ಬೆಂಗಳೂರು, ಮಾ. 01 : ವಾಸ್ತುವಿನಲ್ಲಿ ಕೇವಲ ಉಪಕರಣಗಳೀಂದಲೇ ಎಲ್ಲಾ ದೋಷಗಳನ್ನು ಪರಿಹರಿಸಲು ಸಾಧ್ಯವಿಲ್ಲ. ಕೆಲವು ದೋಷಗಳಿಗೆ ಮಾತ್ರವೇ ಪರಿಹಾರವನ್ನು ಕಂಡುಕೊಳ್ಳಬಹುದು. ಈಗ ಟಾಯ್ಲೆಟ್ ಅನ್ನು ಬ್ರಹ್ಮಸ್ಥಾನದಲ್ಲೋ ಅಥವಾ ಉತ್ತರ ಈಶಾನ್ಯದಲ್ಲಿ ಅಂದರೆ ಯಾವ ದಿಕ್ಕಿನಲ್ಲಿ ನಿರ್ಮಿಸಬಾರದೋ ಅಲ್ಲಿ ನಿರ್ಮಾಣ ಮಾಡಿದ್ದರೆ ಪರಿಹಾರ ಮಾಡುವುದು ಕಷ್ಟವಾಗುತ್ತದೆ. ಇನ್ನು ಅಡುಗೆ ಮನೆಯನ್ನು ಆಗ್ನೇಯದಲ್ಲೋ ಔಾಯುವ್ಯದಲ್ಲೋ ಇದ್ದು, ಫೇಸಿಂಗ್ ಡೈರೆಕ್ಷನ್ ನಲ್ಲಿ ಮಾತ್ರವೇ ಸಮಸ್ಯೆ ಇದ್ದರೆ, ಆಗ ಉಪಕರಣಗಳನ್ನು ಬಳಸಿ ಪರಿಹಾರವನ್ನು ಕಂಡುಕೊಳ್ಳಬಹುದು.
ಇನ್ನು ಯಾವುದಾದರೂ ಕೋಣೆಗಳು ವಿರುದ್ಧ ದಿಕ್ಕಿನಲ್ಲಿದ್ದು, ಅದರಲ್ಲಿ ವಾಸ್ತು ದೋಷಗಳು ಕಂಡು ಬಂದರೆ, ಆಗ ಕೆಲ ಉಪಕರಣಗಳ ಸಹಾಯದಿಂದ ದೋಷ ಪರಿಹಾರ ಮಾಡಬಹುದು. ಆದರೆ, ಅಗತ್ಯವಾಗಿ ಸ್ಟೇರ್ ಕೇಸ್ ಗಳು, ನೀರಿನ ಸಂಪು, ಬೋರ್ ವೆಲ್, ಬಾವಿಗಳ ಬಗ್ಗೆ ವಾಸ್ತು ಪರಿಹಾರಗಳು ಬಹಳ ಕಷ್ಟ. ಇವೆಲ್ಲವೂ ಬಲವಾದ ವಾಸ್ತು ದೋಷಗಳನ್ನು ಕೊಡುತ್ತವೆ. ಇವಕ್ಕೆಲ್ಲಾ ಕಾಸ್ಟಿ ಉಪಕರಣಗಳಿಂದ ಪರಿಹಾರ ಮಾಡಿಕೊಳ್ಳಬಹುದು. ಆದರೆ, ಒಮ್ಮೆ ಪರಿಹಾರ ಮಾಡಿದರೆ ಸಾಲದು. ಪದೇ ಪದೇ ಈ ಉಪಕರಣಗಳನ್ನು ತರಬೇಕಾಗುತ್ತದೆ. ಸ್ಟೇರ್ಕೇಸ್ ಎಷ್ಟು ಫ್ಲೋರ್ ಇದೆಯೋ ಅಲ್ಲೆಲ್ಲಾ ಉಪಕರಣಗಳನ್ನು ಇಡಬೇಕಾಗುತ್ತದೆ. ಇದರ ಬದಲು ಮನೆಯನ್ನು ಕೆಡವಿ ನಿರ್ಮಾಣ ಮಾಡುವುದೇ ಸರಿ.
ಇನ್ನು ಬಾವಿಯ ವಾಸ್ತು. ಸಾಮಾನ್ಯವಾಗಿ ಬಾವಿಗಳನ್ನು ಈಶಾನ್ಯ ದಿಕ್ಕಿನಲ್ಲೇ ಇರಬೇಕು. ಅಕಸ್ಮಾತ್ ಆಗಿ ಬೇರೆ ದಿಕ್ಕಿನಲ್ಲಿದ್ದರೆ ಅದನ್ನು ಉಪಕರಣಗಳಿಂದ ಸರಿ ಪಡಿಸುವುದು ಬಹಳ ಕಷ್ಟ. ಇದರಿಂದ ಮನೆಯ ಹೆಣ್ಣು ಮಕ್ಕಳು, ಯಜಮಾನ ಎಲ್ಲರಿಗೂ ಆಪತ್ತು ಬರುವ ಸಾಧ್ಯತೆ ಇರುತ್ತದೆ. ಇದಕ್ಕೆಲ್ಲಾ ಉಪಕರಣಗಳಿಂದ ವಾಸ್ತು ದೋಷವನ್ನು ಸರಿ ಪಡಿಸುವುದು ಸಾಧ್ಯವಿಲ್ಲದ ವಿಚಾರಗಳು. ಯಾವುದಾದರೂ ಒಂದು ಸಮಸ್ಯೆ ಇದ್ದರೆ ಅದನ್ನು ಸರಿಪಡಿಸಬಹುದು. ಆದರೆ, ಕೆಲವು ದೋಷಗಳನ್ನು ಸರಿ ಪಡಿಸಲು ಸಾಧ್ಯವಿಲ್ಲ. ಅದರ ಬದಲು ಮನೆಯನ್ನು ಕೆಡವಿ ಹೊಸ ಮನೆಯನ್ನು ನಿರ್ಮಾಣ ಮಾಡುವುದೇ ಸರಿ.