27.9 C
Bengaluru
Saturday, July 6, 2024

ಮಹಿಳೆಯರಿಗೆ ಕಡಿಮೆ ಬಡ್ಡಿ ದರದಲ್ಲಿ ಗೃಹಸಾಲ ನೀಡುವ ಬ್ಯಾಂಕ್‌ ಗಳ ಪಟ್ಟಿ ಇಲ್ಲಿವೆ

ಬೆಂಗಳೂರು, ಮಾ. 08 : ಮಹಿಳೆಯರು ಈಗ ಮೊದಲಿನಂತಿಲ್ಲ. ಅವರು ಕೂಡ ಆರ್ಥಿಕವಾಗಿ ಸದೃಢವಾಗಿದ್ದಾರೆ. ಸ್ವಂತ ಮನೆಯನ್ನು ಖರೀದಿಸುವ ಮಟ್ಟಕ್ಕೆ ಸ್ವತಂತ್ರ್ಯರಾಗಿದ್ದಾರೆ. ಹೀಗಾಗಿ ಸರ್ಕಾರವೂ ಕೂಡ ಮಹಿಳೆಯರು ಆಸ್ತಿ ಖರೀದಿಸಲು ಉತ್ತೇಜನ ನೀಡುತ್ತದೆ. ಮಹಿಳಾ ಗೃಹ ಸಾಲದ ಅರ್ಜಿದಾರರಿಗೆ ಯಾವ ಬ್ಯಾಂಕ್‌ಗಳಿಂದ ಸಾಲವನ್ನು ಪಡೆಯುವುದು ಉತ್ತಮ. ಮಹಿಳೆಯರಿಗೆ ಬಡ್ಡ ದರ ಕಡಿಮೆಯೇ..? ಯಾವುದರಲ್ಲಿ ಎಷ್ಟು ಬಡ್ಡಿ ದರವಿದೆ ಎಂಬುದನ್ನು ಈ ಲೇಖನದಿಂದ ತಿಳಿಯಿರಿ.

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ: ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ಮಹಿಳೆಯರಿಗೆ ಗೃಹ ಸಾಲವನ್ನು ನೀಡುತ್ತದೆ. ಸಂಬಳ ಪಡೆಯುವ ಮಹಿಳೆಯರಿಗೆ ಕನಿಷ್ಠ ಶೇ. 6.40ರಷ್ಟು ಹಾಗೂ ಗರಿಷ್ಠ ಶೇ. 7.0 ರಷ್ಟು ಸಾಲವನ್ನು ನೀಡುತ್ತದೆ. ಇನ್ನು ಸ್ವಂತ ಉದ್ಯೋಗ ಮಾಡುತ್ತಿರುವ ಮಹಿಳೆಯರಿಗೆ ಕನಿಷ್ಠ ಶೇ. 6.45 ರಷ್ಟು ಮತ್ತು ಗರಿಷ್ಢ ಶೇ. 6.80 ರಷ್ಟು ಗೃಹ ಸಾಲವನ್ನು ನೀಡುತ್ತದೆ. 30 ವರ್ಷಗಳ ದೀರ್ಘಾವಧಿಗೆ ಸಾಲವನ್ನು ನೀಡುತ್ತದೆ. ಸಾಲದ ಮೊತ್ತದ 0.50%, ಗರಿಷ್ಠ 15,000 ರೂ. ಜೊತೆಗೆ GST ಸೇರಿಸಿ ಸಂಸ್ಕರಣಾ ಶುಲ್ಕವನ್ನು ವಿಧಿಸುತ್ತದೆ.

ಬ್ಯಾಂಕ್ ಆಫ್ ಬರೋಡಾ: ಈ ಬ್ಯಾಂಕ್‌ ನಲ್ಲಿ 2ಲಕ್ಷ ಕನಿಷ್ಠ ಗೃಹ ಸಾಲವನ್ನು ಕೂಡ ನೀಡುತ್ತದೆ. ಈ ಸೌಲಭ್ಯ ಬೇರೆ ಬ್ಯಾಂಕ್‌ ಗಳಲ್ಲಿ ದೊರೆಯುವುದಿಲ್ಲ. ಇನ್ನು ಈ ಬ್ಯಾಂಕ್‌ ನಲ್ಲಿ ಸಂಬಳ ಪಡೆಯುವ ಮಹಿಳೆಯರಿಗೆ ಶೇ.7.40 ರಷ್ಟು ಹಾಗೂ ಸ್ವಂತ ಬಿಸಿನೆಸ್‌ ಮಾಡುವ ಮಹಿಳೆಯರಿಗೆ ಶೇ. 8.10ರಷ್ಟು ಬಡ್ಡಿ ದರವನ್ನು ನಿಗದಿ ಪಡಿಸಿದೆ. ಇಲ್ಲೂ ಕೂಡ 30 ವರ್ಷಗಳ ದೀರ್ಘಾವಧಿಗೆ ಸಾಲವನ್ನು ನೀಡುತ್ತದೆ. ಸಾಲದ ಮೊತ್ತದ 0.50%, ಕನಿಷ್ಠ 8,500 ರೂ. ಗರಿಷ್ಠ 15,000 ರೂ. ಜೊತೆಗೆ GST ಸೇರಿಸಿ ಸಂಸ್ಕರಣಾ ಶುಲ್ಕವನ್ನು ವಿಧಿಸುತ್ತದೆ.

ಕೋಟಕ್ ಮಹೀಂದ್ರಾ ಬ್ಯಾಂಕ್: ಇದರಲ್ಲಿ ಸುಲಭವಾಗಿ ಗೃಹ ಸಾಲವನ್ನು ಪಡೆಯಬಹುದು. ಗೃಹ ಸಾಲದ ಮೇಲೆ ಸಂಬಳ ಪಡೆಯುವ ಮಹಿಳೆಯರಿಗೆ 7.50%, ಸಂಬಳ ಪಡೆಯದ ಮಹಿಳೆಯರಿಗೆ 7.55% ಬಡ್ಡಿ ದರವನ್ನು ವಿಧಿಸುತ್ತದೆ. 30 ವರ್ಷಗಳ ದೀರ್ಘಾವಧಿಗೆ ಸಾಲವನ್ನು ನೀಡುತ್ತದೆ. ಸಾಲದ ಮೊತ್ತದ 0.25 ರಿಂದ 0.50% ವರೆಗೆ ಸಂಸ್ಕರಣಾ ಶುಲ್ಕವನ್ನು ವಿಧಿಸುತ್ತದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ: ಎಸ್ ಬಿಐ ಬ್ಯಾಂಕ್ ನಲ್ಲಿ ಸಂಬಳ ಪಡೆಯುವ ಮಹಿಳೆಯರಿಗೆ ಕನಿಷ್ಠ ಶೇ.7.55 ರಷ್ಟು ಗರಿಷ್ಠ ಶೇ. 8.05 ರಷ್ಟು ಬಡ್ಡಿ ದರ ವಿಧಿಸಿದರೆ, ಸ್ವಯಂ ಉದ್ಯೋಗ ಮಾಡುವ ಮಹಿಳೆಯರಿಗೆ ಕನಿಷ್ಠ ಶೇ. 7.55 ರಷ್ಟು ಮತ್ತು ಗರಿಷ್ಠ ಶೇ.9.70 ರಷ್ಟು ಬ್ಯಾಂಕ್ ಬಡ್ಡಿ ದರವನ್ನು ವಿಧಿಸುತ್ತದೆ. ಸಾಲದ ಮೊತ್ತದ ಮೇಲೆ 0.40%, ಕನಿಷ್ಠ ರೂ 10,000 ಮತ್ತು ಗರಿಷ್ಠ ರೂ 30,000 ಗೆ GST ಯೊಂದಿಗೆ ಸಂಸ್ಕರಣಾ ಶುಲ್ಕವನ್ನು ಪಡೆಯುತ್ತದೆ. 30 ವರ್ಷಗಳ ದೀರ್ಘಾವಧಿಗೆ ಸಾಲವನ್ನು ನೀಡುತ್ತದೆ.

ಐಸಿಐಸಿಐ ಬ್ಯಾಂಕ್: ಈ ಬ್ಯಾಂಕ್‌ ನಲ್ಲಿ 30 ವರ್ಷಗಳ ದೀರ್ಘಾವಧಿಗೆ ಗೃಹ ಸಾಲವನ್ನು ನೀಡುತ್ತದೆ. ಐಸಿಐಸಿಐ ಬ್ಯಾಂಕ್‌ ನಲ್ಲಿ ಸಂಬಳ ಪಡೆಯುವ ಮಹಿಳೆಯರಿಗೆ ಶೇ. 8.60 ರಷ್ಟು ನೀಡಿದರೆ, ಸತ ಉದ್ದಿಮೆ ಮಾಡುವ ಮಹಿಳೆಯರಿಗೆ ಶೇ. 8.65 ರಷ್ಟು ಬಡ್ಡಿ ದರವನ್ನು ವಿಧಿಸುತ್ತದೆ. ಗೃಹ ಸಾಲದ ಮೊತ್ತದ 0.50%, ರೂ 1,100 ರಿಂದ ಸಂಸ್ಕರಾ ಶುಲ್ಕ ಪ್ರಾರಂಭವಾಗುತ್ತದೆ.

ಎಚ್ ಡಿಎಫ್ ಸಿ ಬ್ಯಾಂಕ್: ಎಚ್‌ ಡಿಎಫ್‌ ಸಿ ಬ್ಯಾಮಕ್‌ ಗ್ರಹಕರಿಗೆ ಉತ್ತಮವಾದ ಸೇವೆಯನ್ನು ನೀಡುತ್ತಿದ್ದು, ಗೃಹ ಸಾಲ ಪಡೆಯಲು ಸಂಬಳ ಪಡೆಯುವ ಮಹಿಳೆಯರಿಗೆ ಶೇ. 7.90 ರಷ್ಟು ಹಾಗೂ ಸ್ವಯಂ ಉದ್ಯೋಗಿ ಮಹಿಳೆಯರಿಗೆ ಶೇ. 7.90 ರಷ್ಟು ಬಡ್ಡಿ ದರವನ್ನು ಬ್ಯಾಂಕ್ ವಿಧಿಸುತ್ತದೆ. 30 ವರ್ಷಗಳ ದೀರ್ಘಾವಧಿಗೆ ಗೃಹ ಸಾಲವನ್ನು ನೀಡುತ್ತದೆ. ಸಂಸ್ಕರಣಾ ಶುಲ್ಕವನ್ನು ಗೃಹ ಸಾಲದ ಮೊತ್ತದ 0.50% ವರೆಗೆ ಅಥವಾ ರೂ 3,000 ಅನ್ನು ಪಡೆಯುತ್ತದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್: ಈ ಬ್ಯಾಂಕ್‌ ನ ವಿಶೇಷವೆಂದರೆ, ಮಹಿಳೆಯರಿಗೆ 70 ವರ್ಷ ವಯಸ್ಸಿನವರಿಗೂ ಗೃಹ ಸಾಲವನ್ನು ನೀಡುತ್ತದೆ. ಈ ಬ್ಯಾಂಕ್ ನಲ್ಲಿ ಗೃಹ ಸಾಲವನ್ನು ಪಡೆಯಲು ಸಂಬಳ ಪಡೆಯುವ ಮಹಿಳೆಯರಿಗೆ ಶೇ. 7.40 ರಷ್ಟು ಬಡ್ಡಿ ದರವಿದ್ದರೆ, ಸ್ವಯಂ ಉದ್ಯೋದ ಮಾಡುವ ಮಹಿಳೆಯರಿಗೆ ಶೇ. 7.45 ರಷ್ಟಿದೆ. 30 ವರ್ಷಗಳ ದೀರ್ಘಾವಧಿಗೆ ಗೃಹ ಸಾಲವನ್ನು ನೀಡುತ್ತದೆ. ಸಂಸ್ಕರಣಾ ಶುಲ್ಕವನ್ನು ಪ್ರಸ್ತುತ ವಿಧಿಸುತ್ತಿಲ್ಲ.

ಆಕ್ಸಿಸ್ ಬ್ಯಾಂಕ್: ಆಕ್ಸಿಸ್ ಬ್ಯಾಮಕ್‌ ನಲ್ಲಿ ಹೋಮ್ ಲೋನ್ ಮೇಲೆ ಸಂಬಳ ಪಡೆಯುವ ಮಹಿಳೆಯರಿಗೆ ಕನಿಷ್ಠ ಶೇ.6.90 ರಷ್ಟು ಗರಿಷ್ಠ ಶೇ. 8.40 ರಷ್ಟು ಹಾಗೂ ಸ್ವಂತ ಬಿಸಿನೆಸ್‌ ಮಾಡುವ ಮಹಿಳೆಯರಿಗೆ ಕನಿಷ್ಠ ಶೇ. 7 ರಷ್ಟು ಹಾಗೂ ಗರಿಷ್ಠ ಶೇ. 8.55ರಷ್ಟು ಬಡ್ಡಿಯನ್ನು ವಿಧಿಸುತ್ತದೆ. ಸಾಲದ ಮೊತ್ತದ 1% ವರೆಗೆ, ಕನಿಷ್ಠ 10,000 ರೂ. ಅಪ್ಲಿಕೇಶನ್ ಲಾಗಿನ್ ಸಮಯದಲ್ಲಿ ಮುಂಗಡ ಪ್ರಕ್ರಿಯೆ ಶುಲ್ಕ 5,000 ಮತ್ತು GST ಅನ್ನು ಸಂಸ್ಕರಣಾ ಶುಲ್ಕವನ್ನು ಆಕ್ಸಿಸ್‌ ಬ್ಯಾಂಕ್‌ ವಿಧಿಸುತ್ತದೆ.

ಸಿಟಿ ಬ್ಯಾಂಕ್: ಸಿಟಿ ಬ್ಯಾಂಕ್‌ ನಲ್ಲಿ ಮಹಿಳೆಯರಿಗೆ ಗೃಹ ಸಾಲವನ್ನು ನೀಡುತ್ತದೆ. ಸಂಬಳ ಪಡೆಯುವ ಮಹಿಳೆಯರಿಗೆ ಶೇ. 6.75 ರಷ್ಟು ಬಡ್ಡಿ ಹೇರುತ್ತದೆ. ಗೃಹ ಸಾಲಕ್ಕೆ ಗರಿಷ್ಠ ಅಧಿಕಾರಾವಧಿ 25 ವರ್ಷಗಳಾಗಿದೆ. ಇತರೆ ಬ್ಯಾಂಕ್‌ ಗಳೀಗೆ ಹೋಲಿಸಿದರೆ, ಸಿಟಿ ಬ್ಯಾಂಕ್‌ ನಲ್ಲಿ ಗೃಹ ಸಾಲದ ದೀರ್ಘಾವಧಿ ಸಮಯ 5 ವರ್ಷಗಳ ಕಾಲ ಕಡಿಮೆ ಇದೆ.

Related News

spot_img

Revenue Alerts

spot_img

News

spot_img