20 C
Bengaluru
Friday, June 20, 2025

ಒಪ್ಪಂದದ ಅಗ್ರಿಮೆಂಟ್‌ ಅನ್ನು ರಿಜಿಸ್ಟರ್‌ ಮಾಡಿಸದಿದ್ದರೆ, ಬಾಡಿಗೆ ಹೆಚ್ಚಿಸುವಂತಿಲ್ಲ ಎಂದ ಹೈ ಕೋರ್ಟ್

ಬೆಂಗಳೂರು, ಏ. 21 :ಈಗಂತೂ ಬಹುತೇಕ ಜನರು ಬಾಡಿಗೆ ಮನೆಗಳಲ್ಲಿ ಇರುತ್ತಾರೆ. ಕೆಲವರು ಕಾನೂನಿನ ಬಗ್ಗೆ ಅರಿವಿರುವ ಕಾರಣ ಅಗ್ರಿಮೆಂಟ್‌ ಸೇರಿದಂತೆ ಕಾನೂನು ಪ್ರಕಾರವೇ ಮಾಲೀಕರು ಹಾಗೂ ಬಾಡಿಗೆದಾರರು ಒಪ್ಪಂದಗಳನ್ನು ಮಾಡಿಕೊಳ್ಳುತ್ತಾರೆ. ಆದರೆ, ಕೆಲವರು ನಂಬಿಕೆಯ ಮೇಲೆ ಒಪ್ಪಂದದ ಪತ್ರಗಳನ್ನು ನೋಂದಣಿ ಮಾಡಿಸುವುದೇ ಇಲ್ಲ. ಇನ್ನೂ ಕೆಲವರು ಸೋಮಾರಿತನ ಮಾಡಿಕೊಂಡು ನಿರ್ಲಕ್ಷ್ಯ ಮಾಡಿರುತ್ತಾರೆ. ಆದರೆ ಇದರಿಂದ ಸಮಸ್ಯೆಗಳು ಆಗುತ್ತವೆ. ಇನ್ನು ಅಗ್ರಿಮೆಂಟ್‌ ಅನ್ನು ನೋಂದಣಿ ಮಾಡಿಸದೇ ಹೋದಲ್ಲಿ ಪ್ರತಿ ವರ್ಷ ಬಾಡಿಗೆಯನ್ನು ಹೆಚ್ಚಿಸುವಂತಿಲ್ಲ ಎಂದು ಹೈ ಕೋರ್ಟ್‌ ಹೇಳಿದೆ.

ನಗರದಲ್ಲಿ ಶೇ. 95ರಷ್ಟು ವಸತಿ, ವಾಣಿಜ್ಯ ಕಟ್ಟಡಗಳನ್ನು ಬಾಡಿಗೆ ನೀಡಲಾಗುತ್ತದೆ. ಮನೆ, ಮಳಿಗೆಗಳನ್ನು ಬಾಡಿಗೆಗೆ ನೀಡುವಾಗ ಮಾಲೀಕರು 20 ರೂ.ನಿಂದ 200 ರೂ.ಔರೆಗಿನ ಸ್ಟಾಂಪ್‌ ಪೇಪರ್‌ನಲ್ಲಿ ಒಪ್ಪಂದವನ್ನು ಪ್ರಿಂಟ್‌ ಹಾಕಿಸಿ ಸಹಿ ಮಾಡಬೇಕು. ನಂತರ ಇದನ್ನು ಉಪನೋಂದಣಾಧಿಕಾರಿ ಕಚೇರಿಗಳಲ್ಲಿ ರಿಜಿಸ್ಟರ್‌ ಮಾಡಿಸಬೇಕು. ಆದರೆ, ಹೆಚ್ಚು ಮಂದಿ ಈ ಕೆಲಸವನ್ನು ಮಾಡುವುದಿಲ್ಲ. ಸಮಯ ಹಣ ವ್ಯರ್ಥ ಮಾಡಿಕೊಳ್ಳುವುದು ಬೇಡ ಎಂದು ಸುಮ್ಮನಾಗುತ್ತಾರೆ. ಕರ್ನಾಟಕ ರೆಂಟ್‌ ಆ್ಯಕ್ಟ್ 1999ರ ಪ್ರಕಾರ, ಬಾಡಿಗೆಯ ಕರಾರನ್ನು ನೋಂದಾಣಾಧಿಕಾರಿ ಕಚೇರಿಯಲ್ಲಿ ಮುದ್ರಾಂಕ ಶುಲ್ಕ ಪಾವತಿಸಿ ರಿಜಿಸ್ಟರ್‌ ಮಾಡಿಸಬೇಕು.

ಮಾಡಿಸದೇ ಹೋದರೆ, ಪ್ರತೀ ವರ್ಷ ಶೇ.5 ರಷ್ಟು ಬಾಡಿಗೆಯ ಮೊತ್ತವನ್ನು ಹೆಚ್ಚಿಸುವಂತಿಲ್ಲ. ಕರಾರು ಒಪ್ಪಂದದ ಅವಧಿ 11 ತಿಂಗಳಿಗಿಂತ ಜಾಸ್ತಿ ಇದ್ದಾಗ, ಮೊದಲಿಗೆ ರಿಜಿಸ್ಪ್ರೇಷನ್‌ ಕಾಯಿದೆ ಸೆಕ್ಷನ್‌ 17(1)ರಡಿ ನೋಂದಣಿ ಮಾಡುವುದು ಕಡ್ಡಾಯವಾಗಿದೆ. ಸೆಕ್ಷನ್‌ 49ರ ಪ್ರಕಾರ ಯಾವ ದಾಖಲೆಗಳು ರಿಜಿಸ್ಟರ್‌ ಆಗಿರುವುದಿಲ್ಲವೋ ಅವುಗಳನ್ನು ಮೇಲಾಧಾರವಾಗಿ ಬಳಸಬಹುದೇ ಹೊರತು, ಅದನ್ನು ಬಾಡಿಗೆ ದರ ಹೆಚ್ಚಳ ಉದ್ದೇಶಕ್ಕೆ ಬಳಸಲಾಗದು ಎಂದು ಈಗ ಹೈ ಕೋರ್ಟ್‌ ಹೇಳಿದೆ. ಇತ್ತೀಚೆಗೆ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್ ಬಾಡಿಗೆ ಒಪ್ಪಂದದ ವಿಚಾರ ಕೋರ್ಟ್‌ ಮೆಟ್ಟಿಲೇರಿತ್ತು. ಈ ಕುರಿತು ವಿಚಾರಣೆ ನಡೆಸಿದ ಕೋರ್ಟ್‌ ಈ ತೀರ್ಪನ್ನು ನೀಡಿದೆ.

Related News

spot_img

Revenue Alerts

spot_img

News

spot_img