ಬೆಂಗಳೂರು, ಏ. 15 : ದೇಶದಲ್ಲಿಯೇ ಅತಿ ಹೆಚ್ಚು ನೇರ ತೆರಿಗೆ ಸಂಗ್ರಹಿಸುವ ರಾಜ್ಯಗಳಲ್ಲಿ ಕರ್ನಾಟಕ ರಾಜ್ಯಕ್ಕೆ 3ನೇ ಸ್ಥಾನಕ್ಕೆ ಏರಿದೆ. ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದು, ಎರಡನೇ ಸ್ಥಾನದಲ್ಲಿ ರಾಜಧಾನಿ ದೆಹಲಿ ಇದೆ.ಇನ್ನು ಹೆಚ್ಚು ನೇರ ತೆರಿಗೆ ಸಂಗ್ರಹಿಸಿದ ಭಾರತದ ನಗರಗಳ ಪೈಕಿ ಕರ್ನಾಟಕ ರಾಜಧಾನಿ ಬೆಂಗಳೂರು ಕೂಡ ಮೂರನೇ ಸ್ಥಾನದಲ್ಲಿದೆ. ಆದಾಯ ತೆರಿಗೆ ಹಾಗೂ ಕಾರ್ಪೊರೇಟ್ ತೆರಿಗೆಯನ್ನು ಒಳಗೊಂಡ ನೇರ ತೆರಿಗೆ ದೇಶದಲ್ಲಿ ಗಣನೀಯವಾಗಿ ಏರಿಕೆಯನ್ನು ಕಂಡಿದೆ.
ಕಳೆದ ವರ್ಷ ಭಾರತದಲ್ಲಿ ಒಟ್ಟು 19.7 ಲಕ್ಷ ಕೋಟಿ ರೂ. ನೇರ ತೆರಿಗೆಯನ್ನು ಸಂಗ್ರಹಿಸಿತ್ತು. ಪ್ರಸ್ತುತ ವರ್ಷ 16.61 ಲಕ್ಷ ಕೋಟಿ ರೂ.ಗಳಷ್ಟು ನೇರ ತೆರಿಗೆಯನ್ನು ಸಂಗ್ರಹಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.17.63ರಷ್ಟು ಬೆಳವಣಿಗೆಯನ್ನು ಕಂಡು ದಾಖಲೆ ಸೃಷ್ಟಿಸಿದೆ. ಕೇಂದ್ರ ಬಜೆಟ್ ಅಂದಾಜಿಸಿದ್ದಕ್ಕಿಂತ 2.41 ಲಕ್ಷ ಕೋಟಿ ರೂಪಾಯಿ ಹೆಚ್ಚುವರಿ ಮೊತ್ತವನ್ನು ನೇರ ತೆರಿಗೆ ಸಂಗ್ರಹಿಸಿದೆ. ಪರಿಷ್ಕೃತ ಅಂದಾಜಿಗಿಂತಲೂ 11,000 ಕೋಟಿ ರೂಪಾಯಿ ಹೆಚ್ಚಿನ ಮೊತ್ತದ ತೆರಿಗೆಯನ್ನು ಸಂಗ್ರಹಿಸಿದೆ.
ಕರ್ನಾಟಕದಲ್ಲಿ 1.7 ಲಕ್ಷ ಕೋಟಿ ರೂ. ನೇರ ತೆರಿಗೆ ಸಂಗ್ರಹವಾಗಿದ್ದು, ಮಹಾರಾಷ್ಟ್ರದಲ್ಲಿ 5.2 ಲಕ್ಷ ಕೋಟಿ ರೂ. ಹಾಗೂ ದೆಹಲಿಯಲ್ಲಿ 1.8 ಲಕ್ಷ ಕೋಟಿ ರೂ. ಸಂಗ್ರಹವಾಗಿದೆ. ನೇರ ತೆರಿಗೆ ಸಂಗ್ರಹದಲ್ಲಿ ದಿಹಲಿ ಮೊದಲ ಸ್ಥಾನ ಪಡೆದಿದ್ದು, ಮುಂಬೈ ಎರಡನೇ ಸ್ಥಾನ ಬಳಿಕ ಮೂರನೇ ಸ್ಥಾನದಲ್ಲಿ ಬೆಂಗಳೂರು ಇದೆ. ಮುಂಬೈನಲ್ಲಿ 4.95 ಲಕ್ಷ ಕೋಟಿ ರೂ. ಸಂಗ್ರಹವಾಗಿದ್ದು, ದೆಹಲಿಯಲ್ಲಿ 2.04 ಲಕ್ಷ ಕೋಟಿ ರೂ. ಹಾಗೂ ಬೆಂಗಳೂರಿನಲ್ಲಿ 2.04 ಲಕ್ಷ ಕೋಟಿ ರೂ. ಸಂಗ್ರಹಣೆಯಾಗಿದೆ.