21.4 C
Bengaluru
Thursday, November 14, 2024

7ನೇ ರಾಜ್ಯ ವೇತನ ಆಯೋಗ: ಮನೆ ಬಾಡಿಗೆ ಭತ್ಯೆ ಹೆಚ್ಚಳ

ಬೆಂಗಳೂರು, ಫೆ. 24 : ಸರಕಾರಿ ನೌಕರರ ವೇತನ ಮತ್ತು ಭತ್ಯೆಗಳ ಪರಿಷ್ಕರಣೆಗಾಗಿ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ ರಾಜ್ಯ 7ನೇ ವೇತನ ಆಯೋಗವು ಕಳೆದ ಜ.17 ರಂದು ಪ್ರಶ್ನಾವಳಿ ಬಿಡುಗಡೆ ಮಾಡಿತ್ತು. ಅಂತೆಯೇ ಸಂಘವು ರಾಜ್ಯಾದ್ಯಂತ ಅಧಿಕಾರಿ ಮತ್ತು ನೌಕರರ ಅಭಿಪ್ರಾಯ ಸಂಗ್ರಹಿಸಿ, ಪ್ರಶ್ನಾವಳಿಗೆ ಉತ್ತರ ಒಳಗೊಂಡ ಒಟ್ಟು 65 ಪುಟಗಳ ವರದಿಯನ್ನು ಶುಕ್ರವಾರ ಆಯೋಗಕ್ಕೆ ಸಲ್ಲಿಸಿತು. ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ನೇತೃತ್ವದಲ್ಲಿ ಹಿರಿಯ ಪದಾಧಿಕಾರಿಗಳ ನಿಯೋಗ ಆಯೋಗದ ಅಧ್ಯಕ್ಷರಿಗೆ ಅಭಿಪ್ರಾಯ ಮತ್ತು ಸಲಹೆ ರೂಪದ ವರದಿ ಸಲ್ಲಿಸಿತು.

ಇದರಲ್ಲಿ ಬಡ್ತಿ, ಭತ್ಯೆ, ವೇತನ, ರಜೆ ದಿನ, ಪಿಂಚಣಿ ಸೇರಿದಂತೆ ಹಲವು ಅಂಶಗಳು ಒಳಗೊಂಡಿತ್ತು. ಸಾರ್ವಜನಿಕರು, ಸೇವಾ ಸಂಘಗಳು, ಸರ್ಕಾರಿ ನೌಕರರು, ಇಲಾಖೆಗಳು, ಸಂಸ್ಥೆಗಳಿಗೆ ಆಯೋಗವು ಪ್ರಶ್ನೆಗಳನ್ನು ಕೇಳಿತ್ತು. ಇದಕ್ಕೆ ಉತ್ತರವನ್ನು ಸಲ್ಲಿಸಲು ಫೆ.10-02-2023 ಕೊನೆಯ ದಿನಾಂಕ ಎಂದು ಹೇಳಿತ್ತು. ನಂತರ ಅದನ್ನು ಫೆ 28ಕ್ಕೆ ವಿಸ್ತರಿಸಿತ್ತು. ಈಗಾಗಲೇ ನೌಕರರ ಸಂಘ ಆಯೋಗದ ಪ್ರಶ್ನಾವಳಿಗಳಿಗೆ ಉತ್ತರವನ್ನೂ ಸಲ್ಲಿಸಿದೆ. ಈ ಉತ್ತರದಲ್ಲಿ ಮನೆ ಬಾಡಿಗೆ ಭತ್ಯೆ, ವೇತನ ಹೆಚ್ಚಳ ಹೊರೆ, ಕನಿಷ್ಠ ವಾರ್ಷಿಕ ವೇತನ ಭತ್ಯೆ, ವಿಶೇ ಭತ್ಯೆಗಳು, ತುಟಿ ಭತ್ಯೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಉತ್ತರ ಸಲ್ಲಿಸಿದೆ. ಅದರ ಪ್ರಕಾರ ಮನೆ ಬಾಡಿಗೆ ವೇತನದ ಉತ್ತರ ಹೀಗಿದೆ..

ಹಾಲಿ ಜಾರಿಯಲ್ಲಿರುವ ಮನೆ ಬಾಡಿಗೆ ಭತ್ಯೆ ಮತ್ತು ನಗರ ಪರಿಹಾರ ಭತ್ಯೆ ದರಗಳು ವಾಸ್ತವಿಕ ಮತ್ತು ಸಮಂಜಸವೆಂದು ನೀವು ಅಭಿಪ್ರಾಯಪಡುವಿರಾ? ಇಲ್ಲದಿದ್ದಲ್ಲಿ, ಕಾರಣಗಳ ಸಹಿತ ನೀವು ಪರಿಗಣಿಸುವ ಸಮಂಜಸ ದರವೇನು ಮತ್ತು ಏಕೆ ಎಂದು ದಯವಿಟ್ಟು ಸೂಚಿಸಿರಿ. ಬಾಡಿಗೆ ಮನೆಯಲ್ಲಿ ವಾಸಿಸುವವರಿಗೆ ಪರಿಹಾರವಾಗಿ ಪ್ರಸ್ತುತ ರಾಜ್ಯ ಸರ್ಕಾರಿ ನೌಕರರಿಗೆ ನೀಡುತ್ತಿರುವ ಮನೆ ಬಾಡಿಗೆ ಭತ್ಯೆಯು ಅತ್ಯಂತ ಮುಖ್ಯವಾದ ಅಂಶವಾಗಿದೆ. ಸರ್ಕಾರವು ತನ್ನ ನೌಕರರಿಗೆ ಕಾರ್ಯಸ್ಥಾನಗಳಲ್ಲಿ ವಸತಿ ಸೌಲಭ್ಯಗಳನ್ನು ಕಲ್ಪಿಸಿರುವುದಿಲ್ಲ. ಮಾಲೀಕರು ಮನೆಗಳನ್ನು ಬಾಡಿಗೆಗೆ ಕೊಡುವಾಗ ನೌಕರರ ಮೇಲೆ ಕಟ್ಟುನಿಟ್ಟಾದ ಷರತ್ತಿನ ಕರಾರುಗಳನ್ನು ವಿಧಿಸಿ ಹೆಚ್ಚಿನ ಮುಂಗಡಗಳನ್ನು ಪಡೆಯುತ್ತಾರೆ.

ಬಾಡಿಗೆಯನ್ನು ಪ್ರತಿ ವರ್ಷ ಶೇ.5-10% ರಷ್ಟು ಹೆಚ್ಚಳ ಮಾಡುತ್ತಾರೆ. ಪ್ರಸ್ತುತ ಗ್ರಾಮೀಣ ಪ್ರದೇಶದಲ್ಲೂ ಅವಶ್ಯ ಮೂಲಭೂತ ಸೌಲಭ್ಯಗಳು ಲಭ್ಯವಿರುವುದರಿಂದ ಗ್ರಾಮೀಣ ಪ್ರದೇಶದಲ್ಲಿಯ ಹೆಚ್ಚಿನ ಬಡಿಗೆಯನ್ನು ವಿಧಿಸಲಾಗುತ್ತಿದೆ. ರಾಜ್ಯ ಸರ್ಕಾರಿ ನೌಕರರಿಗೆ ಕಡಿಮೆ ದರದ ಮನೆಬಾಡಿಗೆ ಭತ್ಯೆಯನ್ನು ನಿಗದಿಪಡಿಸುವ ಕ್ರಮವು ಅವೈಜ್ಞಾನಿಕವಾಗಿರುತ್ತದೆ. ರಾಜ್ಯ ಸರ್ಕಾರವು 6ನೇ ವೇತನ ಆಯೋಗದ ಶಿಫಾರಸ್ಸು ಹಾಗೂ ಕೇಂದ್ರ ಸರ್ಕಾರದ ಮಾದರಿಯಲ್ಲಿ ಮನೆ ಬಾಡಿಗೆ ಭತ್ಯೆಯನ್ನು ಈ ಕೆಳಕಂಡಂತೆ ಅನುಷ್ಠಾನಗೊಳಿಸಿದೆ. 2011 ರ ಜನಗಣತಿಯ ಜನಸಂಖ್ಯೆಯನ್ನು ಆಧಾರವಾಗಿ ಇಟ್ಟುಕೊಂಡಿರುವುದು ಅವೈಜ್ಞಾನಿಕವಾಗಿರುತ್ತದೆ. ಸರ್ಕಾರವು ಇದುವರೆವಿಗೂ 2021ರ ಜನಗಣತಿ ಕಾರ್ಯವನ್ನು ಪೂರ್ಣಗೊಳಿಸದಿರುವುದರಿಂದ ಕಳೆದ 02 ವರ್ಷಗಳಿಂದ ನೌಕರರಿಗೆ ಅರ್ಹರಿದ್ದರೂ ಹೆಚ್ಚಿನ ಮನೆ ಬಾಡಿಗೆ ಭತ್ಯೆ ಸಿಗುತ್ತಿಲ್ಲ ಎಂದು ನೌಕರರ ಸಂಘ ಹೇಳಿದೆ.

Related News

spot_img

Revenue Alerts

spot_img

News

spot_img