ಬೆಂಗಳೂರು ಜೂನ್ 18: ರಾಜ್ಯದಲ್ಲಿ ಕಳೆದ ಕೆಲವು ವಾರಗಳಿಂದ ತುಂಬಾ ಸುದ್ದಿಯಲ್ಲಿರುವ ವಿಷಯವೇನೆಂದರೆ ಅದು ಸರ್ಕಾರದ ಗ್ಯಾರಂಟಿಗಳು ಮತ್ತು ಅವುಗಳಿಗೆ ಅರ್ಜಿ ಸಲ್ಲಿಸುವ ಭರದಲ್ಲಿದ್ದ ರಾಜ್ಯದ ಜನತೆಗೆ , ರಾಜ್ಯ ಸರ್ಕಾರ ವಿದ್ಯುತ್ ಬೆಲೆ ಏರಿಕೆಯ ಶಾಕ್ ನೀಡಿತ್ತು. ಅದನ್ನು ಹಲವಾರು ಸಮಾಜಿಕ ಜಾಲತಾಣಗಳಲ್ಲಿ ತೀವ್ರ ಖಂಡನೆಯು ವ್ಯಕ್ತವಾಯಿತು, ಆದರು ಸರ್ಕಾರ ಬೆಲೆ ಏರಿಕೆ ಮಾಡಿಯೇ ತೀರಿದೆ.
ಅದರಿಂದ ಬೇಸೆತ್ತ ಕರ್ನಾಟಕ ಜನತೆಯ ಪರವಾಗಿ ಒಂದು ಸಂಘಟನೆ ಇದೀಗ ಧ್ವನಿಯೆತ್ತಿದೆ ಅದ್ಯಾವುದೆಂದರೆ “ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಹಾಗೂ ಇಂಡಸ್ಟ್ರಿ (KCC&I), ಈ ಸಂಘಟನೆಯು ದಿನಾಂಕ ಜೂನ್ 22 ರಂದು ವಿದ್ಯುತ್ ಬೆಲೆಯೇರಿಕೆ ಖಂಡಿಸಿ ಒಂದು ದಿನದ ಕರ್ನಾಟಕ ಬಂದ್ ಗೆ ಕರೆನೀಡಿದೆ.
ಕೂಡಲೆ ವಿದ್ಯುತ್ ದರ ಹಿಂಪಡೆಯುವಂತೆ ಜೂನ್ 10 ರಂದು ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಹಾಗೂ ಇಂಡಸ್ಟ್ರಿ (KCC&I) ಸರ್ಕಾರಕ್ಕೆ ಒಂದು ವಾರದ ಗಡುವು ನೀಡಿತ್ತು, ಇಲ್ಲದ್ದಿದ್ದರೆ ಎಲ್ಲಾ ಕೈಗಾರಿಕೆಗಳನ್ನೂ ಬಂದ್ ಮಾಡಿ ಪ್ರತಿಭಟಿಸುವ ಎಚ್ಚರಿಕೆಯನ್ನು ನೀಡಿತ್ತು. ಆದರು ಸರ್ಕಾರ ವಿದ್ಯುತ್ ಬೆಲೆ ಏರಿಕೆಯ ಶಾಕ್ ನೀಡಿತ್ತು. ಆದ್ದರಿಂದ ದಿನಾಂಕ ಜೂನ್ 22 ರಂದು ವಿದ್ಯುತ್ ಬೆಲೆಯೇರಿಕೆ ಖಂಡಿಸಿ ಒಂದು ದಿನದ ಕರ್ನಾಟಕ ಬಂದ್ ಗೆ ಕರೆನೀಡಿದೆ.