27.5 C
Bengaluru
Wednesday, November 6, 2024

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣ ಪ್ರಶಸ್ತಿ ಮನ್ನಣೆ

ಬೆಂಗಳೂರು: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮುಂಭಾಗದಲ್ಲಿ ಎರಡನೇ ಟರ್ಮಿನಲ್‌ ಆರಂಭಿಸಿದ್ದು, ಇದು ಅತ್ಯಂತ ಐಶಾರಾಮಿ ಮತ್ತು ಅತ್ಯಾಧುನಿಕ ವಿನ್ಯಾಸ ಶೈಲಿಯನ್ನು ಒಳಗೊಂಡಿದೆ. ಗಾರ್ಡನ್‌ ಕಲ್ಪನೆಯೊಂದಿಗೆ ಈ ಟರ್ಮಿನಲ್‌ ಸ್ಥಾಪಿಸಿದ್ದು, ಸಾರ್ವಜನಿಕರು ಮನಸೋತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕಳೆದ ವರ್ಷ ನವೆಂಬರ್‌ 11 ರಂದು ಈ ನಿಲ್ದಾಣವನ್ನು ಉದ್ಘಾಟನಿಸಿದ್ದರು. 13 ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. 2.55 ಲಕ್ಷ ಚದರ ಮೀಟರ್‌ ವಿಸ್ತೀರ್ಣವಿದೆ. ವಾರ್ಷಿಕ 2.5 ಕೋಟಿ ಪ್ರಯಾಣಿಕರನ್ನು ಸಂಚರಿಸಬಹುದಾದ ಸಾಮರ್ಥ್ಯ ಹೊಂದಿದೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು (ಕೆಐಎ) ಪ್ರತಿಷ್ಠಿತ 2022 ಸ್ಕೈಟ್ರಾಕ್ಸ್ ವರ್ಲ್ಡ್ ಏರ್‌ಪೋರ್ಟ್ ಪ್ರಶಸ್ತಿ ಸಮಾರಂಭದಲ್ಲಿ ಭಾರತ ಮತ್ತು ದಕ್ಷಿಣ ಏಷ್ಯಾದ ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣ ಪ್ರಶಸ್ತಿಯನ್ನು ಪಡೆದುಕೊಂಡಿದೆ.ಅತ್ಯುತ್ತಮ ವಿಮಾನ ನಿಲ್ದಾಣ ಎಂದು ಗುರುತಿಸಿಕೊಳ್ಳುವ ಮೂಲಕ ಮಹತ್ವದ ಮೈಲಿಗಲ್ಲು ಸಾಧಿಸಿದೆ. ಈ ಗೌರವವು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಮತ್ತೊಂದು ಗರಿಯನ್ನು ತಂದುಕೊಟ್ಟಿದ್ದು, ಈ ಮೂಲಕ ಗ್ರಾಹಕ-ಕೇಂದ್ರಿತ ವಿಮಾನ ನಿಲ್ದಾಣವಾಗಿ ತನ್ನ ಸ್ಥಾನವನ್ನು ಇನ್ನಷ್ಟು ಉತ್ತಮಪಡಿಸಿಕೊಂಡಿದೆ ಎಂದು ಪ್ರಕಟಣೆ ತಿಳಿಸಿದೆ. ಪ್ರಯಾಣಿಕರಿಂದಲೇ ಆಯ್ಕೆಯಾಗುವ ಈ ಪ್ರಶಸ್ತಿಗೆ ಜಾಗತಿಕವಾಗಿ 15 ವಿಮಾನ ನಿಲ್ದಾಣಗಳನ್ನು ಪರಿಗಣಿಸಲಾಗಿತ್ತು

ಜಾಗತಿಕವಾಗಿ ನಡೆಸಿದ ಗ್ರಾಹಕರ ಸಮೀಕ್ಷೆಯನ್ನು ಆಧರಿಸಿ ಈ ಪ್ರಶಸ್ತಿ ನೀಡಲಾಗಿದೆ. ಚೆಕ್-ಇನ್‌ನಿಂದ ಆಗಮನ, ವರ್ಗಾವಣೆಗಳು, ಶಾಪಿಂಗ್, ಭದ್ರತೆ, ವಲಸೆ, ಗೇಟ್‌ಗಳಲ್ಲಿ ನಿರ್ಗಮನದವರೆಗೆ, ಸಮೀಕ್ಷೆಯು ವಿಮಾನ ನಿಲ್ದಾಣ ಸೇವೆಯಾದ್ಯಂತ ಗ್ರಾಹಕರ ಅನುಭವ ಮತ್ತು ಪ್ರಮುಖ ಕಾರ್ಯಕ್ಷಮತೆಯ ಅಂಶಗಳನ್ನು ಮೌಲ್ಯಮಾಪನ ಆಧಾರದ ಮೇಲೆ ಪ್ರಶಸ್ತಿ ಪಡೆದುಕೊಂಡಿದೆ ಎಂದು ತಿಳಿದುಬಂದಿದೆ.ಈ ಬಗ್ಗೆ ಪ್ರತಿಕ್ರಿಯಿಸಿರುವ ಬೆಂಗಳೂರು ಇಂಟರ್‌ನ್ಯಾಷನಲ್‌ ಏರ್‌ಪೋರ್ಟ್‌ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಶ್ರೀ ಹರಿ ಮಾರಾರ್‌, ‘2022ರ ಜಾಗತಿಕ ಎಸಿಐನ ಎಎಸ್‌ಕ್ಯೂ ಆಗಮನ ಸಮೀಕ್ಷೆಯಲ್ಲಿಅತ್ಯುತ್ತಮ ವಿಮಾನ ನಿಲ್ದಾಣ ಎಂಬ ಗುರುತಿಸಿಕೊಂಡಿರುವುದು ಸಂತಸೆ ತಂದಿಕೊಟ್ಟಿದೆ. ಈ ಮನ್ನಣೆಯು ನಮ್ಮ ತಂಡದ ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ಬದ್ಧತೆಗೆ ಸಾಕ್ಷಿಯಾಗಿದೆ,” ಎಂದರು.ಜೊತೆಗೆ, ಕಸ್ಟಮ್ಸ್ ಮತ್ತು CISF ಸರ್ಕಾರಿ ಸಿಬ್ಬಂದಿಗಳ ಸಹಕಾರವೂ ಅತ್ಯಂತ ದೊಡ್ಡದು. ತಡೆರಹಿತ ಆಗಮನ ಪ್ರಕ್ರಿಯೆಯನ್ನು ಸಕ್ರಿಯಗೊಳಿಸುವಲ್ಲಿ ಅವರ ಸಹಕಾರಕ್ಕೆ ಧನ್ಯವಾದ ಅರ್ಪಿಸುವೆ.

BLR ವಿಮಾನ ನಿಲ್ದಾಣವನ್ನು ಅಭಿನಂದಿಸುತ್ತಾ, ACI ವರ್ಲ್ಡ್ ನ ಡೈರೆಕ್ಟರ್ ಜನರಲ್ ಲೂಯಿಸ್ ಫೆಲಿಪೆ ಡಿ ಒಲಿವೇರಾ ಮಾತನಾಡಿ,ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಡೀ ತಂಡವನ್ನು ವಿಮಾನ ನಿಲ್ದಾಣ ಸೇವಾ ಗುಣಮಟ್ಟ ಪ್ರಶಸ್ತಿ ಪಡೆದಿರುವ ಈ ಯಶಸ್ಸಿಗೆ ಅಭಿನಂದಿಸುತ್ತೇನೆ ಎಂದರು.ಏರ್‌ಪೋರ್ಟ್ಸ್ ಕೌನ್ಸಿಲ್ ಇಂಟರ್‌ನ್ಯಾಶನಲ್ (ACI), ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರೀಸ್ (CII) ನಿಂದ ಗ್ರಾಹಕ ಪ್ರಶಸ್ತಿ, ಭಾರತ ಮತ್ತು ದಕ್ಷಿಣದ ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣದಂತಹ ‘ಗ್ರಾಹಕರ ಧ್ವನಿ’ ಮನ್ನಣೆಯಂತಹ ಹಲವಾರು ಮನ್ನಣೆಗಳು ಮತ್ತು ಪ್ರಶಸ್ತಿಗಳನ್ನು ವಿಮಾನ ನಿಲ್ದಾಣವು ಪಡೆದಿದೆ. ಸ್ಕೈಟ್ರಾಕ್ಸ್ ವರ್ಲ್ಡ್ ಮೂಲಕ ಏಷ್ಯಾವಿಮಾನ ನಿಲ್ದಾಣ ಪ್ರಶಸ್ತಿಗಳು 2022 ಸೇರಿದಂತೆ ಹಲವು ಪ್ರಶಸ್ತಿಗಳನ್ನುಪಡೆದುಕೊಂಡಿವೆ

Related News

spot_img

Revenue Alerts

spot_img

News

spot_img