ಬೆಂಗಳೂರು, ಜೂ. 07 : ಈಗ ಪ್ರತಿಯೊಬ್ಬರೂ ಏನನ್ನೇ ಖರೀದಿಸಿದರೂ ಕ್ರೆಡಿಟ್ ಕಾರ್ಡ್ ಇಲ್ಲವೇ ಯುಪಿಐ ಮೂಲಕ ಹಣವನ್ನು ಪಾವತಿ ಮಾಡುತ್ತಾರೆ. ಹಾಗಾಗಿ ಐಸಿಐಸಿಐ ಬ್ಯಾಂಕ್ ಯುಪಿಐ ಪಾವತಿಗೆ ಇಎಂಐ ಸೌಲಭ್ಯವನ್ನು ಕಲ್ಪಿಸಿದ್ದು, ಹೊಸ ಸೇವೆಯನ್ನು ಪರಿಚಯಿಸಿದೆ. ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿ ಪಾವತಿ ಮಾಡುವುದಕ್ಕೆ ಇಎಂಐ ಸೌಲಭ್ಯ ನೀಡುವುದಾಗಿ ಬ್ಯಾಂಕ್ ಮಂಗಳವಾರ ಹೇಳಿದೆ. ಐಸಿಐಸಿಐ ಬ್ಯಾಂಕ್ ಈಗ ಖರೀದಿಸಿ, ನಂತರ ಪಾವತಿಸಿ ಸೇವೆಯನ್ನು ಪಡೆಯಲು ಯಾವೆಲ್ಲಾ ಅರ್ಹತೆಗಳು ಇರಬೇಕು ಎಂಬುದನ್ನು ತಿಳಿಯೋಣ ಬನ್ನಿ.
ಫ್ಯಾಷನ್ ಉಡುಪುಗಳು, ಪ್ರವಾಸ, ಎಲೆಕ್ಟ್ರಾನಿಕ್ಸ್, ದಿನಸಿ ಹಾಗೂ ಹೋಟೆಲ್ ಬುಕ್ಕಿಂಗ್ ಸೇರಿದಂತೆ ಹಲವು ವರ್ಗಗಳಲ್ಲಿ ಐಸಿಐಸಿಐ ಸೌಲಭ್ಯವನ್ನು ಒದಗಿಸಿದೆ. ಗ್ರಾಹಕರು ಕನಿಷ್ಠ 10,000 ರೂ. ವಹಿವಾಟು ನಡೆಸುವ ಯುಪಿಐ ಮೊತ್ತಕ್ಕೆ ಮಾತ್ರವೇ ಇಎಂಐ ಸೌಲಭ್ಯವನ್ನು ನೀಡುತ್ತುದೆ. ಗ್ರಾಹಕರು ಮೂರು, ಆರು ಅಥವಾ ಒಂಭತ್ತು ತಿಂಗಳ ಕಾಲ ಕಂತುಗಳಲ್ಲಿ ಪಾವತಿ ಮಾಡಬಹುದು. ಇದರಲ್ಲಿ ಗ್ರಾಹಕರಿಗೆ ಯಾವುದೇ ಬಡ್ಡಿಯನ್ನು ಪಾವತಿಸುತ್ತಿಲ್ಲ. ಹಾಗಾಗಿ ಕ್ರೆಡಿಟ್ ಕಾರ್ಡ್ ಗಿಂತಲೂ ಐಸಿಐಸಿಐ ಬ್ಯಾಂಕ್ ನ ಈ ಸೌಲಭ್ಯ ಗ್ರಾಹಕರನ್ನು ಸೆಳೆಯುತ್ತಿದೆ.
ಈಗ ಖರೀದಿಸಿ ನಂತರ ಪಾವತಿಸಿ ಮೂಲಕ ಇಎಂಐ ಸೌಲಭ್ಯವನ್ನು ಪಡೆಯುವುದು ಹೇಗೆ ಎಂಬುದನ್ನು ತಿಳಿಯಿರಿ.. ಯಾವುದೇ ಮಳಿಗೆಯಲ್ಲಿ ಉತ್ಪನ್ನ ಆಯ್ಕೆಯನ್ನು ಮಾಡಿ. ಹಣ ಪಾವತಿಸಲು ಐ ಮೊಬೈಲ್ ಪೇ ಆ್ಯಪ್ ಇಲ್ಲವೇ ಸ್ಕ್ಯಾನ್ ಎನಿ ಕ್ಯೂಆರ್ ಆಯ್ಕೆ ಅನ್ನು ಆರಿಸಿಕೊಳ್ಳಿ. ವಹಿವಾಟಿನ ಮಿತಿ 10,000 ರೂಪಾಯಿ ಇಲ್ಲವೇ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಪೇ ಲೇಟರ್ ಇಎಂಐ ಆಯ್ಕೆಯನ್ನು ಆಯ್ಕೆಯನ್ನು ಮಾಡಿ. 3, 6 ಅಥವಾ 9 ತಿಂಗಳ ಇಎಂಐ ಅವಧಿಯನ್ನು ಆಯ್ಕೆ ಮಾಡಿ. ಬಳಿಕ ಪಾವತಿಯನ್ನು ದೃಢೀಕರಿಸಿದರೆ, ವಹಿವಾಟು ಯಶಸ್ವಿಯಾಗುತ್ತದೆ.