ಹಿಂದೂ ಕಾನೂನು: ಅವಿಭಕ್ತ ಕುಟುಂಬದ ಹೆಸರಿನಲ್ಲಿ ಆಸ್ತಿ ವ್ಯವಹಾರ ನಡೆಸಿದ್ರೆ ಏನು ಲಾಭ ?

0
226

ಬೆಂಗಳೂರು, ವಿಶ್ವದಲ್ಲಿ ಎಲ್ಲೂ ಇಲ್ಲದ ಕಾನೂನೊಂದು ಭಾರತದಲ್ಲಿ ಇದೆ. ಅದು ಹಿಂದೂ ಕಾನೂನು. ಈ ಕಾನೂನು ಪರಿದಿಯಲ್ಲಿ ಹಿಂದೂ ವಿವಾಹ ಕಾಯ್ದೆ, ಹಿಂದೂ ವಾರಸುದಾರ ಕಾಯ್ದೆ, ಹಿಂದೂ ಮೈನಾರಿಟಿ ಮತ್ತು ಗಾರ್ಡಿಯನ್ ಶಿಪ್ ಆಕ್ಟ್, ಹಿಂದೂ ದತ್ತಕ ಮತ್ತು ನಿರ್ವಹಣಾ ಕಾಯ್ದೆ ಹಲವಾರು ಕಾಯ್ದೆಗಳು ಬರುತ್ತವೆ. ಈ ಹಿಂದೂ ಕಾನೂನಿನಲ್ಲಿ ಹಿಂದೂ ಅವಿಭಕ್ತ ಕುಟುಂಬ ವಹಿವಾಟಿನ ಬಗ್ಗೆ ಸಹ ಉಲ್ಲೇಖಿಸಲಾಗಿದೆ.
ಯಾವುದೇ ವ್ಯಾಪಾರ ವಹಿವಾಟು ನಡೆಸಲು ಪಾಟ್ನರ್ ಶಿಫ್ ಫರ್ಮ್ ಬೇಕು, ಕಂಪನಿ ಇರಬೇಕು ಎನ್ನುತ್ತೇವೆ. ನಿಜ. ಆದ್ರೆ ಹಿಂದೂ ಅವಿಭಕ್ತ ಕುಟುಂಬ ಆಗಿದ್ದರೆ, ಕುಟುಂಬದ ಹೆಸರಿನಲ್ಲಿ ಯಾವುದೇ ವ್ಯಾಪಾರ, ಉದ್ಯಮ ನಡೆಸಲು ಕಾನೂನಿನಲ್ಲಿ ಅವಕಾಶವಿದೆ.

ಹಿಂದೂ ಅವಿಭಕ್ತ ಕುಟುಂಬವನ್ನು HUF ಎಂದು ಸಂಬೋಧಿಸಲಾಗುತ್ತದೆ. ಅಂದಹಾಗೆ ಹಿಂದೂ ಅವಿಭಕ್ತ ಕುಟುಂಬದ ಹೆಸರಿನಲ್ಲಿ ಉದ್ಯಮ- ವ್ಯಾಪಾರ ನಡೆಸುವ ಬಗ್ಗೆಕಾನೂನಿನಲ್ಲಿ ಅವಕಾಶ ಇದೆ. ಮಾತ್ರವಲ್ಲ ಇದರಿಂದ ಸಾಕಷ್ಟು ಪ್ರಯೋಜನಗಳಿವೆ. ಒಬ್ಬ ಹಿಂದೂ ಆಗಿ ಈ ಕಾನೂನು ತಿಳಿದುಕೊಳ್ಳಲೇಬೇಕು. ಯಾಕೆಂದರೆ ಈ ಕಾನೂನು ಜಗತ್ತಿನ ಬೇರೆ ಯಾವ ರಾಷ್ಟ್ರದಲ್ಲೂ ಅಸ್ತಿತ್ವದಲ್ಲಿ ಇಲ್ಲ!

ಹಿಂದೂ ಅವಿಭಕ್ತ ಕುಟುಂಬ: ಮೂರು ತಲೆಮಾರಿನ ಸದಸ್ಯರಿದ್ದು,ಕುಟುಂಬದ ಹಿರಿಯ ವ್ಯಕ್ತಿ ಈ ಕುಟುಂಬದ ನಾಯಕನಿದ್ದರೆ ಅದನ್ನು ಹಿಂದೂ ಅವಿಭಕ್ತ ಕುಟುಂಬ ಎಂದು ಕರೆಯುತ್ತೇವೆ. ಹಿಂದೂ ಅವಿಭಕ್ತ ಕುಟುಂಬದ ಹೆಸರಿನಲ್ಲಿ ವ್ಯಾಪಾರ, ಉದ್ಯಮ ನಡೆಸಲು ಇಚ್ಛಿಸಿದರೆ ಪ್ರತ್ಯೇಕ ಪಾನ್‌ಕಾರ್ಡ್ ಪಡೆಯಬಹುದು. ಮಾತ್ರವಲ್ಲ ಸದಸ್ಯರು ತಮ್ಮ ವೈಯಕ್ತಿಕ ಪಾನ್ ಕಾರ್ಡ್ ಪಡೆಯಲು ಅವಕಾಶವಿದೆ. ಹಿಂದೂ ಅವಿಭಕ್ತ ಕುಟುಂಬದ ಹೆಸರಿನಲ್ಲಿ ಉದ್ಯಮ ನಡೆಸುವುದರಿಂದ ಭಾರತೀಯ ಆದಾಯ ತೆರಿಗೆ ಕಾಯ್ದೆ ಅಡಿಯಲ್ಲಿ ಹಲವು ತೆರಿಗೆಗಳ ವಿನಾಯಿತಿ ಪಡೆಯಲು ಸಹಕಾರಿಯಾಗಲಿದೆ.

ಒಂದೂ ಹಿಂದೂ ಅವಿಭಕ್ತ ಕುಟುಂಬದಲ್ಲಿ ಮುವರು ಸದಸ್ಯರು ಇದ್ದರೆ, ಕುಟುಂಬದ ಹೆಸರಿನಲ್ಲಿ ಒಂದು ಪಾನ್ ಕಾರ್ಡ್ ಪಡೆಯುವ ಜತೆಗೆ ಮೂವರು ಸದಸ್ಯರು ಸಹ ಪ್ರತ್ಯೇಕ ಪಾನ್ ಕಾರ್ಡ್ ಪಡೆಯಬಹುದು. ಇದನ್ನು ಸ್ಥಳೀಯ ಭಾಷೆಯಲ್ಲಿ ಜಾಂಯಿಂಟ್ ಪ್ಯಾಮಿಲಿ ಬ್ಯುಜಿನೆಸ್ ಎಂದೇ ಹೇಳುತ್ತೇವೆ. ಹಿಂದೂ ಕುಟುಂಬದ ಹೆಸರಿನಲ್ಲಿ ಆಸ್ತಿ ಮಾಡಬಹುದು. ವ್ಯಾಪಾರ ಮಾಡಿ ಹಣ ಗಳಿಸಬಹುದು. ಆಸ್ತಿ ಮಾಡಿದ್ರೆ ಅದರಲ್ಲಿ ಸದಸ್ಯರಿಗೆ ಸಮಪಾಲು ಇರುತ್ತದೆ ಎಂಬುದು ಗಮನಾರ್ಹ ಸಂಗತಿ.

ಹಿಂದೂ ಕುಟುಂಬ ಎನಿಸಲು ತಾತ, ಮಗ, ಮೊಮ್ಮಗ ಮೂರು ಗಂಡು ತಲೆಮಾರು ಕಡ್ಡಾಯವಾಗಿ ಇರಲೇಬೇಕು. ಉಳಿದವರಿಗೆ ಜನ್ಮ ಸಮೇತ ಸದಸ್ಯತ್ವ ಸಿಗುತ್ತದೆ. ಇದಕ್ಕೆ ಪ್ರತ್ಯೇಕ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಹಿಂದೂ ಅವಿಭಕ್ತ ಕುಟುಂಬದ ಹೆಸರಿನಲ್ಲಿ ವ್ಯಾಪಾರ ಮಾಡಿ ಆಸ್ತಿ ಗಳಿಸಿದರೆ ಅದಕ್ಕೆ ಮನೆಯ ಹಿರಿಯ ಸದಸ್ಯರು ಮುಖ್ಯಸ್ಥರಾಗಿರುತ್ತಾರೆ. ಅವರನ್ನು ಕಾಯ್ದೆ ಪ್ರಕಾರ ಕತೃ ಎಂದು ಕರೆಯುತ್ತೇವೆ. ಆತನ ತೀರ್ಮಾನಕ್ಕೆ ಎಲ್ಲರೂ ತಲೆಬಾಗಬೇಕು. ಎಲ್ಲಾ ಸದಸ್ಯರಿಗೆ ಸಮಾನ ಅಧಿಕಾರ ಇರುತ್ತದೆ. ಎಲ್ಲರಿಗೂ ಸಮಾನ ಪಿತ್ರಾರ್ಜಿತ ಆಸ್ತಿ ಹಕ್ಕು ಇರುತ್ತದೆ.

ಹಿಂದೂ ಅವಿಭಕ್ತ ಕುಟುಂಬದ ಹೆಸರಿನಲ್ಲಿ ಉದ್ಯಮ ನಡೆಸಿದಾಗ, ಆಸ್ತಿ ಗಳಿಸಿದಾಗ ಸದಸ್ಯರು ಯಾರು ಏನು ಪಾತ್ರ ವಹಿಸಬೇಕು ಎಂಬುದನ್ನು ಕುಟುಂಬದ ಕತೃ ನಿರ್ಧರಿಸುತ್ತಾನೆ. ಇಲ್ಲಿ ಕತೃನ ತೀರ್ಮಾನ ಅಂತಿಮವಾಗಿರುತ್ತದೆ. ಸದಸ್ಯರ ಅಭಿಪ್ರಾಯ ಕೇಳಬಹುದು. ಪರಿಗಣಿಸಬಹುದು. ಇಲ್ಲವೇ ಕೇಳಿ ಕೈ ಬಿಡಬಹುದು. ಕತೃ ತೀರ್ಮಾನ ಅಂತಿಮ. ಹಿಂದೂ ಅವಿಭಕ್ತ ಕುಟುಂಬ ಎನಿಸಿಕೊಳ್ಳಲು ಕನಿಷ್ಠ ಎರಡು ಗಂಡು ಸಂತಾನ ಇರಬೇಕು. ತಂದೆ, ಮಗ, ಮೊಮ್ಮಗ ಇರಬೇಕು. ಹಿಂದೂ ಅವಿಭಕ್ತ ಕುಟುಂಬದ ಸದಸ್ಯರಿಗೆ ಪೂರ್ವಜರ ಪಿತ್ರಾರ್ಜಿತ ಆಸ್ತಿ ವರ್ಗಾವಣೆಯಾಗುತ್ತದೆ. ಈ ಕುಟುಂಬದಲ್ಲಿ ಹೊಸ ಮಗು ಜನಿಸಿದರೆ ಅದು ಗಂಡು ಮಗು ಅಗಿದ್ದಲ್ಲಿ ಸದಸ್ಯನಾಗುತ್ತದೆ.

ಜವಾಬ್ಧಾರಿಗಳು: ಹಿಂದೂ ಅವಿಭಕ್ತ ಕುಟುಂಬ ಒಂದು ವಿಧಿಯೊಳಗೆ ನಡೆಯುತ್ತದೆ. ಭಾವಿಯಲ್ಲಿರುವ ಕಪ್ಪೆಗಳಿಗೆ ಈ ಕುಟುಂಬದ ಆಡಳಿತವನ್ನು ಹೊಲಿಸಲಾಗಿದೆ. ಕರ್ತನಿಗೆ ಸಂಪೂರ್ಣ ಜವಾಬ್ಧಾರಿ ಇರುತ್ತದೆ. ಹೆಣ್ಣು ಸಂತಾನಕ್ಕೆ ಇಲ್ಲಿ ಆಸ್ಪದವಿಲ್ಲ. ಅಪ್ರಾಪ್ತರು ಇದ್ದರೂ ಸದಸ್ಯರಾಗುತ್ತಾರೆ. ಆದ್ರೆ ಅವರಿಗೂ ಅಸ್ತಿಯಲ್ಲಿ ಸಮಪಾಲು ಇರುತ್ತದೆ.

ಅವಿಭಕ್ತ ಕುಟುಂಬದ ಪದ್ಧತಿಗಳು:
ಹಿಂದೂ ಅವಿಭಕ್ತ ಕುಟುಂಬದಲ್ಲಿ ಎರಡು ಪದ್ಧತಿಗಳಿವೆ ಒಂದು ದಯಾಭಾಗ ಪದ್ಧತಿ. ಮತ್ತೊಂದು ಮಿತಾಕ್ಷರ ಪದ್ಧತಿ.

ದಯಾಭಾಗ ಪದ್ಧತಿ : ಪಶ್ಚಿಮ ಬಂಗಾಳದಲ್ಲಿ ಅಸ್ಸಾಂನಲ್ಲಿ ಚಾಲ್ತಿಯಲ್ಲಿದೆ. ಹೆಣ್ಣು ಮತ್ತು ಗಂಡಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಪಾಲು ಹಕ್ಕು ಇದೆ. ತಂದೆ ಮೃತಪಟ್ಟ ನಂತರ ಮಗನಿಗೆ ಅಧಿಕಾರ ಹೋಗುತ್ತದೆ. ದಯಭಾಗದಲ್ಲಿ ಒಬ್ಬ ವ್ಯಕ್ತಿಯ ಸತ್ತ ನಂತರವಷ್ಟೇ ಅಧಿಕಾರ ಚಲಾವಣೆ ಆಗುತ್ತದೆ.

ಮಿತಾಕ್ಷರ ಪದ್ಧತಿ: ಬನರಾಸ್, ಮಿಥಿಲಾ, ಮಹಾರಾಷ್ಟ್ರ, ದ್ರಾವಿಡ ವಲಯದಲ್ಲಿದೆ. ಅನ್ವಯ. ಪಶ್ಚಿಮ ಬಂಗಾಳ ಅಸ್ಸಾಂ ಬಿಟ್ಟು ಉಳಿದ ಕಡೆ ಇದೆ. ಗಂಡು ಸಂತಾನಕ್ಕೆ ಮಾತ್ರ ಪಿತ್ರಾರ್ಜಿತ ಅಸ್ತಿ ಇರುತ್ತದೆ. ಸದಸ್ಯತ್ವ ಇರುತ್ತದೆ. ಹೆಣ್ಣು ಸಂತಾನಕ್ಕೆ ಸದಸ್ಯತ್ವ ಇರಲ್ಲ. ಅವರು ಮನೆಯಲ್ಲಿ ಇರಬಹುದು ಅಷ್ಟೆ. ಅವರಿಗೆ ವ್ಯಾಪಾರದಲ್ಲಿ ಯಾವುದೇ ಹಕ್ಕುಗಳು ಇರುವುದಿಲ್ಲ.

ಹಿಂದೂ ಅವಿಭಕ್ತ ಕುಟುಂಬದ ಅನುಕೂಲಗಳು: ಹಿಂದೂ ಅವಿಭಕ್ತ ಕುಟುಂಬಕ್ಕೆ ಪ್ರತ್ಯೇಕ ಪಾನ್‌ ಕಾರ್ಡ್ ಪಡೆಯಬಹುದು. ವ್ಯಾಪಾರ ಮಾಡುವುದರಿಂದ ತೆರಿಗೆಯಿಂದ ಅನುಕೂಲಗಳು ರಿಯಾಯಿತಿಗಳು ಸಿಗುತ್ತವೆ.
ಒಬ್ಬನೇ ತೀರ್ಮಾನದಿಂದ ಬೇಗ ನಿರ್ಣಯ ಗಳು ಆಗುತ್ತವೆ. ಜಗಳ – ಮನಸ್ಥಾಪ ಇರಲ್ಲ.ಒಬ್ಬ ವ್ಯಕ್ತಿ ಮೃತಪಟ್ಟ ನಂತರ ಹಿರಿಯರಿಗೆ ಅಧಿಕಾರ ವರ್ಗಾವಣೆ ಆಗುತ್ತದೆ.ಹಿಂದೂ ಅವಿಭಕ್ತ ಕುಟುಂಬದ ಹೆಸರಿನಲ್ಲಿ ಯಾವುದೇ ವಹಿವಾಟು ನಡೆಸಬಹುದು.ಸದಸ್ಯರಿಗೆ ಹಕ್ಕು ಬಾಧ್ಯತೆ ಮಿತಿ ಇರುತ್ತದೆ.

ಹಿಂದೂ ಅವಿಭಕ್ತ ಕುಟುಂಬದಲ್ಲಿ ಸದಸ್ಯರಿಗೆ ಭಾಗದಲ್ಲಿ ಸಮಪಾಲು ಆಸ್ತಿ ಸಿಗುತ್ತದೆ. ಅವರ ಭಾಗದ ಆಸ್ತಿ, ಹಿಂದೂ ಅವಿಭಕ್ತ ಕುಟುಂಬದಲ್ಲಿ ವ್ಯಾಪಾರ – ಬೇಡ ಎನಿಸಿದರೆ ಹಿಂದೂ ಅವಿಭಕ್ತ ಕುಟುಂಬವನ್ನು ರದ್ದು ಪಡಿಸಬಹುದು.

ಹಿಂದೂ ಅವಿಭಕ್ತ ಕುಟುಂಬದಲ್ಲಿ ವಿಧೇಯತೆ ಮತ್ತು ವಿನೇಯತೆ ಅತಿ ಮುಖ್ಯ.ಎಲ್ಲಾ ಸದಸ್ಯರ ಗುರಿ ಒಂದೇ ಆಗಿರುವ ಕಾರಣ ವಿವಾದಗಳು ಉಂಟಾಗುವುದಿಲ್ಲ.ಹಿಂದೂ ಅವಿಭಕ್ತ ಕುಟುಂಬ ವಹಿವಾಟಿನ ಅನಾನುಕೂಲಗಳು:ಪಿತ್ರಾರ್ಜಿತ ಆಸ್ತಿ ಇರುವ ಕಾರಣ ಆದಾಯದ ಮೂಲಗಳು ಮಿತಿಯಲ್ಲಿರುತ್ತವೆ.
ಕರ್ತನ ನಿರ್ಧಾರಗಳ ಮೇಲೆ ಅವಲಂಬನೆ.ಅನಕ್ಷರಕಸ್ತನು ಹಿಂದೂ ಅವಿಭಕ್ತ ಕುಟುಂಬದ ಮುಖ್ಯಸ್ಥರಾಗಿದ್ದರೆ ತೀರ್ಮಾನ ಕೈಗೊಳ್ಳುವಲ್ಲಿ ಲೋಪಗಳು ಆಗಬಹುದು.

ಸದಸ್ಯರ ತೀರ್ಮಾನಗಳಿಗೆ ಹೆಚ್ಚು ಪ್ರಾಮುಖ್ಯತೆ ಇರುವುದಿಲ್ಲ.ಬುದ್ಧಿವಂತಿಕೆಗೆ ಆದ್ಯತೆ ಸಿಗಲ್ಲ.ಅವಿಭಕ್ತ ಕುಟುಂಬದಲ್ಲಿ ವ್ಯಾಫಾರ ವೃದ್ಧಿಗೆ ತಡೆಗಳು ಎದುರಾಗಬಹುದು ಕೆಲವೊಮ್ಮೆ ಕತೃ ಅಧಿಕಾರ ಅಧಿಕಾರ ದುರುಪಯೋಗ ಪಡಿಸಿಕೊಳ್ಳಬಹುದು.