ಬೆಂಗಳೂರು, ಮಾ. 06 : ಮನೆಯನ್ನು ನೋಡಿ ಶಾಸ್ತ್ರವನ್ನು ಹೇಳಬಹುದು. ವಾಸ್ತು ಶಾಸ್ತ್ರವನ್ನು ಅಧ್ಯಯನ ಮಾಡಿರುವವರಿಗೆ ಮನೆಯನ್ನು ನೋಡಿದ ಕೂಡಲೇ ದೋಷಗಳು ಹಾಗೂ ಪರಿಹಾರಗಳನ್ನು ಹೇಳಬಹುದು. ಉದಾಹರಣಗೆ ಈಶಾನ್ಯದಲ್ಲಿ ಮೆಟ್ಟಿಲುಗಳು ಇದ್ದಾಗ ಆ ಮನೆಯ ಮಕ್ಕಳಿಂದ ಸಮಸ್ಯೆಗಳು ಎದುರಾಗುತ್ತಿರುತ್ತವೆ. ಇದನ್ನು ನೋಡಿದ ಕೂಡಲೇ ಹೇಳಬಹುದು. ಈಶಾನ್ಯ ದಿಕ್ಕಿನಲ್ಲಿ ಸ್ಟೇರ್ ಕೇಸ್ ಗಳು ಇದ್ದಲ್ಲಿ ಮಕ್ಕಳಿಂದ ಖಂಡಿತವಾಗಿಯೂ ಆತಂಕ ಇರುತ್ತದೆ.
ಎಲ್ಲಾ ಸೌಕರ್ಯಗಳು ಇದ್ದರೂ ಕೂಡ ಓದುವುದಿಲ್ಲ. ಏನಾದರೂ ಒಂದು ಸಮಸ್ಯೆಗಳನ್ನು ತರುತ್ತಿರುತ್ತಾರೆ. ಹೇಳಿದ ಮಾತು ಕೇಳುವುದಿಲ್ಲ. ಮನೆ ಬಿಟ್ಟು ಹೋಗುವುದು, ಮನೆಯಲ್ಲಿ ಹೇಳದೇ ಮದುವೆಯಾಗುವುದು ಇಂತಹ ಸಮಸ್ಯೆಗಳು ಕಾಣಬರುತ್ತವೆ. ಈಶಾನ್ಯ ದಿಕ್ಕಿನಲ್ಲಿ ಸ್ಟೇರ್ ಕೇಸ್ ಇದ್ದಾಗ ಯಾವುದಾದರೂ ಒಂದು ರೀತಿಯಲ್ಲಿ ಪೋಷಕರಿಗೆ ಆತಂಕ ಇದ್ದೇ ಇರುತ್ತದೆ.
ಇನ್ನೊಂದು ಬ್ರಹ್ಮಸ್ಥಾನದಲ್ಲಿ ಮನೆಯ ಗೋಡೆ ಬಂದಿರುವುದು. ಸಾಮಾನ್ಯವಾಗಿ ಹೆಚ್ಚು ಎಚ್ಚರವಹಿಸದೆ ಬ್ರಹ್ಮಸ್ಥಾನದಲ್ಲಿ ಎರಡು ಮನೆ ಬಂದಿದ್ದರೆ, ಪೋರ್ಷನ್ ಮಾಡುವುದಕ್ಕೆ ಬ್ರಹ್ಮಸ್ಥಾನದಲ್ಲೇ ಗೋಡೆಯನ್ನು ಕಟ್ಟಿರುತ್ತಾರೆ. ಹೀಗೆ ಮಧ್ಯದಲ್ಲಿ ಗೋಡೆ ಹಾಕಿರುವುದರಿಂದ ವಾಸ್ತು ದೋಷಗಳು ಬರುದಕ್ಕೆ ಸಾಧ್ಯತೆ ಇರುತ್ತದೆ. ಇನ್ನು ವಾಯುವ್ಯದಲ್ಲಿ ಕಾಂಪೌಂಡ್ ಅನ್ನು ಪೂರ್ತಿ ಮಾಡದೇ, ಅಂಗಡಿಯನ್ನು ಮಾಡಿರುತ್ತಾರೆ. ಆದರೆ ಕಾಂಪೌಂಡ್ ಇರುತ್ತದೆ. ಉತ್ತರ ವಾಯುವ್ಯ ಹಾಗೂ ಪಶ್ಚಿಮದ ವಾಯುವ್ಯದಲ್ಲಿ ಕಾಂಪೌಂಡ್ ಹಾಕದಿರುವುದರಿಂದ ಮನೆಯಲ್ಲಿ ಹಣ ಪೋಲಾಗುತ್ತಿರುತ್ತದೆ.
ಇನ್ನು ಆಗ್ನೇಯದಲ್ಲಿ ಎಕ್ಸ್ ಟೆನ್ಷನ್ ಬಂದಿದ್ದರೆ, ಹೆಣ್ಣು ಮಕ್ಕಳು ಲೀಡಿಂಗ್ ನಲ್ಲಿರುತ್ತಾರೆ. ಗಂಡನ ಮಾತನ್ನು ಕೇಳದೆ ಎಲ್ಲಾ ವಿಚಾರದಲ್ಲೂ ಹೆಚ್ಚು ಪ್ರೆಷರ್ ಹಾಕುತ್ತಿರುತ್ತಾರೆ. ಆಗ್ನೇಯ ದಿಕ್ಕನ್ನು ಕಟ್ ಮಾಡಿದ್ದರೂ ಸಮಸ್ಯೆಗಳು ಎದುರಾಗುತ್ತವೆ. ಆದಷ್ಟು ಹೆಚ್ಚು ಹೆಚ್ಚು ಅಧ್ಯಯನ ಮಾಡಿರುವವರು ಸಮಸ್ಯೆಗಳನ್ನು ಮನೆಯನ್ನು ನೋಡುತ್ತಿದ್ದಂತೆಯೇ ದೋಷವನ್ನು ತಿಳಿದುಕೊಂಡು, ಪರಿಹಾರ ನೀಡಬಹುದು ಎಂದು ಡಾ.ರೇವತಿ ವೀ ಕುಮಾರ್ ಹೇಳಿದ್ದಾರೆ. ವಾಸ್ತು ಶಾಸ್ತ್ರದ ಬಗ್ಗೆ ಸಾಕಷ್ಟು ಅಧ್ಯಯನವನ್ನು ಡಾ.ರೇವತಿ ವೀ ಕುಮಾರ್ ಅವರು ನಡೆಸಿದ್ದಾರೆ. ವಾಸ್ತು ಶಾಸ್ತ್ರದ ಬಗೆಗಿನ ಹಲವು ವಿಚಾರಗಳ ಬಗ್ಗೆ ಪರಿಹಾರವನ್ನು ತಿಳಿಸಿಕೊಡುತ್ತಾರೆ.