ಬೆಂಗಳೂರು, ಜ. 31 : ಈಗಂತೂ ಹೆಚ್ಚಿನ ಜನರು ವಿಲ್ಲಾಗಳಲ್ಲಿ ವಾಸವಿರಲು ಬಯಸುತ್ತಾರೆ. ನಗರದಿಂದ ಸ್ವಲ್ಪ ದೂರದ ಅಂತರದಲ್ಲಿ ಮನೆಗಳನ್ನು ಕಟ್ಟಿಕೊಳ್ಳೂತ್ತಾರೆ. ಮನೆ ಖರೀದಿಸಲು ಬಯಸುವವರು ಕೂಡ ವಿಲ್ಲಾಗಳ ಮೊರೆ ಹೋಗುತ್ತಾರೆ. ಈ ಹಿಂದೆಯೇ ವಾಸ್ತು ಶಾಸ್ತ್ರದಲ್ಲಿ ವಾಸದ ಮನೆಗಳು ಯಾವಾಗಲೂ ಊರಿನೊಳಗೆ ಇರಬೇಕು, ಒಂಟಿ ಮನೆಗಳು ಸರಿಯಲ್ಲ ಎಂದು ಹೇಳಲಾಗಿತ್ತು. ಹೀಗಿರುವಾಗ ಈ ವಿಲ್ಲಾಗಳಲ್ಲಿ ವಾಸ ಮಾಡುವವರಿಗೆ ವಾಸ್ತು ಶಾಸ್ತ್ರ ಏನು ಹೇಳುತ್ತದೆ. ವಿಲ್ಲಾಗಳು ಕೂಡ ಒಂಟಿ ಮನೆ ಆಗಿರುವುದರಿಂದ ತೊಂದರೆ ಏನು ಇಲ್ವಾ. ವಿಲ್ಲಾ ಮನೆಗಳನ್ನು ಊರಿನಿಂದ ಹೊರಗೆ ಕಟ್ಟುತ್ತಾರೆ. ಈ ಬಗ್ಗೆ ವಾಸ್ತುವಿನಲ್ಲಿ ಏನು ಹೇಳಲಾಗಿದೆ.
ಗ್ರಾಮ ಅಥವಾ ಪಟ್ಟಣದಿಂದ ದೂರದಲ್ಲಿ ಮನೆಯನ್ನು ಕಟ್ಟುವುದನ್ನು ವಾಸ್ತುವಿನಲ್ಲಿ ಅಂಗೀಕರಿಸುವುದಿಲ್ಲ ಎಂದು ಡಾ.ರೇವತಿ ವೀ ಕುಮಾರ್ ಅವರು ಹೇಳುತ್ತಾರೆ. ವಾಸ್ತುವಿನಲ್ಲಿ ಮನೆಗಳನ್ನು ಒಂದರ ಪಕ್ಕದಲ್ಲಿ ಒಂದರಂತೆ ಕಟ್ಟಬೇಕು. ಒಂದು ರೋಡ್ ನಲ್ಲಿ ಮನೆಗಳು ಪೂರ್ತಿ ಕಟ್ಟಿದ ನಂತರ ಆ ರಸ್ತೆಯ ಹಿಂಭಾಗ ಅಥವಾ ಮುಂಭಾಗದಲ್ಲಿ ಮನೆಯನ್ನು ಕಟ್ಟುವುದು ಸೂಕ್ತ. ಇದನ್ನು ಕಂಟಿನ್ಯುಟಿ ಆಫ್ ಹೌಸಸ್ ಎಂದು ಹೇಳುತ್ತೇವೆ. ಇದು ಆಗಿನ ಕಾಲದಿಂದಲೂ ಬಂದಿರುವಂತಹ ಕಾನ್ಸೆಪ್ಟ್. ಇದು ಅಪಾಯಗಳಿಂದ ಮನುಷ್ಯರನ್ನು ದೂರವಿಡುತ್ತದೆ ಎಂದು ಡಾ. ರೇವತಿ ವೀ ಕುಮಾರ್ ತಿಳಿಸಿದ್ದಾರೆ.
ಇನ್ನು ಹೊಲ, ಗದ್ದೆಗಳಲ್ಲಿ ಕಟ್ಟುತ್ತಿದ್ದ ಮನೆಗಳು ಏನು ಎಂದರೆ, ಹಳ್ಳಿಯಲ್ಲಿ ಮನೆ ಇದ್ದರೂ ತೋಟಗಳಲ್ಲಿ ಕಟ್ಟುಕೊಳ್ಳುತ್ತಿದ್ದರು. ಅದು ಮೋಟರ್ ಇಡುವುದಕ್ಕೆ, ಮಧ್ಯಾಹ್ನದೊತ್ತು ವಿಶ್ರಾಂತಿ ಪಡೆಯಲು, ಬೆಳೆಗಳನ್ನು ಶೇಖರಿಸಲು ಬಳಸಲಾಗುತ್ತಿತ್ತು. ಇದು ಸಪೋರ್ಟಿಂಗ್ ಆಗಿರುತ್ತಿತ್ತೇ ಹೊರತು, ಅಲ್ಲೇ ವಾಸ ಮಾಡುತ್ತಿರಲಿಲ್ಲ. ಇನ್ನು ಈ ವಿಲ್ಲಾಸ್ ಬಂದದ್ದು ಫಾರಿನರ್ಸ್ ಗಳಿಂದ ಬಂದ ಕಾನ್ಸೆಪ್ಟ್. ಅವರಿಗೆ ನಮ್ಮ ಜೊತೆಗೆ ಹೊಂದಿಕೊಳ್ಳಲು ಆಗುತ್ತಿರಲಿಲ್ಲ. ಹಾಗಾಗಿ ಅವರು ನಮ್ಮ ಸಂಸ್ಕೃತಿಯೊಂದಿಗೆ ಬೆರೆಯಲಾಗದೆ ವಿಲ್ಲಾಗಳನ್ನು ಕಟ್ಟಿಕೊಂಡು ಬದುಕುತ್ತಿದ್ದರು. ಆದರೆ ಈಗ ಇದೇನಾಗಿದೆ ಎಂದರೆ, ಎಲ್ಲರೂ ನನ್ನ ಬಳಿ ಹಣ ಇದೆ, ಸ್ಥಳ ಇದೆ. ನಗರದಿಂದ ದೂರ ಇರಬೇಕು ಎಂದು ಬಯಸಿ ವಿಲ್ಲಾ ಪ್ಲಾಂಟ್ ಗಳನ್ನು ಕಟ್ಟಿಕೊಲ್ಳುತ್ತಾರೆ.
ಇದು ತಪ್ಪು ಎಂದೆಲ್ಲ. ಆದರೆ, ಹೀಗೆ ದೂರ ಉಳಿದಾಗ ಮನೆ ಕಳ್ಳತನ ಹಾಗೂ ರಕ್ಷಣೆ ಬಗ್ಗೆ ಆಲೋಚಿಸಬೇಕು. ಕಳ್ಳರು ಹೆಚ್ಚಾಗಿ ಒಂಟಿ ಮನೆಗಳ ಮೇಲೆ ಕಣ್ಣಿಟ್ಟಿರುತ್ತಾರೆ. ಹೀಗಾಗಿ ವಿಲ್ಲಾಗಳಲ್ಲಿ ವಾಸಿಸುವವರಿಗೆ ಅಪಾಯವೇ ಹೆಚ್ಚಾಗಿರುತ್ತದೆ. ಮನೆಯನ್ನು ಫುಲ್ ಸೆಕ್ಯೂರ್ಡ್ ಆಗಿ ಕಟ್ಟಿಕೊಂಡರೆ ತೊಂದರೆ ಇಲ್ಲ. ಇನ್ನು ವಿಲ್ಲಾಗಳನ್ನು ಸಂಪೂರ್ಣವಾಗಿ ವಾಸ್ತು ಪ್ರಕಾರ ಕಟ್ಟುವುದು ಬಹಳ ಮುಖ್ಯ. ಆಗ ಯಾವುದೇ ಸಮಸ್ಯೆಗಳು ಡದುರಾಗುವುದಿಲ್ಲ. ಇನ್ನು ಒಂಟಿ ಮನೆಯಾದರೂ ಭಯವಿಲ್ಲದೇ ಇಲ್ಲಿ ಅರಾಮವಾಗಿ ವಾಸ ಮಾಡುತ್ತೀವಿ ಎನ್ನುವವರು ಯಾವುದೇ ತೊಂದರೆ ಇಲ್ಲದೆ ವಾಸ ಮಾಡಬಹುದು ಎಂದು ಡಾ ರೇವತಿ ವೀ ಕುಮಾರ್ ಹೇಳಿದ್ದಾರೆ.