೆ ಸರಿ, ಎರಡೂ ದ್ವಾರಗಳು ಒಂದೇ ದಿಕ್ಕಿನಲ್ಲಿರಬೇಕಾ ಎಂದು ನೋಡೋಣ ಬನ್ನಿ.
ಮೊದಲೇಯನದು ಮುಖ್ಯ ದ್ವಾರ ಹೇಗಿರಬೇಕು ಎಂಬುದರ ಬಗ್ಗೆ ಡಾ.ರೇವತಿ ವೀ ಕುಮಾರ್ ಅವರು ಹೇಳಿದ್ದಾರೆ. ಇದರಲ್ಲಿ ಮೂರು ಪದ್ಧತಿ ಇವೆ. ಉಚ್ಛಸ್ಥಾನ ಮೊದಲನೇಯ ಪದ್ಧತಿ, ಗ್ರಹಗಳ ಆದಿ ಪತ್ಯದ ಮೇಲೆ ನಿರ್ಧಾರ ಮಾಡುವುದು ಎರಡನೇಯ ಪದ್ಧತಿಯಾಗಿದೆ. ಇನ್ನು ಕೊನೆಯ ಹಾಗೂ ಮೂರನೇಐ ಪದ್ಧತಿ ಪದವಾಸ್ತು. ಈ ಮೂರ ಪದ್ಧತಿ ಮೂಲಕ ಮೆನಯ ಮುಖ್ಯದ್ವಾರ ಹಾಗೂ ಪ್ರವೇಶದ್ವಾರದ ದಿಕ್ಕನ್ನು ಸೂಚಿಸಬಹುದು ಎಂದು ಹೇಳಲಾಗಿದೆ.
ಉಚ್ಛಸ್ಥಾನ ಪದ್ಧತಿ: ಉತ್ತರ ಮತ್ತು ಪೂರ್ವ ದಿಕ್ಕನ್ನ ಉಚ್ಛಸ್ಥಾನ ಎಂದು ಹೇಳುತ್ತೀವಿ, ನೈರುತ್ಯದಲ್ಲಿ ಅಂದರೆಪಶ್ಚಿಮ ನೈರುತ್ಯ ಹಾಗೂ ದಕ್ಷಿಣ ನೈರುತ್ಯ ನೀಚಸ್ಥಾನ, ಆಗ್ನೇಯದಲ್ಲಿ ದಕ್ಷಿನ ಉಚ್ಛಸ್ಥಾನ, ಪೂರ್ವ ಆಗ್ನೇಯ ನೀಚಸ್ಥಾನ, ವಾಯುವ್ಯದಲ್ಲಿ ಪಶ್ಚಿಮ ವಾಯುವ್ಯ ಉಚ್ಛಸ್ಥಾನ ಉತ್ತರ ವಾಯುವ್ಯ ನೀಚಸ್ಥಾನ. ಈ ಪದ್ಧತಿಯನ್ನು ಅಳವಡಿಸಿಕೊಳ್ಳಲು ಬಯಸುವವರು ಉಚ್ಛಸ್ಥಾನದಲ್ಲೇ ಮುಖ್ಯದ್ವಾರಗಳನ್ನು ಇಡಲು ಬಯಸುತ್ತಾರೆ. ಮುಖ್ಯದ್ವಾರ ಮತ್ತು ಗೇಟ್ ಕೂಡ ಉಚ್ಛಸ್ಥಾನದಲ್ಲಿರಬೇಕು ಎಂದು ಬಯಸುತ್ತಾರೆ.
ಗ್ರಹಗಳ ಆದಿ ಪತ್ಯದ ಮೇಲೆ ನಿರ್ಧಾರ: ಮನೆ ಕಟ್ಟುವಾಗ ಒಂಭತ್ತು ಭಾಗ ಡಿವೈಡ್ ಮಾಡಿದಾಗ ಒಂದೊಂದಕ್ಕೂ ಒಂದೊಂದು ಗ್ರಹಗಳನ್ನು ನೀಡಲಾಗಿದೆ. ಬಲಗಡೆಯಿಂದ ಕೌಂಟ್ ಮಾಡಿದಾಗ ಒಂದೊಂದು ಭಾಗಕ್ಕೆ ಒಂದೊಂದು ಗ್ರಹಕ್ಕೆ ಆದಿ ಪಥ್ಯ ಆಗುತ್ತೆ. ಹೀಗೆ ಕೌಮಟ್ ಮಾಡಿದಾಗ ಬುಧ ಮತ್ತು ಶುಕ್ರ ಗ್ರಹ ಸೂಚಿಸುವ ಭಾಗಕ್ಕೆ ಆದಿಪಥ್ಯವನ್ನು ನೀಡಲಾಗುತ್ತದೆ. ಅದರಂತೆ ಬುಧ ನಾಲ್ಕನೇ ಪಾದ ಹಾಗೂ ಶುಕ್ರ
ಆರನೇ ಪಾದಕ್ಕೆ ಆದಿಪಥ್ಯವಾಗುತ್ತೆ. ಈ ಎರಡು ಜಾಗದಲ್ಲಿ ಮುಖ್ಯದ್ವಾರ ಹಾಗೂ ಪ್ರವೇಶ ದ್ವಾರವನ್ನು ಇಡಬಹುದು ಎಂದು ಹೇಳಲಾಗಿದೆ.
ಮೂರನೇ ಪದ್ಧತಿ ಪದವಾಸ್ತು: ಪದವಾಸ್ತುಗೆ ಗ್ರಹಗಳಿಗಿಂತ ಪ್ರಾಮುಖ್ಯತೆಯನ್ನ ಕೊಡಲಾಗಿದೆ. ಗ್ರಂಥಗಳಿಗೆ ಪದವಾಸ್ತುವಿಗೆ ಸಮ್ಮತವನ್ನು ನೀಡಲಾಗಿದೆ. ವಾಸ್ತು ಮಂಡಲದಲ್ಲಿ ಕೊನೆಯಲ್ಲಿ 32 ಮನೆಗಳು ಇರುತ್ತವೆ. ಇದರಲ್ಲಿ ಪೂರ್ವದಲ್ಲಿ ಬಲಗಡೆಯಿಂದ ಮೂರು ಅಥವಾ ನಾಲ್ಕನೇ ಭಾಗ. ದಕ್ಷಿಣದಲ್ಲಿ ಮೂರು ಅಥವಾ ನಾಲ್ಕನೇ ಭಾಗ, ಪಶ್ಚಿಮದಲ್ಲಿ ನಾಲ್ಕು ಮತ್ತು ಐದನೇ ಭಾಗ, ಉತ್ತರದಲ್ಲಿ ಮೂರು, ನಾಲ್ಕು ಮತ್ತು ಐದು ಭಾಗವನ್ನು ಬಳಸಬಹುದು. ಇವುಗಳಲ್ಲಿ ಶುಭ ಸಂಬಂಧಗಳಿರುವ ಕಡೆ ಮುಖ್ಯದ್ವಾರವನ್ನು ಇಡಬೇಕು ಎಂದು ಹೇಳಲಾಗುತ್ತೆ.